RNI NO. KARKAN/2006/27779|Sunday, July 13, 2025
You are here: Home » breaking news » ಗೋಕಾಕ:ಮುಂದಿನ ತಿಂಗಳು ಅರಭಾವಿಯಲ್ಲಿ ಜಿಟಿಟಿಸಿ ತರಬೇತಿ ಕೇಂದ್ರ ಆರಂಭ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ

ಗೋಕಾಕ:ಮುಂದಿನ ತಿಂಗಳು ಅರಭಾವಿಯಲ್ಲಿ ಜಿಟಿಟಿಸಿ ತರಬೇತಿ ಕೇಂದ್ರ ಆರಂಭ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ 

ಮುಂದಿನ ತಿಂಗಳು ಅರಭಾವಿಯಲ್ಲಿ ಜಿಟಿಟಿಸಿ ತರಬೇತಿ ಕೇಂದ್ರ ಆರಂಭ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 23 :

 

ಮುಂದಿನ ತಿಂಗಳು ಅರಭಾಂವಿ ಗ್ರಾಮದಲ್ಲಿ ಪ್ರಾರಂಭವಾಗಲಿರುವ ಜಿಟಿಟಿಸಿ ತರಬೇತಿ ಕೇಂದ್ರಕ್ಕೆ ರವಿವಾರದಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಭೇಟಿನೀಡಿ ಪರಿಶೀಲನೆ ನಡೆಸಿದರು .
ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಟಿಟಿಸಿ ನಮ್ಮ ಕನಸಿನ ಯೋಜನೆಗಳಲ್ಲೊಂದಾಗಿದೆ. ರಾಜ್ಯದಲ್ಲಿ ಜಿಲ್ಲೆಗೊಂದು ಜಿಟಿಟಿಸಿ ಕೇಂದ್ರ ಸ್ಥಾಪಿಸಲಾಗಿದೆ . ಆದರೆ ಬೆಳಗಾವಿ ಅತೀ ದೊಡ್ಡ ಜಿಲ್ಲೆಯಾದರಿಂದ ಅರಂಭಾವಿಯಲ್ಲಿ ತರಬೇತಿ ಕೇಂದ್ರಕ್ಕೆ ಅನುಮತಿ ನೀಡಲಾಗಿದೆ. ತಾವು ಕೈಗಾರಿಕಾ ಮಂತ್ರಿಯಾಗಿದ್ದ ವೇಳೆ ಕೊಪ್ಪಳ, ಉಡುಪಿ ಸೇರಿ ರಾಜ್ಯದಲ್ಲಿ ಒಟ್ಟು 4 ಜಿಲ್ಲೆಗಳಲ್ಲಿ ಜಿಟಿಟಿಸಿ ಕೊಡುಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದ ಅವರು ಸಣ್ಣ ಕೈಗಾರಿಕಾ ಇಲಾಖೆಯಿಂದ ಸುಮಾರು 20 ಕೋಟಿ ರೂ. ಅನುದಾನ ಕಲ್ಪಿಸಿ, ಅರಭಾಂವಿಯಲ್ಲಿ ಜಿಟಿಟಿಸಿ ತರಬೇತಿ ಕೇಂದ್ರಕ್ಕೆ ಸ್ಥಾಪನೆಗೆ ವಿಶೇಷ ಕಾಳಜಿವಹಿಸಿಲಾಗಿದೆ ಪ್ರಸಕ್ತ ವರ್ಷದಿಂದ ಈ ತರಬೇತಿ ಕೇಂದ್ರ ಆರಂಭವಾಗಲಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ 2 ಕೋರ್ಸ್ ಕಾರ್ಯಾರಂಭ :
ಅರಭಾಂವಿಯಲ್ಲಿ ಸುಮಾರು 10 ಎಕರೆ ಜಾಗದಲ್ಲಿ ಹೈಕೆಟ್ ಜಿಟಿಟಿಸಿ ತರಬೇತಿ ಕೇಂದ್ರ ಸಜ್ಜಾಗಿದ್ದು, ಹಾಸ್ಟೆಲ್, ವರ್ಕ್ ಶಾಪ್, ಮಷಿನರಿ, ಕ್ಯಾಂಟೀನ್ ಸೇರಿ ಮೂಲಸೌಕರ್ಯ ಒಳಗೊಂಡ ಅತ್ಯುತ್ತಮ ಕೇಂದ್ರ ಇದಾಗಿದೆ ಮುಂದಿನ ತಿಂಗಳಿನಿಂದ ತರಬೇತಿ ಕೇಂದ್ರ ಕಾರ್ಯಾರಂಭ ಮಾಡಲಿದ್ದು, ಸದ್ಯ “ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ಸ್” ,” ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್” ಎರಡು ಕೋರ್ಸ್ ಗಳ ಆರಂಭಸಲಾಗುತ್ತಿದೆ. ಮುಂದಿನ ವರ್ಷದಲ್ಲಿ ಮತ್ತೆ ನಾಲ್ಕು ಕೋರ್ಸ್ ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ. ಪ್ರತಿ ಕೋರ್ಸ್ ನಲ್ಲಿ 60 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತಿದೆ. ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ವಿಶೇಷವಾಗಿ ಯುವತಿಯರಿಗೆ ಹೆಚ್ಚಿನ ಆದ್ಯತೆ ನೀಡಲಾಗದ್ದು, ಕೋರ್ಸ್ ಮುಗಿದ ಬಳಿಕ ಕ್ಯಾಂಪಸ್ ಇಂಟರ್ ವ್ಯೂವ್ ನಡೆಯಲಿದ್ದು, ವಿದ್ಯಾರ್ಥಿಗಳು ಕೆಲಸಕ್ಕಾಗಿ ಅಲೆಯುವುದು ತಪ್ಪಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಶಂಕರ ಬಿಲಕುಂದಿ, ರಾಜು ಧರಗಶೆಟ್ಟಿ, ಜಿಟಿಟಿಸಿ ಕೇಂದ್ರ ಪ್ರಾಚಾರ್ಯ, ಉಪನ್ಯಾಸಕರು, ಸಿಬ್ಬಂದಿ ವರ್ಗ ಮುಂತಾದವರು ಇದ್ದರು.

Related posts: