RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ;ನೆರೆ ಸಂತ್ರಸ್ತರಿಗೆ ಶಾಶ್ವತ ಸುರೂ ಒದಗಿಸಲು ಪ್ರಾಮಾಣಿಕ ಪ್ರಯತ್ನ : ಮಾಜಿ ಸಚಿವ ರಮೇಶ ಭರವಸೆ ನಮ್ಮ ಬೆಳಗಾವಿ ಸು.

ಗೋಕಾಕ;ನೆರೆ ಸಂತ್ರಸ್ತರಿಗೆ ಶಾಶ್ವತ ಸುರೂ ಒದಗಿಸಲು ಪ್ರಾಮಾಣಿಕ ಪ್ರಯತ್ನ : ಮಾಜಿ ಸಚಿವ ರಮೇಶ ಭರವಸೆ ನಮ್ಮ ಬೆಳಗಾವಿ ಸು. 

ನೆರೆ ಸಂತ್ರಸ್ತರಿಗೆ ಶಾಶ್ವತ ಸುರೂ ಒದಗಿಸಲು ಪ್ರಾಮಾಣಿಕ ಪ್ರಯತ್ನ : ಮಾಜಿ ಸಚಿವ ರಮೇಶ ಭರವಸೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 13 :

 

ಘಟಪ್ರಭಾ ನದಿಗೆ ಉಂಟಾದ ಭಾರಿ ಪ್ರಮಾಣದ ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡ ನಿರಾಶ್ರಿತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವದು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು

ಮಂಗಳವಾರದಂದು ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿಯಾಗಿ ಕೊಣ್ಣೂರ ಪುರಸಭೆ ಆವರಣದಲ್ಲಿ ಅಧಿಕಾರಿಗಳ, ಪುರಸಭೆ ಸದಸ್ಯರ ಹಾಗೂ ಸಾರ್ವಜನಿಕರ ಸಭೆಯಲ್ಲಿ ಭಾಗವಹಿಸಿ ನಿರಾಶ್ರಿತರಿಗೆ ಪರಿಹಾರ ಚೆಕ್ ಗಳನ್ನು ವಿತರಿಸಿ ಅವರು ಮಾತನಾಡಿದರು

ಪ್ರವಾಹದಿಂದ ಮುಳುಗಡೆ ಗೊಂಡ ಪ್ರದೇಶವನ್ನು ಸರಕಾರ ಪ್ರವಾಹ ಪೀಡಿತ ಪ್ರದೇಶ ಎಂದು ಘೋಷಿಸಿರುವದರಿಂದ ಅವರ ಪುನರ್ವಸತಿ ನಮಗೆ ದೊಡ್ಡ ಸವಾಲಾಗಿದೆ.

ಸುಮಾರು 60 ಎಕರೆ ಪ್ರದೇಶದಲ್ಲಿ ಕೊಣ್ಣೂರು ಮತ್ತು ಸುತ್ತಮುತ್ತಲಿನ ಹಾನಿಗೋಳಗಾದ ಪ್ರದೇಶದ ನಿರಾಶ್ರಿತರಿಗೆ ಶಾಶ್ವತವಾಗಿ ಮನೆಗಳನ್ನು ನಿರ್ಮಿಸಲು ಸರಕಾರಕ್ಕೆ ಒತ್ತಾಯಿಸಿ ಕಾರ್ಯಪ್ರವೃತವಾಗಲಾಗುವದು . ಅಲ್ಲಿಯವರೆಗೆ ನಿರಾಶ್ರಿತರಿ ತಾತ್ಕಾಲಿಕವಾಗಿ ಶೇಡಗಳನ್ನು ನಿರ್ಮಿಸಿ ಕೋಡಲಾಗುವದು ಅವರ ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸಿಲು 3800 ರೂ ಮೊತ್ತವನ್ನು ನೀಡಲಾಗಿದೆ . ನಂತರ ಬಿದ್ದುಹೋಗಿರುವ ಮನೆಗಳನ್ನು ಪರಿಶೀಲನೆ ಮಾಡಿ ನಿರಾಶ್ರಿತರಿಗೆ ಶಾಶ್ವತವಾಗಿ ಸುರೂಗಳನ್ನು ನಿರ್ಮಿಸಿಕೊಡಲಾಗುವದು .

ಈಗಾಗಲೇ ಹಾಳಾದ ರಸ್ತೆಗಳನ್ನು , ಸ್ವಚ್ಛತೆ, ವಿದ್ಯುತ್ ವ್ಯವಸ್ಥೆ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳ ಕಾರ್ಯಗಳನ್ನು ಕೈಗೋಳಲು ಕೊಣ್ಣೂರು ಪುರಸಭೆಗೆ 15 ಕೋಟಿ ಅನುದಾನ ಬಿಡುಡಗೆಯಾಗಿದೆ ಆ ಕಾರ್ಯವನ್ನು ಸಹ ತಕ್ಷಣದಲ್ಲಿ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು .
ಈ ಸಂದರ್ಭದಲ್ಲಿ ಗೋಕಾಕ ತಹಶೀಲ್ದಾರ್ ಪ್ರಕಾರ ಹೊಳೆಪ್ಪಗೋಳ, ಮುಖ್ಯಾಧಿಕಾರಿ ಶಿವಾನಂದ ಹಿರೇಮಠ, ಪುರಸಭೆ ಸದಸ್ಯರಾದ ಪ್ರಕಾಶ ಕರನಿಂಗ, ವಿನೋದ್ ಕರನಿಂಗ, ಎಸ್.ಎ.ಕೋತವಾಲ, ಧನ್ಯಕುಮಾರ ಮ್ಯಾಗೇರಿ ಸೇರಿದಂತೆ ಇತರರು ಇದ್ದರು.

Related posts: