RNI NO. KARKAN/2006/27779|Sunday, November 2, 2025
You are here: Home » breaking news » ಗೋಕಾಕ:ಚಿಕ್ಕ ಮಕ್ಕಳ ಬಾಳಿನ ಬೆಳಕು ಡಾ. ರಾಜಶೇಖರ ಸುಳೇಬಾವಿ

ಗೋಕಾಕ:ಚಿಕ್ಕ ಮಕ್ಕಳ ಬಾಳಿನ ಬೆಳಕು ಡಾ. ರಾಜಶೇಖರ ಸುಳೇಬಾವಿ 

ಚಿಕ್ಕ ಮಕ್ಕಳ ಬಾಳಿನ ಬೆಳಕು ಡಾ. ರಾಜಶೇಖರ ಸುಳೇಬಾವಿ

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (RBSK) ಮಕ್ಕಳ ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸುವ ಮತ್ತು ಸಮುದಾಯದ ಎಲ್ಲಾ ಮಕ್ಕಳಿಗೆ ಸಮಗ್ರ ಆರೈಕೆಯನ್ನು ಒದಗಿಸುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ಹುಟ್ಟಿನಿಂದ 18 ವರ್ಷ ವಯಸ್ಸಿನವರೆಗಿನ ಮಕ್ಕಳನ್ನು ನಾಲ್ಕು Ds- ಜನನದ ಸಮಯದಲ್ಲಿನ ದೋಷಗಳು, ರೋಗಗಳು, ನ್ಯೂನತೆಗಳು ಮತ್ತು ಅಭಿವೃದ್ಧಿ ವಿಳಂಬಗಳಿಗಾಗಿ ತಪಾಸಣೆ ಮಾಡುವುದನ್ನು ಒಳಗೊಂಡಿರುತ್ತದೆ, ಇದು ಆರಂಭಿಕ ಪತ್ತೆ ಮತ್ತು ಉಚಿತ ಚಿಕಿತ್ಸೆ ಮತ್ತು ನಿರ್ವಹಣೆಗಾಗಿ 32 ಸಾಮಾನ್ಯ ಆರೋಗ್ಯ ಪರಿಸ್ಥಿತಿಗಳನ್ನು ಒಳಗೊಂಡಿದೆ, ಇದರಲ್ಲಿ ತೃತೀಯ ಹಂತದಲ್ಲಿ ಶಸ್ತ್ರಚಿಕಿತ್ಸೆಗಳು ಸೇರಿವೆ. ಗುರುತಿಸಲಾದ ಆರೋಗ್ಯ ಪರಿಸ್ಥಿತಿಗಳೊಂದಿಗೆ ರೋಗನಿರ್ಣಯ ಮಾಡಿದ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ ಆರಂಭಿಕ ಹಸ್ತಕ್ಷೇಪ ಸೇವೆಗಳು ಮತ್ತು ಅನುಸರಣಾ ಆರೈಕೆಯನ್ನು ಒದಗಿಸಲಾಗುತ್ತದೆ. ಹೃದಯ ಸಂಬಂಧಿ ಪ್ರಕರಣಗಳು, ಜನ್ಮಜಾತ ದೋಷಗಳ ಚಿಕಿತ್ಸೆಗಳಂತಹ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಖಾಸಗಿ ಎಂಪನೇಲ್ಡ್ ಆಸ್ಪತ್ರೆಗಳ ಸೇವೆಗಳನ್ನು ಬಳಸಿಕೊಳ್ಳಲು ಈ ಕಾರ್ಯಕ್ರಮವು ರಾಜ್ಯಗಳಿಗೆ ನಮ್ಯತೆಯನ್ನು ನೀಡುತ್ತದೆ, ಇದರಿಂದಾಗಿ ಮಕ್ಕಳಿಗೆ ಸಕಾಲಿಕ ಆರೈಕೆಯನ್ನು ಒದಗಿಸಲಾಗುತ್ತದೆ. ಈ ಎಲ್ಲಾ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತದೆ, ಹೀಗಾಗಿ ಅವರ ಕುಟುಂಬಗಳು ಚಿಕಿತ್ಸೆಗಾಗಿ ಮಾಡುವ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮಕ್ಕಳ ತಪಾಸಣೆಗೆ ಅನುಕೂಲವಾಗುವಂತೆ, ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾದ 0 ರಿಂದ 6 ವರ್ಷ ವಯಸ್ಸಿನ ಮಕ್ಕಳನ್ನು ಪರೀಕ್ಷಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದೊಂದಿಗೆ ಮತ್ತು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ದಾಖಲಾದ ಮಕ್ಕಳನ್ನು ಪರೀಕ್ಷಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದೊಂದಿಗೆ ಬಲವಾದ ಒಮ್ಮುಖವಿದೆ. ನವಜಾತ ಶಿಶುಗಳನ್ನು ಆರೋಗ್ಯ ಸೌಲಭ್ಯಗಳಲ್ಲಿ ವೈದ್ಯರು ಮತ್ತು ಆಶಾ (ಬಾಹ್ಯ ಆರೋಗ್ಯ ಕಾರ್ಯಕರ್ತೆ) ಮನೆ ಭೇಟಿಯ ಸಮಯದಲ್ಲಿ ಆರೋಗ್ಯ ಸೌಲಭ್ಯಗಳಲ್ಲಿ ಜನನ ದೋಷಗಳಿಗಾಗಿ ಪರೀಕ್ಷಿಸಲಾಗುತ್ತದೆ.
ಜಿಲ್ಲಾ ಆರಂಭಿಕ ಮಧ್ಯಸ್ಥಿಕೆ ಕೇಂದ್ರಗಳು, ಅಭಿವೃದ್ಧಿ ಪೂರಕ ಆರೈಕೆಯನ್ನು ನೀಡುವ ಬಹುಸಂಖ್ಯೆಯ ಸೇವೆಗಳನ್ನು ಹೊಂದಿದ್ದು, ಉಲ್ಲೇಖಿತ ಮತ್ತು ಚಿಕಿತ್ಸೆ ಪಡೆದ ಪ್ರಕರಣಗಳ ಅನುಸರಣಾ ನಿರ್ವಹಣೆಗಾಗಿ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. ಶಸ್ತ್ರಚಿಕಿತ್ಸಾ ನಿರ್ವಹಣೆ ಅಗತ್ಯವಿದ್ದರೆ, ಈ ಘಟಕಗಳು ಈ ಮಕ್ಕಳನ್ನು ತೃತೀಯ ಹಂತದ ಆರೋಗ್ಯ ಸೇವೆಗಳೊಂದಿಗೆ ಸಂಪರ್ಕಿಸುತ್ತವೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಗುರುತಿಸಲಾದ ಅಂಗವಿಕಲ ಮಕ್ಕಳಿಗೆ ಶ್ರವಣ ಸಾಧನಗಳು/ಇಂಪ್ಲಾಂಟ್‌ಗಳಂತಹ ಉಪಕರಣಗಳನ್ನು ಪ್ರಾಯೋಜಿಸುವ ಮೂಲಕ ಬೆಂಬಲವನ್ನು ಒದಗಿಸುತ್ತಿದೆ.
ದೇಶಾದ್ಯಂತ ಸುಮಾರು 270 ಮಿಲಿಯನ್ ಮಕ್ಕಳನ್ನು ಹಂತ ಹಂತವಾಗಿ ಒಳಗೊಳ್ಳುವ ನಿರೀಕ್ಷೆಯಿತ್ತು ಮತ್ತು ಇಲ್ಲಿಯವರೆಗೆ (2014 ರಿಂದ), ಉಪ-ಜಿಲ್ಲಾ ಮಟ್ಟದಿಂದ ಕಾರ್ಯನಿರ್ವಹಿಸುತ್ತಿರುವ 11,200 ಮೊಬೈಲ್ ಆರೋಗ್ಯ ತಂಡಗಳ ಮೂಲಕ ನಾವು ಸುಮಾರು 800 ಮಿಲಿಯನ್ ಮಕ್ಕಳನ್ನು ತಲುಪಿದ್ದೇವೆ, ಇವೆಲ್ಲವೂ ದೇಶದ ಆರೋಗ್ಯಕರ ಭವಿಷ್ಯದತ್ತ ಸಾಗಿವೆ.

ಈ ಕಾರ್ಯಕ್ರಮದ ಅಡಿಯಲ್ಲಿ ಪರೀಕ್ಷಿಸಲಾದ ಆರೋಗ್ಯ ಸ್ಥಿತಿಗಳು
 ಹುಟ್ಟಿನಿಂದಲೇ ಉಂಟಾಗುವ ದೋಷಗಳು
ನರ ಕೊಳವೆಯ ದೋಷ
ಡೌನ್ ಸಿಂಡ್ರೋಮ್
ಸೀಳು ತುಟಿ ಮತ್ತು ಅಂಗುಳ / ಸೀಳು ಅಂಗುಳ ಮಾತ್ರ 
ಟ್ಯಾಲಿಪ್ಸ್ (ಕ್ಲಬ್ ಫೂಟ್)
ಸೊಂಟದ ಡಿಸ್ಪ್ಲಾಸಿಯಾ ಬೆಳವಣಿಗೆ
ಜನ್ಮಜಾತ ಕಣ್ಣಿನ ಪೊರೆ
ಜನ್ಮಜಾತ ಕಿವುಡುತನ
ಜನ್ಮಜಾತ ಹೃದಯ ಕಾಯಿಲೆಗಳು
ಅವಧಿಪೂರ್ವ ರೆಟಿನೋಪತಿ
ಕೊರತೆಗಳು
ರಕ್ತಹೀನತೆ ವಿಶೇಷವಾಗಿ ತೀವ್ರ ರಕ್ತಹೀನತೆ
ವಿಟಮಿನ್ ಎ ಕೊರತೆ (ಬಿಟಾಟ್ ಸ್ಪಾಟ್)
ವಿಟಮಿನ್ ಡಿ ಕೊರತೆ (ರಿಕೆಟ್ಸ್)
ತೀವ್ರ ಅಪೌಷ್ಟಿಕತೆ
ಗಾಯಿಟರ್

ಬಾಲ್ಯದ ಕಾಯಿಲೆಗಳು
ಚರ್ಮದ ಸ್ಥಿತಿಗಳು (ತುರಿಕೆ, ಶಿಲೀಂಧ್ರ ಸೋಂಕು ಮತ್ತು ಎಸ್ಜಿಮಾ)
ಓಟಿಟಿಸ್ ಮಾಧ್ಯಮ
ರುಮಾಟಿಕ್ ಹೃದಯ ಕಾಯಿಲೆ
ಪ್ರತಿಕ್ರಿಯಾತ್ಮಕ ವಾಯುಮಾರ್ಗ ಕಾಯಿಲೆ
ದಂತ ಕ್ಷಯ
ಸೆಳೆತದ ಅಸ್ವಸ್ಥತೆಗಳು
 ಅಭಿವೃದ್ಧಿ ವಿಳಂಬಗಳು
ದೃಷ್ಟಿ ದೋಷ
ಶ್ರವಣ ದೋಷ
ನರ-ಚಲನಾ ದೌರ್ಬಲ್ಯ
ಮೋಟಾರ್ ವಿಳಂಬ
ಅರಿವಿನ ವಿಳಂಬ
ಭಾಷೆ ವಿಳಂಬ
ವರ್ತನೆಯ ಅಸ್ವಸ್ಥತೆ (ಆಟಿಸಂ)
ಕಲಿಕೆಯ ಅಸ್ವಸ್ಥತೆ
ಗಮನ ಕೊರತೆಯ ಹೈಪರ್ಆಕ್ಟಿವಿಟಿ ಡಿಸಾರ್ಡರ್
ಜನ್ಮಜಾತ ಹೈಪೋಥೈರಾಯ್ಡಿಸಮ್, ಕುಡಗೋಲು ಕೋಶ ರಕ್ತಹೀನತೆ, ಬೀಟಾ ಥಲಸ್ಸೆಮಿಯಾ (ಐಚ್ಛಿಕ) ಕ್ಷಯರೋಗ
ಕುಷ್ಠರೋಗ

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮವನ್ನು (ಆರ್‌ಬಿಎಸ್‌ಕೆ) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವ ಪರಿಣಾಮ ಅಪೌಷ್ಟಿಕತೆ ಕೊರತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಬೈಲಹೊಂಗಲ ತಾಲೂಕಿನಲ್ಲಿ ಗಣನೀಯವಾಗಿ  ತಗ್ಗಿದೆ.

ಮಕ್ಕಳ ಪತ್ತೆ ಹೇಗೆ?:
ಕಡಿಮೆ ತೂಕ ಹೊಂದಿದ ಮಕ್ಕಳನ್ನು ಗುರುತಿಸುವಲ್ಲಿ ಅಂಗನವಾಡಿಗಳ ಪಾತ್ರ ಪ್ರಮುಖವಾಗಿದೆ. ಜಿಲ್ಲೆಯ ಎಲ್ಲಾ ಅಂಗನವಾಡಿಗಳಲ್ಲಿ ಪ್ರತಿ ಹದಿನೈದು ದಿನಗಳಿಗೊಮ್ಮೆ ಮಕ್ಕಳ ತೂಕ ಪರೀಕ್ಷಿಸಲಾಗುತ್ತದೆ. ಕಡಿಮೆ ತೂಕ ಇದ್ದವರ ವಿವರ ದಾಖಲಿಸುತ್ತಾರೆ. ಆರ್‌ಬಿಎಸ್‌ಕೆಯ ಆಯುರ್ವೇದಿಕ್‌ ವೈದ್ಯ ಹಾಗೂ ಸ್ಟಾಫ್‌ ನರ್ಸ್‌ ಕೂಡ ಮೇಲಿಂದ ಮೇಲೆ ಅಂಗನವಾಡಿಗಳಿಗೆ ಭೇಟಿ ಕೊಟ್ಟು ಮಾಹಿತಿ ಕಲೆ ಹಾಕುತ್ತಾರೆ. ಒಂದು ವೇಳೆ ಅಪೌಷ್ಟಿಕತೆ ಕೊರತೆಯಿಂದ ಬಳಲುತ್ತಿರುವ ಕಡಿಮೆ ತೂಕ ಹೊಂದಿರುವ ಮಕ್ಕಳು ಇದ್ದರೆ ‘ನ್ಯೂಟ್ರಿಷನ್‌ ರಿಹ್ಯಾಬಿಲಿಟೇಶನ್‌ ಸೆಂಟರ್‌’ಗೆ ಕಳಿಸಿಕೊಡಲು ಸಲಹೆ ಮಾಡುತ್ತಾರೆ. ಆರು ವರ್ಷದೊಳಗಿನ ಮಕ್ಕಳು ಈ ಕಾರ್ಯಕ್ರಮದ ವ್ಯಾಪ್ತಿಗೆ ಬರುತ್ತಾರೆ.
‘ಜಿಲ್ಲೆಯಲ್ಲಿ ಆರ್‌ಬಿಎಸ್‌ಕೆ ಉತ್ತಮ ರೀತಿಯಿಂದ ಕೆಲಸ ಮಾಡುತ್ತಿದೆ. ಅದರಲ್ಲಿ ಅನುಮಾನವೇ ಇಲ್ಲ. ಆದರೆ, ಈ ಕಾರ್ಯಕ್ರಮದ ಕುರಿತು ಗ್ರಾಮೀಣ ಭಾಗದವರಿಗೆ ಹೆಚ್ಚಿನ ಮಾಹಿತಿಯೇ ಇಲ್ಲ. ಪ್ರಚಾರದ ಕೊರತೆ ಇದೆ. ಜನರಿಗೆ ಇದರ ಮಹತ್ವ ತಿಳಿಸಿಕೊಟ್ಟರೆ ಯಾವೊಂದು ಮಗು ಕೂಡ ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುವುದಿಲ್ಲ. ಇದಕ್ಕೆ ಸರ್ಕಾರ ಸಾಕಷ್ಟು ಅನುದಾನ ನಿಗದಿಪಡಿಸಿದೆ’ ಆದರೆ ಪರಿಣಾಮವಾಗಿ ಈ ಕಾರ್ಯಕ್ರಮ ಜಾರಿಯಾಗುತ್ತಿಲ್ಲ ಆದರೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಒಂದು ಆರ್.ಬಿ‌.ಎಸ್.ಕೆ ತಂಡ ಇದನ್ನು ಪರಿಣಾಮವಾಗಿ ಜಾರಿಗೆ ತಂದು ಹಲವು ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ.ಆ ತಂಡವನ್ನು ಮುನ್ನಡೆಸುತ್ತಿರುವ ವೈದ್ಯ.ಡಾ.ರಾಜಶೇಖರ ಸುಳೇಬಾವಿ ಅವರು ಅವರ ತಂಡದೊಂದಿಗೆ ಬೈಲಹೊಂಗಲ ತಾಲೂಕಿನಲ್ಲಿ ಪರಿಣಾಮಕಾಗಿ, ಸಾರ್ವಜನಿಕರಲ್ಲಿ ಈ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಿ 2024-25 ವರ್ಷದಲ್ಲಿ ಒಟ್ಟು 13 ಮಕ್ಕಳನ್ನು ಗುರುತಿಸಿ ಅವರ ಅವಶ್ಯಕ ಚಿಕಿತ್ಸೆಯನ್ನು ಕೊಡಿಸಿ ಅವರು ಮತ್ತೆ ಆರೋಗ್ಯವಂತರಾಗುವಂತೆ ಮುತುವರ್ಜಿ ವಹಿಸಿ ತಮ್ಮನ್ನು ತಾವು ಸರ್ಮಪನಾ ಭಾವನೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ನಿಯೋಜನೆ ಗೊಂಡ ವೈದ್ಯರ ತಂಡಗಳಲ್ಲಿ ಇಬ್ಬರು ವೈದ್ಯರು ಒಬ್ಬರು ಸ್ಟಾಫ್ ನರ್ಸ , ಒಬ್ಬರು ನೇತ್ರ ಸಹಾಯಕರು ಕಾರ್ಯ ನಿರ್ವಹಿಸುತ್ತಾರೆ ಡಾ. ರಾಜಶೇಖರ್ ಸುಳೇಬಾವಿ ಇವರ ತಂಡದಲ್ಲಿ ಡಾ.ರಾಯಣ್ಣ ನಾಯ್ಕರ, ಸ್ಟಾಫ್ ನರ್ಸ ಗೌರಮ್ಮ ಹಂಚಿಹೊಳಿ,ನೇತ್ರ ಸಹಾಯಕಿ ವಿಜಯಲಕ್ಷ್ಮೀ ಬಾಣೆ ಅವರು ಬೈಲಹೊಂಗಲ ತಾಲೂಕಿನಲ್ಲಿ ತಮಗೆ ವಹಿಸಿದ ಕಾರ್ಯಕ್ಷೇತ್ರದಲ್ಲಿ ಅತ್ಯಂತ ಪರಿಣಾಮಕಾರಿ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ ಜೀವಂತ ಉದಾಹರಣೆಗೆ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದಲ್ಲಿ ಅಂಗನವಾಡಿ ಸಂಖ್ಯೆ 042 ರಲ್ಲಿ ಐದು ವರ್ಷದ ಮಗು ಆಯಿಶಾ ನಧಾಫ್ ಹೆಸರು ಬದಲಿಸಲಾಗಿದೆ ಎಂಬುವವಳ ಆರೋಗ್ಯ ಪರಿಶೀಲಿಸುವ ಸಂದರ್ಭದಲ್ಲಿ ವಯಸ್ಸಿಗೆ ತಕ್ಕಂತೆ ತೂಕ ಕಡಿಮೆ ಇರುವುದನ್ನು ಗಮನಿಸಿ ಸಸತ ಮೂರು ತಿಂಗಳು ಔಷದೋಪಚಾರ ನೀಡಿ ಪಾಲೋಆಫ್ ಮಾಡಿದ್ದಾರೆ ಆದರೂ ಸಹ ಮಗುವಿನಲ್ಲಿ ಯಾವುದೇ ಬದಲಾವಣೆ ಕಾಣದಿದ್ದಾಗ ಮಗು ಆಯಿಶಾ ನಧಾಫ ಅವರ ಪಾಲಕರನ್ನು ಕರೆಯಿಸಿ ಅವರಿಗೆ ಮಗುವಿನ ಬೆಳವಣಿಯಲ್ಲಿ ಸ್ವಲ್ಪ ತೊಂದರೆ ಕಾಣಿಸುತ್ತಿದ್ದೆ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲು ಸೂಚಿಸಿ ಕೆಲ ದೈಹಿಕ ಪರೀಕ್ಷೆಗಳನ್ನು ಮಾಡಲು ಹೇಳಿದ್ದಾರೆ. ಆದರೆ ಪಾಲಕರು ಈ ಪ್ರಕರಣವನ್ನು ಅಷ್ಟೊಂದು ಗಂಭೀರವಾಗಿ ತಗೆದುಕೊಂಡಿಲ್ಲ ಡಾಕ್ಟರ್ ಅವರು ಹಾಗೆ ಹೇಳಿದ್ದಾರೆ ಮುಂದೆ ತೋರಿಸದರೆ ಆಯಿತು ಎಂದು ಸುಮ್ಮನೆ ಕುಳಿತು ಕೊಂಡಿದ್ದಾರೆ ಆದರೆ ಡಾ.ಚಂದ್ರಶೇಖರ್ ಸುಳೇಬಾವಿ ಅವರು ಅಂಗನವಾಡಿ ಕಾರ್ತಕರ್ತೆಯನ್ನು ಸಸತವಾಗಿ ಬೆನ್ನತ್ತಿ ಮಗುವಿನ ಆರೋಗ್ಯದ ಬಗ್ಗೆ ವಿಚಾರಿಸಿ ಪಾಲಕರು ಬೆಳಗಾವಿ ಹೋಗಿ ಮಗುವಿನ ಆರೋಗ್ಯ ಸಂಬಂಧ ಕೇಳಿದ ಕೆಲ ದೈಹಿಕ ಪರೀಕ್ಷೆ ಮಾಡಿಕೊಂಡು ಬಂದಿದ್ದಾರೆ ಅಥಾವ ಇಲ್ಲ ಎಂದು ಕೇಳಿ ಅಂಗನವಾಡಿ ಕಾರ್ಯಕರ್ತೆಯನ್ನು ಅವರ ಮನೆಗೆ ಕಳುಹಿಸಿ ಆದಷ್ಟೂ ಬೇಗನೆ ಪರೀಕ್ಷೆ ಮಾಡಿಸಿ ಎಂದು ಬೆನ್ನು ಹತ್ತಿದಾಗ ಪಾಲಕರು ಬೆಳಗಾವಿಗೆ ಹೋಗಿ ಮಗುವಿನ ಕೆಲ ದೈಹಿಕ ಮಾಡಿಸಿದಾಗ ಮಗುವಿನ ಹೃದಯದಲ್ಲಿ ರಂಧ್ರ ಇರುವುದು ಪತ್ತೆಯಾಗಿದೆ ಈ ವಿಷಯ ತಿಳಿದು ಆಂತಕಕ್ಕೆ ಒಳಗಾದ ಪಾಲಕರು ಡಾ.ಚಂದ್ರಶೇಖರ್ ಸುಳೇಬಾವಿ ಅವರ ಕಡೆ ಬಂದು ಮುಂದಿನ ಚಿಕಿತ್ಸೆ ಬಗ್ಗೆ ಕೇಳಿದಾಗ ಡಾ.ಸಾಹೇಬರು ಧಾರವಾಡದ ಎಸ್.ಡಿ.ಎಮ್ ಆಸ್ಪತ್ರೆ ಸೂಚಿಸಿದ್ದಾರೆ. ಅಲ್ಲಿ ಮಗುವನ್ನು ಕರೆದುಕೊಂಡು ಹೋದ ಪಾಲಕರು ಮತ್ತೆ ಕೆಲ ದೈಹಿಕ ಪರೀಕ್ಷೆಯನ್ನು ಮಾಡಿಸಿ ಎಸ್.ಡಿ.ಎಮ್ ಬದಲು ಧಾರವಾಡದ ಬೇರೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿಸಿಜ ನಂತರ ಮಗು ಸಹಜ ಸ್ಥಿತಿಗೆ ಮರಳಿದ್ದು, ಪಾಲಕರು ಮುಂದೆ ಆಗಬಹುದಿದ್ದ ದೊಡ್ಡ ಆನಾಹುತವನ್ನು ಡಾ.ಚಂದ್ರಶೇಖರ್ ಸುಳೇಬಾವಿ ಅವರು ತಪ್ಪಸಿದರು ಎಂದು ಹೇಳಿ ಅವರನ್ನು ಹಾಡಿ ಹೋಗಳುತ್ತಿದ್ದಾರೆ. ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿರುವ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಚಿಕ್ಕ ಮಕ್ಕಳಲ್ಲಿ ಇರುವ ಹಲವಾರು ದೈಹಿಕ ನೂನ್ಯತೆಗಳನ್ನು ಕಂಡು ಹಿಡಿದು ಅವುಗಳಿಗೆ ಶಾಶ್ವತ ಪರಿಹಾರ ದೊಕಿಸಿಕೊಡುವಲ್ಲಿ ಸಫಲರಾಗುತ್ತಿದ್ದಾರೆ ಇದಕ್ಕೆ ಜೀವಂತ ಸಾಕ್ಷೀ ಬೈಲಹೊಂಗಲ ತಾಲೂಕಿನಲ್ಲಿ ಆರ್.ಬಿ.ಎಸ್.ಕೆ ಕಾರ್ಯದಡಿ ಅತ್ಯಂತ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸುತ್ತಿರುವ ಡಾ.ಚಂದ್ರಶೇಖರ್ ಸುಳೇಬಾವಿ ಮತ್ತು ತಂಡ. ಈ ತಂಡದ ಕಾರ್ಯವನ್ನು ಎಷ್ಟು ಕೊಂಡಾಡಿದರು ಸಾಲದು.ಅಷ್ಟೊಂದು ಮುತುವರ್ಜಿ ವಹಿಸಿ ತಮಗೆ ಕೊಟ್ಟ ಕಾರ್ಯವನ್ನು ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡಿ ನಿಜವಾಗಿಯೂ ವೈದ್ಯೋ ನಾರಾಯಣ ಹರಿ ಎಂಬುದನ್ನು ಅಕ್ಷರಶಃ ಸಾಬೀತು ಪಡೆಸಿದ್ದಾರೆ. ಈ ಬಗ್ಗೆ ಪತ್ರಿಕೆ ಡಾ.ಚಂದ್ರಶೇಖರ್ ಸುಳೇಬಾವಿ ಅವರನ್ನು ದುರವಾಣಿ ಮೂಲಕ ಸಂಪರ್ಕಿಸಿದಾಗ ಅಷ್ಟೇ ಆತ್ಮೀಯತೆಯಿಂದ ಮಾತನಾಡಿದ ಅವರು ಸರ್ ನಾವೇನು ಮಾಡಿಲ್ಲ ನಮ್ಮ ಕರ್ತವ್ಯವನ್ನು ನಿರ್ವಹಿಸಿದ್ದೇವೆ ಅದು ನಮ್ಮ ಕೆಲಸ ಅದನ್ನು ಪರಿಣಾಮಕಾರಿಯಾಗಿ ಮಾಡಿದ್ದೇವೆ‌ ಅಷ್ಟೇ ಎಂದು ಮಾತು ಆರಂಬಿಸಿದ ಅವರು ನಾನು ಕೇಳುವ ಪ್ರತಿಯೊಂದು ಪ್ರಶ್ನೆಗೆ ಸಮರ್ಪಕ ಉತ್ತರ ನೀಡುತ್ತಾ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಮೂಲ ಉದ್ದೇಶವೇ 0 ರಿಂದ 18 ವರ್ಷದ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ದೊರಕಿಸಿ ಕೊಡುವುದಾಗಿದೆ ಇದು ತಾಲೂಕು ಆರೋಗ್ಯಾಧಿಕಾರಿ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಪ್ರತಿಯೊಂದು ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರತಿ ತಾಲೂಕಿನಲ್ಲಿ ಜನ ಸಂಖ್ಯಾ ಆಧಾರದಲ್ಲಿ ಮೇಲೆ ತಾಲೂಕು ಆರೋಗ್ಯಾಧಿಕಾರಿ ಅವರು ತಂಡಗಳನ್ನು ರಚಿಸುತ್ತಾರೆ ನಮ್ಮ ಬೈಲಹೊಂಗಲನಲ್ಲಿ ಆರ್.ಬಿ.ಎಸ್.ಕೆ ಕಾರ್ಯಕ್ರಮದಡಿ ಮೂರು ತಂಡಗಳನ್ನು ರಚಿಸಿಲಾಗಿದ್ದು ಮೂರು ತಂಡಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದರಲ್ಲದೆ ನಮ್ಮ ವ್ಯಾಪ್ತಿಯಲ್ಲಿ 2024-25 ನೇ ಸಾಲಿನಲ್ಲಿ ಅಂಗನವಾಡಿ ಮಟ್ಟದಲ್ಲಿ ಒಟ್ಟು 13 ಮತ್ತು ಶಾಲಾ ಹಂತದಲ್ಲಿ 9 ಅಪೌಷ್ಟಿಕ ಮಕ್ಕಳನ್ನು ಗುರುತಿಸಿಲಾಗಿದ್ದು, ಅದರಲ್ಲಿ 6 ಹೃದಯ ಸಂಬಂಧಿ ಕಾಯಿಲೆಗಳು, 2 ತುಟ್ಟಿ ಸಿಳದು, 2 ಬೆನ್ನು ಮೂಳೆ ಸಮಸ್ಯೆ ಸೇರಿದಂತೆ ಇತರ ಸಮಸ್ಯೆಗಳಿಂದ ಬಳಳುತ್ತಿದ್ದ ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದೇವೆ ಇದು ನಮಗೆ ತೃಪ್ತಿ ತಂದಿದೆ ಎಂದು ಸಂತೋಷದ ಮಾತುಗಳನ್ನು ಆಡಿದ ಡಾ.ಚಂದ್ರಶೇಖರ್ ಸುಳೇಬಾವಿ ಕಾರ್ಯಕ್ರಮದ ಉಪ ನಿರ್ದೇಶಕ ಡಾ.ವೀಣಾ, ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿ ಅವರ ಮಾರ್ಗದರ್ಶನವನ್ನು ನೆನೆಯುವುದನ್ನು ಮರೆಯಲ್ಲಿ
ಒಟ್ಟಿನಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಸಮಾಜದಲ್ಲಿ ಅಷ್ಟೊಂದು ಜಾಗೃತಿ ಇಲ್ಲ. ಅದನ್ನು ಪರಿಣಾಮವಾಗಿ ಅನುಷ್ಠಾನ ಗೊಳಿಸುವಲ್ಲಿ ಗೋಕಾಕ , ಮೂಡಲಗಿ, ರಾಯಬಾಗ, ಸವದತ್ತಿ, ಚಿಕ್ಕೋಡಿ, ಹುಕ್ಕೇರಿ ಸೇರಿದಂತೆ ಇತರ ತಾಲೂಕಿನ ತಾಲೂಕು ವೈದ್ಯಾಧಿಕಾರಿಗಳು ಹಿಂದೆ ಬಿದ್ದದರೆ ಬೈಲಹೊಂಗಲ ತಾಲೂಕಿನಲ್ಲಿ ನಡೆದಿರುವ ಆರ್.ಬಿ.ಎಸ್.ಕೆ ಕಾರ್ಯಕ್ರಮ ಇತರ ತಾಲೂಕಿನ ವೈದ್ಯಾಧಿಕಾರಿಗಳಿಗೆ ಮಾದರಿಯಾಗಿದೆ ಎಂದರೆ ಖಂಡಿತ ತಪ್ಪಾಗಲಾರದು. ಅಷ್ಟೊಂದು ಪರಿಣಾಮಕಾರಿಯಾಗಿ ಡಾ.ಚಂದ್ರಶೇಖರ ಸುಳೇಬಾವಿ, ಡಾ.ರಾಯಣ್ಣ ನಾಯ್ಕರ, ಸ್ಟಾಫ್ ನರ್ಸ ಗೌರಮ್ಮ ಹಂಚಿಹೊಳಿ,ನೇತ್ರ ಸಹಾಯಕಿ ವಿಜಯಲಕ್ಷ್ಮೀ ಬಾಣೆ ಅವರು ಒಂದು ತಂಡವಾಗಿ ಕಾರ್ಯ ಮಾಡಿ ಮಕ್ಕಳು ದೊಡ್ಡವರಾದಾಗ ಪಡುವ ತೊಂದರೆಗಳಿಂದ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ . ಅಂತಹ ಅರ್ಹನಿಸಿ ಸೇವೆ ಗೈಯುತ್ತಿರುವ ಈ ವೈದ್ಯ ತಂಡದಿಂದ ಇನ್ನಷ್ಟು, ಮತ್ತಷ್ಟು ಸತ್ಕಾರ್ಯಗಳು ನಡೆಯಲಿ ಎಂದು ಹಾರೈಸೋಣ.

Related posts: