RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಗುರುವಿನ ಆದರ್ಶದಿಂದ ಸಾಧಕರಾಗಲು ಸಾಧ್ಯ : ಡಿ.ರಾಮದಾಸ್

ಗೋಕಾಕ:ಗುರುವಿನ ಆದರ್ಶದಿಂದ ಸಾಧಕರಾಗಲು ಸಾಧ್ಯ : ಡಿ.ರಾಮದಾಸ್ 

ಗುರುವಿನ ಆದರ್ಶದಿಂದ ಸಾಧಕರಾಗಲು ಸಾಧ್ಯ : ಡಿ.ರಾಮದಾಸ್

ಗೋಕಾಕ ಸೆ 5 : ಡಾ. ರಾಧಾಕೃಷ್ಣನ್ ಅವರ ಆದರ್ಶಗಳನ್ನು ಶಿಕ್ಷಕರು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರನ್ನು ದೇಶಕ್ಕೆ ನೀಡುವಂತೆ ಎಸ್‍ಎಲ್‍ಜೆ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಿ.ರಾಮದಾಸ್ ಹೇಳಿದರು.
ಬುಧವಾರದಂದು ನಗರದ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಪದವಿ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರತಿಯೊಬ್ಬ ವ್ಯಕ್ತಿಯ ಸಾಧನೆ ಹಿಂದೆ ಗುರು ಇದ್ದು, ಗುರುವಿನ ಆದರ್ಶದಿಂದ ಸಾಧಕರಾಗಲು ಸಾಧ್ಯ. ಎಲ್ಲಬಲ್ಲ ಸದ್ಗುರುವಿಗೆ ನಮಸ್ಕರಿಸಿ ಅವರ ಸ್ಮರಣೆಯಿಂದ ಜೀವನವನ್ನು ಪಾವನ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.


ವೇದಿಕೆ ಮೇಲೆ ಪ್ರಾಚಾರ್ಯ ಐ.ಎಸ್.ಪವಾರ, ಉಪನ್ಯಾಸಕರಾದ ಡಿ.ಬಿ.ತಳವಾರ, ಎನ್.ಎಮ್.ತೋಟಗಿ, ಎನ್.ಎಸ್.ಬೆನಕಟ್ಟಿ ಇದ್ದರು.
ವಿದ್ಯಾರ್ಥಿನಿಯರಾದ ಅಕ್ಷತಾ ಶಹಾಪೂರಮಠ ಸ್ವಾಗತಿಸಿದರು. ರಾಣಿ ಜಿದ್ದಿಮನಿ, ತೇಜೇಶ್ವನಿ ಬಡಿಗೇರ ನಿರೂಪಿಸಿದರು. ಅನುರಾಧಾ ನಾಯಿಕ ವಂದಿಸಿದರು.

Related posts: