RNI NO. KARKAN/2006/27779|Tuesday, January 27, 2026
You are here: Home » breaking news » ಘಟಪ್ರಭಾ:ವೋಲ್ಕಾರ್ಟ್ ಅಕ್ಯಾಡೆಮಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಘಟಪ್ರಭಾ:ವೋಲ್ಕಾರ್ಟ್ ಅಕ್ಯಾಡೆಮಿ ಜಿಲ್ಲಾ ಮಟ್ಟಕ್ಕೆ ಆಯ್ಕೆ 

ವೋಲ್ಕಾರ್ಟ್ ಅಕ್ಯಾಡೆಮಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಘಟಪ್ರಭಾ: ಇತ್ತಿಚೀಗೆ ಗೋಕಾಕದಲ್ಲಿ ನಡೆದ ಪ್ರೌಢಾಲೆಗಳ ತಾಲೂಕಾ ಮಟ್ಟದ ಬಾಸ್ಕೆಟ್‍ಬಾಲ ಪಂದ್ಯಾವಳಿಯಲ್ಲಿ ಸಮೀಪದ ಗೋಕಾಕಫಾಲ್ಸ ದ  ದಿ.ವೋಲ್ಕಾರ್ಟ್ ಅಕ್ಯಾಡೆಮಿ ಪ್ರೌಢಶಾಲಾ ಬಾಸ್ಕೆಟ್ ಬಾಲ್ ತಂಡ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ವಿದ್ಯಾರ್ಥಿಗಳ ಸಾಧನೆಗೆ ಗೊಕಾಕ ಟೆಕ್ಸ್‍ಟೈಲ್ಸ್ ಮಿಲ್ಲಿನ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಹಾಗೂ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಆರ್.ಆರ್. ಪಾಟೀಲ, ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕ ಪ್ರದೀಪ ಅಂಧಾರೆ, ಕಾರ್ಮಿಕ ಅಧಿಕಾರಿ ಚಿದಂಬರ ಕುಲಕರ್ಣಿ ಅವರು ಆಟಗಾರರಿಗೆ ಪ್ರೇರಣೆ ನೀಡಿದ ಮುಖ್ಯೋಪಾಧ್ಯಾಯ ಎ.ಎಂ. ನಾಯಿಕ, ಜಿ.ಎನ್.ಸಾಂಗಲಿ, ದೈಹಿಕ ಶಿಕ್ಷಣ ಶಿಕ್ಷಕ ಬಿ.ಎ. ಬರಗಾಲಿ ಹಾಗೂ ಮಾರ್ಗದರ್ಶಕ ಪ್ರಶಾಂಕ ಓಬಕೂಡ ಅವರನ್ನು ಶ್ಲಾಘಿಸಿದ್ದಾರೆ.

Related posts: