RNI NO. KARKAN/2006/27779|Sunday, June 1, 2025
You are here: Home » breaking news » ಚಿಕ್ಕೋಡಿ:ಶಾಲೆಗೆ ತೆರಳಿದ್ದ ಬಾಲಕಿಯರು ನಾಪತ್ತೆ : ಬೋರಗಾಂವ್ ಗ್ರಾಮದಲ್ಲಿ ಘಟನೆ

ಚಿಕ್ಕೋಡಿ:ಶಾಲೆಗೆ ತೆರಳಿದ್ದ ಬಾಲಕಿಯರು ನಾಪತ್ತೆ : ಬೋರಗಾಂವ್ ಗ್ರಾಮದಲ್ಲಿ ಘಟನೆ 

ಶಾಲೆಗೆ ತೆರಳಿದ್ದ ಬಾಲಕಿಯರು ನಾಪತ್ತೆ : ಬೋರಗಾಂವ್ ಗ್ರಾಮದಲ್ಲಿ ಘಟನೆ

ಚಿಕ್ಕೋಡಿ ಡಿ 1: ಶಾಲೆಗೆ ಹೋಗಿದ್ದ ಇಬ್ಬರು ಬಾಲಕಿಯರು ನಾಪತ್ತೆಯಾದ ಘಟನೆ ತಾಲೂಕಿನ ಬೋರಗಾಂವ್ ಗ್ರಾಮದಲ್ಲಿ ನಡೆದಿದೆ.

ನಾಪತ್ತೆಯಾದ ಬಾಲಕಿಯರನ್ನು ಶಾಲು ಮಿಶ್ರಾ (15) ಆರತಿ ಪಾಟೀಲ (15) ಎಂದು ಗುರುತಿಸಲಾಗಿದೆ. ಬಾಲಕಿಯರು ಬೋರಗಾಂವ್ ಗ್ರಾಮದ ಖಾಸಗಿ ಶಾಲೆಯಲ್ಲಿ 9 ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಶಾಲೆಗೆ ಹೋಗಿ ಬರುವುದಾಗಿ ಹೇಳಿಹೋದ ಬಾಲಕಿಯರು ಮನೆಗೆ ಮರಳಿ ಬಂದಿಲ್ಲ. ಈ ಸಂಬಂಧ ಬಾಲಕಿ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತು ಸದಲಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಯ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಇನ್ನೂ ಬಾಲಕಿಯರ ಬಗ್ಗೆ ಸುಳಿವು ಸಿಕ್ಕಲ್ಲಿ ಸದಲಗಾ ಪೊಲೀಸ್ ಠಾಣೆ ಸಂಪರ್ಕಿಸಬಹುದಾಗಿದೆ.

Related posts: