RNI NO. KARKAN/2006/27779|Thursday, April 25, 2024
You are here: Home » breaking news » ಗೋಕಾಕ:ಅಚ್ಚರಿ ಬೆಳವಣಿಗೆ : ಬಿಜೆಪಿ ಬೆಂಬಲಿಸಿದ ಲಖನ್ ಜಾರಕಿಹೊಳಿ ಗುಂಪಿನ 12 ನಗರಸಭೆ ಸದಸ್ಯರು

ಗೋಕಾಕ:ಅಚ್ಚರಿ ಬೆಳವಣಿಗೆ : ಬಿಜೆಪಿ ಬೆಂಬಲಿಸಿದ ಲಖನ್ ಜಾರಕಿಹೊಳಿ ಗುಂಪಿನ 12 ನಗರಸಭೆ ಸದಸ್ಯರು 

ಅಚ್ಚರಿ ಬೆಳವಣಿಗೆ : ಬಿಜೆಪಿ ಬೆಂಬಲಿಸಿದ ಲಖನ್ ಜಾರಕಿಹೊಳಿ ಗುಂಪಿನ 12 ನಗರಸಭೆ ಸದಸ್ಯರು

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 15 :

 

 

ನಗರಸಭೆ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಗೆ ಇನ್ನೆರಡು ದಿನಗಳು ಬಾಕಿ ಇರುವಾಗಲೇ ಅಚ್ಚರಿಯ ಬೆಳಗವಣಿಗೆ ನಡೆದಿದ್ದು, ಗುರವಾರದಂದು ಲಖನ ಜಾರಕಿಹೊಳಿ ( ಕಾಂಗ್ರೆಸ್ ) ಬೆಂಬಲಿತ 12 ನಗರಸಭೆ ಸದಸ್ಯರು ಸಚಿವ ರಮೇಶ ಜಾರಕಿಹೊಳಿ ಅವರಿಗೆ ಭೇಟಿಯಾಗಿ ಬಿಜಿಪಿಗೆ ಬೆಂಬಲ ಸೂಚಿಸಿದ್ದಾರೆ.

ತೀವ್ರ ಕುತೂಹಲ ಕೆರಳಿಸಿದ್ದ ಗೋಕಾಕ ನಗರಸಭೆ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಗೆ ಈ ಬಾರಿಯು ಸಹ ಅವಿರೋಧ ಆಯ್ಕೆ ನಡೆಯುವುದು ಬಹುತೇಕ ಖಚಿತವಾಗಿದ್ದು, ಅಭ್ಯರ್ಥಿ ಆಯ್ಕೆಯೊಂದು ಬಾಕಿ ಉಳಿದಿದ್ದು, ಶನಿವಾರ ಮುಂಜಾನೆ ಸಚಿವ ರಮೇಶ ಜಾರಕಿಹೊಳಿ ಅವರು ಸೂಚಿಸುವ ಅಭ್ಯರ್ಥಿಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗೆ ನಾಮ ಪತ್ರ ಸಲಿಸಿಲ್ಲಿದ್ದು, ಕಾಂಗ್ರೆಸ್ ಪಕ್ಷದ ಯುವ ಮುಖಂಡ ಗೋಕಾಕ ಮತಕ್ಷೇತ್ರದ ಪರಾಜಿತ ಅಭ್ಯರ್ಥಿ ಲಖನ್ ಜಾರಕಿಹೊಳಿ ಬೆಂಬಲಿತ ನಗರಸಭೆ ಸದಸ್ಯರು ಸಚಿವ ರಮೇಶ ಜಾರಕಿಹೊಳಿ ಸೂಚಿಸುವ ಅಭ್ಯರ್ಥಿಗಳಿಗೆ ತಮ್ಮ ಬೆಂಬಲ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಒನ್ ಲೈನ ಸಭೆ ನಡೆಸಿದ ಸಚಿವ ರಮೇಶ : ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಅವರ ಬೆಂಬಲಿತ 12 ನಗರಸಭೆ ಸದಸ್ಯರು ಸಚಿವ ರಮೇಶ ಜಾರಕಿಹೊಳಿ ಅವರ ಭೇಟಿಗಾಗಿ ಗುರುವಾರದಂದು ಸಚಿವರ ಗೃಹ ಕಛೇರಿಯಲ್ಲಿ ಕಾದು ಕುಳಿತಿದ್ದರು. ಸರಿಯಾಗಿ 10:30 ಕ್ಕೆ ಕಛೇರಿಗೆ ಆಗಮಿಸಿದ ಸಚಿವ ರಮೇಶ ಜಾರಕಿಹೊಳಿ ಅವರು ಲಖನ್ ಬೆಂಬಲಿತ ನಗರಸಭೆ ಸದಸ್ಯರನ್ನು ಉದ್ದೇಶಿಸಿ ಎಲ್ಲರೂ ಕೂಡಿಕೊಂಡು ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಹೋಗಿ ಎಂದಷ್ಟೇ ಹೇಳಿ ಕೇವಲ ಒನ್ ಲೈನ ಸಭೆ ನಡೆಸಿ ತಮ್ಮ ಬೇರೆ ಕೆಲಸಕ್ಕೆ ಅನಿಯಾದರು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಶಾಸಕ ಸತೀಶ ಜಾರಕಿಹೊಳಿ ಅವರಿಗೆ ತೀವ್ರ ಮುಖಭಂಗ : ಕಳೆದ 10 ತಿಂಗಳ ಹಿಂದೆ ಗೋಕಾಕ ಮತಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಸಹೋದರ ಲಖನ್ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಿಸಿ, ಸಹೋದರ ಸಚಿವ ರಮೇಶ ಜಾರಕಿಹೊಳಿ ಅವರನ್ನು ಸೋಲಿಸಲು ಫನತೊಟ್ಟಿದ್ದ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಲಖನ್ ಜಾರಕಿಹೊಳಿ ಅವರ ಗೆಲುವಿಗೆ ಕೋಟಿ ಕೋಟಿ ಹಣ ಖರ್ಚು ಮಾಡಿದ್ದರು. ತದ ನಂತರ ನಡೆದ ಬೆಳವಣಿಗೆಯಲ್ಲಿ ಲಖನ್ ಮತ್ತು ಸತೀಶ ಜಾರಕಿಹೊಳಿ ಅವರು ಸಚಿವ ರಮೇಶ ಮತ್ತು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ವಿರುದ್ಧ ಗೋಕಾಕ ಮತಕ್ಷೇತ್ರದಾದ್ಯಂತ ಪ್ರಚಾರ ನಡೆಸಿ ತಮ್ಮದೇ ಆದ ಕಾರ್ಯಕರ್ತರ ಪಡೆಯನ್ನು ತಯಾರಿಸಿ ಸ್ಥಳೀಯ ಚುನಾವಣೆಗಳಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರ ವಿರುದ್ಧ ಚುನಾವಣೆ ನಡೆಸಲು ತೆರೆಮರೆಯಲ್ಲಿ ತಯಾರಿ ನಡೆಸಿದ್ದರು. ಆದರೆ ಕಳೆದ ಜೂನ ತಿಂಗಳಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರ ಬೆಂಗಳೂರಿನ ಹೊಸ ಮನೆಯ ಗೃಹ ಪ್ರವೇಶಕ್ಕೆ ಸಚಿವ ರಮೇಶ ಜಾರಕಿಹೊಳಿ ಅವರ ಆಹ್ವಾನದ ಮೇರೆಗೆ ಬೆಂಗಳೂರಿನ ಸಚಿವರ ಮೆನೆಗೆ ಹೋಗಿಬಂದ ಯುವ ನಾಯಕ ಲಖನ್ ಜಾರಕಿಹೊಳಿ ಅವರು ಅಂದಿನಿಂದ ಸಚಿವ ರಮೇಶ ಜಾರಕಿಹೊಳಿ ಅವರ ವಿರುದ್ಧ ಬಹಿರಂಗವಾಗಿ ಮಾತನಾಡುವುದನ್ನು ನಿಲ್ಲಿಸಿ, ಸಹೋದರ ಸತೀಶ ಜಾರಕಿಹೊಳಿ ಅವರೊಂದಿಗೆ ಅಂತರವನ್ನು ಕಾಯ್ದುಕೊಂಡು ಗೋಕಾಕ ನಗರಸಭೆಗೆ ನಡೆಯುವ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗೆ ಎರೆಡು ದಿನ ಮೊದಲು ತಮ್ಮ ಬೆಂಬಲಿತ 12 ಜನ ನಗರಸಭೆ ಸದಸ್ಯರಿಗೆ ಸಚಿವ ರಮೇಶ ಜಾರಕಿಹೊಳಿ ಭೇಟಿಯಾಗಲು ಕಳುಹಿಸಿ ಕೊಟ್ಟಿದ್ದಾರೆ. ಇದರಿಂದ ಈ ಭಾರಿ ಮತ್ತೆ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಸಹೋದರ ಸಚಿವ ರಮೇಶ ಜಾರಕಿಹೊಳಿ ಅವರಿಗೆ ತೀವ್ರ ಪೈಪೋಟಿ ಒಡ್ಡಲು ಕಾರ್ಯತಂತ್ರ ಹೆಣೆದಿದದ್ದ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಲಖನ್ ಜಾರಕಿಹೊಳಿ ಅವರ ಈ ನಡೆಯಿಂದ ತೀವ್ರ ಮುಖಭಂಗವಾದಂತಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ಶುರುವಾಗಿವೆ.

ಒಟ್ಟಾರೆ ಕಳೆದ 10 ತಿಂಗಳ ಹಿಂದೆ ನಡೆದ ಗೋಕಾಕ ಮತಕ್ಷೇತ್ರದ ಉಪ ಚುನಾವಣೆಯಲ್ಲಿ ಬದ್ದವೈರಿಗಳಂತೆ ಆರೋಪ ಪ್ರತ್ಯಾರೋಪ ಮಾಡಿ ಮತದಾರರ ತೆಲೆ ಕೆಡಿಸಿದ್ದ ಸಹೋದರರಿಬ್ಬರು ಬಹಿರಂಗವಾಗಿ ಅಲದಿದ್ದರೂ ಒಳಗೊಳಗೆ ಒಂದಾಗಿದ್ದಾರೆಂದು ಗೋಕಾಕ ಮತಕ್ಷೇತ್ರದ ಮಹಾ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ. ಮುಂದೆ ಸಹೋದರಿಬ್ಬರ ಈ ಹೋಸ ನಡೆ ಎತ್ತ ಸಾಗುವದು ಎಂಬುದನ್ನು ಕಾಲವೆ ನಿರ್ಧರಿಸಲ್ಲಿದೆ..

Related posts: