RNI NO. KARKAN/2006/27779|Friday, May 9, 2025
You are here: Home » breaking news » ಗೋಕಾಕ:ಭಾಷೆ ಬೆಳೆದರೆ ಸಂಸ್ಕಂತಿಯೂ ಬೆಳೆಯುತ್ತದೆ : ಗಂಗಾಧರ ಮಳಗಿ

ಗೋಕಾಕ:ಭಾಷೆ ಬೆಳೆದರೆ ಸಂಸ್ಕಂತಿಯೂ ಬೆಳೆಯುತ್ತದೆ : ಗಂಗಾಧರ ಮಳಗಿ 

ಭಾಷೆ ಬೆಳೆದರೆ ಸಂಸ್ಕಂತಿಯೂ ಬೆಳೆಯುತ್ತದೆ : ಗಂಗಾಧರ ಮಳಗಿ

ಗೋಕಾಕ ನ 25: ಕನ್ನಡ ಬರಿಯ ಭಾಷೆಯಲ್ಲ, ಅದು ಸಂಸ್ಕಂತಿಯೂ ಹೌದು. ಭಾಷೆ ಬೆಳೆದರೆ ಸಂಸ್ಕಂತಿಯೂ ಬೆಳೆಯುತ್ತದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಗಂಗಾಧರ ಮಳಗಿ ಹೇಳಿದರು.
ಅವರು ಶನಿವಾರದಂದು ನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸೃಜನಶೀಲ ಸಾಹಿತ್ಯ ಬಳಗ ತಾಲೂಕಾ ಘಟಕ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಮತ್ತು ಜಿಲ್ಲಾ ಮಟ್ಟದ ಕವಿಗೋಷ್ಟಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕನ್ನಡವನ್ನು ಕಟ್ಟಿ, ಉಳಿಸಿ ಬೆಳೆಸುವಲ್ಲಿ ಕನ್ನಡಿಗರ ಪಾತ್ರ ಬಹುಮುಖ್ಯ. ಜನ್ಮ ಕೊಟ್ಟ ತಾಯಿಯಂತೆ ನಮ್ಮ ಮಾತೃಭಾಷೆಯನ್ನು ಪ್ರೀತಿಸಬೇಕು. ಮಾತೃಭಾಷೆಯಲ್ಲಿ ಶಿಕ್ಷಣ ಪಡೆದರೆ ಕಲಿಕಾ ಸಾಮಥ್ರ್ಯ ಹೆಚ್ಚಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಓದಿದವರು ದಡ್ಡರೆಂಬ ಕಲ್ಪನೆ ಸರಿಯಲ್ಲ. ರಾಜ್ಯದಲ್ಲಿ ವಿವಿಧ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕು. ನಾಡು, ನುಡಿಗೆ ಎಲ್ಲರೂ ಗೌರವಿಸಿ ಅದನ್ನು ಬೆಳೆಸಬೇಕೆಂದು ಕರೆ ನೀಡಿದರು.
ಉಪನ್ಯಾಸ ನೀಡಿದ ನೇಜ ಗ್ರಾಮದ ಚಿಂತಕ ವಿರೇಶ ಪಾಟೀಲ ಅವರು ಭವ್ಯವಾದ ಕನ್ನಡ ಸಂಸ್ಕøತಿಕ ವಾರಸುದಾರರಾದ ನಾವು ಅದನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.

ಅಧ್ಯಕ್ಷತೆಯನ್ನು ಹಿರಿಯ ಲೇಖಕಿ ಶ್ರೀಮತಿ ಪುಷ್ಪಾ ಮುರಗೋಡ ವಹಿಸಿದ್ದರು.

ವೇದಿಕೆ ಮೇಲೆ ಸೃಜನಶೀಲ ಸಾಹಿತ್ಯ ಬಳಗದ ರಾಜ್ಯ ಕಾರ್ಯದರ್ಶಿ ಶ್ರೀಮತಿ ಭಾರತಿ ಮದಭಾಂವಿ, ಜಿಲ್ಲಾ ಘಟಕದ ಗೌರವಾಧ್ಯಕ್ಷ ದಾದಾಪೀರ ಹಾಜಿ, ಜಿಲ್ಲಾಧ್ಯಕ್ಷ ಚಂದ್ರಶೇಖರ ಗಂಗಣ್ಣವರ, ತಾಲೂಕಾ ಅಧ್ಯಕ್ಷ ಬಸವರಾಜ ಭಜಂತ್ರಿ, ಖ್ಯಾತ ಚಿಕ್ಕಮಕ್ಕಳ ತಜ್ಞ ಡಾ. ಬಿ.ಎಸ್.ಮದಭಾಂವಿ, ಬಸವಜ್ಯೋತಿ ಐಟಿಐ ಅಧ್ಯಕ್ಷ ಅಶೋಕ ಲಗಮಪ್ಪಗೋಳ, ಪ್ರಭಾರಿ ಮುಖ್ಯೋಧ್ಯಾಪಕ ಮಲ್ಲಿಕಾರ್ಜುನ ವಕ್ಕುಂದ ಇದ್ದರು.
ಶಕೀಲಅಹಮ್ಮದ ಪೀರಜಾದೆ ಸ್ವಾಗತಿಸಿದರು. ಶಕುಂತಲಾ ಹಿರೇಮಠ ಹಾಗೂ ಚಿದಾನಂದ ಹೀಗಾರ ನಿರೂಪಿಸಿದರು. ವೈ.ಎಚ್.ಕುರುಬಗಟ್ಟಿ ವಂದಿಸಿದರು. ನಂತರ ಜಿಲ್ಲಾ ಮಟ್ಟದ ಕವಿಗೋಷ್ಟಿ ಜರುಗಿತು.

Related posts: