ಗೋಕಾಕ:ವೈದ್ಯರು ಹಾಗೂ ಪತ್ರಕರ್ತರು ಸಮಾಜಕ್ಕೆ ನೀಡುತ್ತಿರುವ ಸೇವೆ ಅಪಾರ : ಮುರುಘರಾಜೇಂದ್ರ ಶ್ರೀ ಅಭಿಮತ

ವೈದ್ಯರು ಹಾಗೂ ಪತ್ರಕರ್ತರು ಸಮಾಜಕ್ಕೆ ನೀಡುತ್ತಿರುವ ಸೇವೆ ಅಪಾರ : ಮುರುಘರಾಜೇಂದ್ರ ಶ್ರೀ ಅಭಿಮತ
ಗೋಕಾಕ ಜು 28 : ವೈದ್ಯರು ಹಾಗೂ ಪತ್ರಕರ್ತರು ಸಮಾಜಕ್ಕೆ ನೀಡುತ್ತಿರುವ ಸೇವೆ ಅಪಾರ ಎಂದು ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಅವರು, ರವಿವಾರದಂದು ಸಂಜೆ ನಗರದ ಶ್ರೀ ಮಹಾಲಕ್ಷ್ಮೀ ಸಭಾ ಭವನದಲ್ಲಿ ಗೋಕಾಕ ತಾಲೂಕು ಪತ್ರಕರ್ತರ ಸಂಘ ಹಾಗೂ ಸ್ನೇಹಿತರ ಬಳಗದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ ಮತ್ತು ವೈದ್ಯರ ದಿನಾಚರಣೆ ನಿಮಿತ್ಯ ಹಮ್ಮಿಕೊಂಡ ಸತ್ಕಾರ ಸಮಾರಂಭ ಹಾಗೂ ಹಾಸ್ಯ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ವೈದ್ಯರನ್ನು ದೇವರಂತೆ ಕಾಣುತ್ತೇವೆ. ಪತ್ರಕರ್ತರು ಸಮಾಜಕ್ಕೆ ತಮ್ಮ ಹರಿತವಾದ ಲೇಖನಿಯ ಮೂಲಕ ಸತ್ಯವನ್ನು ತಿಳಿಸುತ್ತಾರೆ. ಇವರನ್ನು ಗೌರವಿಸುವದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗೋಕಾಕ ನಗರ ಇಂದು ಕಲೆ, ಸಂಗೀತ, ಸಾಹಿತ್ಯದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಯುತ್ತಿದೆ. ಕಲಾವಿದರು ಆರ್ಥಿಕವಾಗಿ ಬಡವರಾಗಿದ್ದರು ಕಲೆಯಲ್ಲಿ ಶ್ರೀಮಂತರಾಗಿರುತ್ತಾರೆ ಅವರನ್ನು ಪ್ರೋತ್ಸಾಹಿಸಿ ಕಲೆಯನ್ನು ಬೆಳೆಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಗಿಲ ವಿಜಯ ದಿವಸ ನೆನಪಿಗಾಗಿ ನಿವೃತ್ತ ಸೈನಿಕರನ್ನು, ಪತ್ರಕರ್ತರು, ವೈದ್ಯರು ಹಾಗೂ ಸಾಧಕರನ್ನು ಸತ್ಕರಿಸಲಾಯಿತು.
ಕಲಾವಿದರಾದ ಮಿಮಿಕ್ರಿ ಗೋಪಿ, ಚಪಾತಿ ಪಾಂಡು ಖ್ಯಾತಿಯ ಎಸ್ ಪಿ ಹೊಸಪೇಠಿ, ಜ್ಯೂನಿಯರ್ ರಾಜಕುಮಾರ, ಜ್ಯೂನಿಯರ ವಿಷ್ಣು ಮೊರೆ, ಜ್ಯೂನಿಯರ ಪ್ರಭಾಕರ, ಜ್ಯೂನಿಯರ ರವಿಚಂದ್ರನ್, ಶಿವು ಕೊಟಬಾಗಿ, ದೀಪಾ ಕುಷ್ಟಗಿ, ದಿನ್ನಿ ಮೊರೆ ಇವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗಿತು.
ಹಾರುಗೇರಿ ಹಿಡಕಲ್ ಬಬಲಾದಿ ಮಠದ ಶ್ರೀ ಸದಾಶಿವ, ಕರ್ನಾಟಕ ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ರಾಜಕೀಯ ಮುಖಂಡ ಅಶೋಕ ಪೂಜಾರಿ, ತಹಶೀಲದಾರ ಡಾ.ಮೋಹನ ಭಸ್ಮೆ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರಿ, ಮುಖ್ಯ ವೈದ್ಯಾಧಿಕಾರಿ ಡಾ.ವೃಷಭೇಂದ್ರ ಹಿರೇಮಠ, ಸಿಪಿಐ ಶ್ರೀಶೈಲ ಬ್ಯಾಕೂಡ, ಪಿಎಸ್‍ಐಗಳಾದ ಕಿರಣ ಮೊಹಿತೆ, ಕೆ ಬಿ ವಾಲಿಕಾರ, ಗಣ್ಯ ವರ್ತಕ ಮಹಾಂತೇಶ ತಾಂವಶಿ, ರಾಮು ಮರೆನ್ನವರ, ಸಂಘಟಕರಾದ ಭೀಮಶಿ ಭರಮಣ್ಣವರ, ಮನೋಹರ ಮೆಗೇರಿ, ಶಶಿ ಕಣ್ಣಪ್ಪನವರ, ವಿರೇಂದ್ರ ಪತಕಿ ಸೇರಿದಂತೆ ಅನೇಕರು ಇದ್ದರು.
