RNI NO. KARKAN/2006/27779|Wednesday, March 25, 2026
You are here: Home » breaking news » ಗೋಕಾಕ:ಆಸ್ತಿ ತೆರಿಗೆ ಪರಿಷ್ಕರಣೆ : ಆಸ್ತಿ ಮಾಲೀಕರು ಇದರ ಸದುಪಯೋಗಪಡಿಸಿ : ಪೌರಾಯುಕ್ತ ರವಿ

ಗೋಕಾಕ:ಆಸ್ತಿ ತೆರಿಗೆ ಪರಿಷ್ಕರಣೆ : ಆಸ್ತಿ ಮಾಲೀಕರು ಇದರ ಸದುಪಯೋಗಪಡಿಸಿ : ಪೌರಾಯುಕ್ತ ರವಿ 

ಆಸ್ತಿ ತೆರಿಗೆ ಪರಿಷ್ಕರಣೆ : ಆಸ್ತಿ ಮಾಲೀಕರು ಇದರ ಸದುಪಯೋಗಪಡಿಸಿ : ಪೌರಾಯುಕ್ತ ರವಿ

ಗೋಕಾಕ ಮಾ 25 : ಪೌರಾಡಳಿತ ಇಲಾಖೆಯ ಸುತ್ತೋಲೆ ಕರ್ನಾಟಕ ಪುರಸಭೆಗಳ ಅಧಿನಿಯಮದಡಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆಗೊಳಿಸಲಾಗಿದ್ದು, ನಗರದ ಆಸ್ತಿ ಮಾಲೀಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಪೌರಾಯುಕ್ತ ರವಿ ರಂಗಸುಭೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಇಲಾಖೆಯ ನಿರ್ದೇಶನದಂತೆ ಶೇ 3% ಕ್ಕಿಂತ ಕಡಿಮೆ ಇರದಂತೆ ಶೇ 5% ಕ್ಕಿಂತ ಹೆಚ್ಚಾಗದಂತೆ ಆಸ್ತಿ ತೆರಿಗೆಯನ್ನು ಪರಿಷ್ಕರಣೆಗೊಳಿಸಲು ಸೂಚಿಸಿದಂತೆ ವಸತಿ, ವಾಣಿಜ್ಯ, ಕೈಗಾರಿಕೆ ಹಾಗೂ ಖಾಲಿ ನಿವೇಶನಗಳ ಆಸ್ತಿ ಮಾಲೀಕರಿಗೆ ಹೊರೆಯಾಗದಂತೆ ಸನ್ 2026-27ನೇ ಸಾಲಿಗೆ ಶೇ 3% ರಷ್ಟು ಸ್ವಯಂ ಘೋಷಿತ ಆಸ್ತಿ ತೆರಿಗೆ ಸಂದಾಯ ಮಾಡಿ ನಗರಸಭೆಯೊಂದಿಗೆ ಸಹಕರಿಸಬೇಕೆಂದು ಪೌರಾಯುಕ್ತರು ಪ್ರಕಟನೆಯಲ್ಲಿ ಕೋರಿದ್ದಾರೆ.

Related posts: