RNI NO. KARKAN/2006/27779|Thursday, June 25, 2026
You are here: Home » breaking news » ಗೋಕಾಕ:28 ರಂದು ಮುರುಘರಾಜೇಂದ್ರ ಮಹಾಸ್ವಾಮಿಗಳ ಹುಟ್ಟು ಹಬ್ಬದ ನಿಮಿತ್ತ 55 ತುಲಾಭಾರ ಹಾಗೂ ಗುರುವಂದನಾ ಕಾರ್ಯಕ್ರಮ : ಮಲ್ಲಿಕಾರ್ಜುನ ಈಟಿ ಮಾಹಿತಿ

ಗೋಕಾಕ:28 ರಂದು ಮುರುಘರಾಜೇಂದ್ರ ಮಹಾಸ್ವಾಮಿಗಳ ಹುಟ್ಟು ಹಬ್ಬದ ನಿಮಿತ್ತ 55 ತುಲಾಭಾರ ಹಾಗೂ ಗುರುವಂದನಾ ಕಾರ್ಯಕ್ರಮ : ಮಲ್ಲಿಕಾರ್ಜುನ ಈಟಿ ಮಾಹಿತಿ 

28 ರಂದು ಮುರುಘರಾಜೇಂದ್ರ ಮಹಾಸ್ವಾಮಿಗಳ ಹುಟ್ಟು ಹಬ್ಬದ ನಿಮಿತ್ತ 55 ತುಲಾಭಾರ ಹಾಗೂ ಗುರುವಂದನಾ ಕಾರ್ಯಕ್ರಮ : ಮಲ್ಲಿಕಾರ್ಜುನ ಈಟಿ ಮಾಹಿತಿ
ಗೋಕಾಕ ಜೂ 25 : ಇಲ್ಲಿನ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ 55ನೇ ಜನ್ಮದಿನದ ನಿಮಿತ್ತ ರವಿವಾರ ದಿನಾಂಕ 28 ರಂದು ನಗರದ ಶ್ರೀ ಮಹಾಲಕ್ಷ್ಮೀ ಸಭಾಂಗಣದಲ್ಲಿ ಮುಂಜಾನೆ 9 ರಂದು 55 ತುಲಾಭಾರ ಹಾಗೂ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗುರುವಂದನಾ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಈಟಿ ಹೇಳಿದರು.

ಗುರುವಾರದಂದು ನಗರದ ಶ್ರೀ ಶೂನ್ಯ ಸಂಪಾದನ ಮಠದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಘಟಪ್ರಭಾದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸುವರು. ನೇತೃತ್ವವನ್ನು ಶೂನ್ಯ ಸಂಪಾದನ ಮಠದ ಕಿರಿಯ ಶ್ರೀ ಬಸವಪ್ರಭು ಸ್ವಾಮಿಗಳು ವಹಿಸುವರು. ಕಾರ್ಯಕ್ರಮವನ್ನು ಶಾಸಕ ರಮೇಶ್ ಜಾರಕಿಹೊಳಿ ಅವರು ಉದ್ಘಾಟಿಸುವರು. ಅತಿಥಿಗಳಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ರಾಜ್ಯಸಭಾ ಮಾಜಿ ಸದಸ್ಯ ಈರಣ್ಣ ಕಡಾಡಿ, ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ, ಬೆಂಗಳೂರಿನ ಎಡ್ರಿಸ್ ಟೆಕ್ನಾಲಜಿ ಸಿ.ಇ.ಓ ಕಿರಣ ಮುಚ್ಚಂಡಿಮಠ ಭಾಗವಹಿಸುವರು. ಗೋಕಾಕ ಮತ್ತು ಮೂಗಲಗಿ ತಾಲೂಕಿನ ಎಲ್ಲಾ ಮಠಾಧೀಶರು ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಲ್ಲಿದ್ದು, ಕಾರ್ಯಕ್ರಮದ ನಂತರ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು 55ನೇ ಹುಟ್ಟುಹಬ್ಬದ ಸವಿನೆನಪಿಗಾಗಿ 55 ಸಸಿಗಳನ್ನು ನೆಡಲಾಗುವುದು ಮತ್ತು ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶಾಲಾ ಬ್ಯಾಗ, ನೋಟ್ ಬುಕ್ ಮತ್ತು ಇತರ ಪರಿಕರಗಳನ್ನು ವಿತರಿಸಲಾಗುವುದು ಕಾರಣ ಗೋಕಾಕ ಮತ್ತು ಮೂಗಲಗಿ ತಾಲೂಕಿನ ಎಲ್ಲಾ ಸದ್ಧಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕು ಎಂದು ಮಲ್ಲಿಕಾರ್ಜುನ ಈಟಿ ಮನವಿ ಮಾಡಿದ್ದಾರೆ.

ಈ ಪತ್ರಿಕಾಗೋಷ್ಠಿಯಲ್ಲಿ ಅಂಕಲಗಿ ಅಡವಿಸಿದ್ದೇಶ್ವರಮಠದ ಡಾ.ಅಮರಸಿದ್ದೇಶ್ವರ ಮಹಾಸ್ವಾಮಿಗಳು, ಬಸವಪ್ರಭು ಸ್ವಾಮಿಗಳು, ವಿವೇಕ ಜತ್ತಿ, ನ್ಯಾಯವಾದಿ ಶಂಕರ ಗೋರೋಶಿ ಉಪಸ್ಥಿತರಿದ್ದರು.

Related posts: