RNI NO. KARKAN/2006/27779|Friday, August 1, 2025
You are here: Home » breaking news » ಬೆಳಗಾವಿ:ಅಬಕಾರಿ ಪೊಲೀಸರ ಕಾರ್ಯಾಚರಣೆ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಯುವಕನ ಸಾವು

ಬೆಳಗಾವಿ:ಅಬಕಾರಿ ಪೊಲೀಸರ ಕಾರ್ಯಾಚರಣೆ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಯುವಕನ ಸಾವು 

ಅಬಕಾರಿ ಪೊಲೀಸರ ಕಾರ್ಯಾಚರಣೆ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಯುವಕನ ಸಾವು

ಬೆಳಗಾವಿ ಡಿ 2: ಅಬಕಾರಿ ಪೊಲೀಸರ ಕಾರ್ಯಾಚರಣೆ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಯುವಕನೋರ್ವ ಬಾವಿಗೆ ಬಿದ್ದು ಸಾವನ್ನಪ್ಪಿದ್ದ ಘಟನೆ ನಡೆದಿದೆ

ಅಡಿವೆಪ್ಪಾ (24) ಸಾವಿಗೀಡಾದ ಯುವಕ. ಬೆಳಗಿನ ಜಾವ ಕಳ್ಳಭಟ್ಟಿ ತೆಗೆದುಕೊಂಡು ಹೋಗುವಾಗ ಪೊಲೀಸರು ಅಟ್ಯಾಕ್‌ ಮಾಡಿದ್ದು, ತಪ್ಪಿಸಿಕೊಳ್ಳುವ ಭರದಲ್ಲಿ ಬಾವಿಗೆ ಹಾರಿದ್ದರಿಂದ ಈ ಅನಾಹುತ ಜರುಗಿದೆ ಎನ್ನಲಾಗುತ್ತಿದೆ
ಆದರೆ ಯುವಕನ ಸಾವಿಗೆ ಪೊಲೀಸರೇ ಕಾರಣ ಎಂದು ದೂರಿರುವ ಯುವಕನ ಸಂಬಂಧಿಕರು ಅಬಕಾರಿ ಪೊಲೀಸರ ಮೇಲೆ ಕಲ್ಲೂ ತೂರಾಟಕ್ಕೆ ಯತ್ನಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ ಶವಪರೀಕ್ಷೆ ನಡೆಸಲು ಅಡ್ಡಿ ಪಡಿಸಿದ್ದು, ಸ್ಥಳಕ್ಕೆ ಕಾಕತಿ ಪೊಲೀಸರು ಆಗಮಿಸಿದ್ದಾರೆ.

ಯುವಕ ಸಾವಿನಿಂದ ಆಕ್ರೋಶಗೊಂಡಿರುವ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅಬಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಕೈಯಲ್ಲಿ ಕಲ್ಲುಗಳನ್ನು ಹಿಡಿದು ಜನರು ದಾಳಿಗೆ ಮುಂದಾಗುತ್ತಿದ್ದಾರೆ. ಈಗಾಗಲೇ ಪೊಲೀಸರ ಕಾರಿನ ಗಾಜುಗಳನ್ನು ಸಹ ಪುಡಿಗೊಳಿಸಿದ್ದಾರೆ.

ಮುತ್ತಿಗೆ ಹಾಕಲು ಹೊರಟ ಜನರನ್ನು ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದು, ರೊಚ್ಚಿಗೆದ್ದ ಜನರಿಂದ ಪೊಲೀಸರೊಂದಿಗೆ ವಾಗ್ವಾದ ನಡೆಯುತ್ತಿದೆ. ಇನ್ನೊಂದೆಡೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನಾ ಸ್ಥಳ ಮಾರ್ಚೂರಿಗೆ ಡಿಸಿಪಿ ಸೀಮಾ ಲಾಟಕರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾವನ್ನಪ್ಪಿದ ಯುವಕ ಅಡವೇಪ್ಪ ಕಳ್ಳಭಟ್ಟಿ ಸಾಗಿಸುತ್ತಿದ್ದ. ಅಬಕಾರಿ ಕಾರ್ಯಾಚರಣೆ ವೇಳೆ ಈ ಘಟನೆ ನಡೆದಿದೆ. ಯುವಕ ಬಾವಿಗೆ ಬಿದ್ದು ಗಾಯಗೊಂಡು ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದರು.

Related posts: