RNI NO. KARKAN/2006/27779|Wednesday, February 25, 2026
You are here: Home » breaking news » ಗೋಕಾಕ:ನಿರಂತರ ಅಭ್ಯಾಸ ಮಾಡುವ ಹವ್ಯಾಸ ಬೆಳೆಸಿಕೊಳ್ಳಿ : ಡಿ.ವಿಷ್ಣು ಪ್ರಸಾದ್

ಗೋಕಾಕ:ನಿರಂತರ ಅಭ್ಯಾಸ ಮಾಡುವ ಹವ್ಯಾಸ ಬೆಳೆಸಿಕೊಳ್ಳಿ : ಡಿ.ವಿಷ್ಣು ಪ್ರಸಾದ್ 

ನಿರಂತರ ಅಭ್ಯಾಸ ಮಾಡುವ ಹವ್ಯಾಸ ಬೆಳೆಸಿಕೊಳ್ಳಿ : ಡಿ.ವಿಷ್ಣು ಪ್ರಸಾದ್
ಗೋಕಾಕ ಫೆ 25 : ವಿದ್ಯಾರ್ಥಿಗಳು ತರಬೇತಿ ಮುಗಿದ ನಂತರವೂ ಸಹ ನಿರಂತರ ಅಭ್ಯಾಸವನ್ನು ಮಾಡಿಕೊಳ್ಳುವ ಹವ್ಯಾಸ ಬೆಳೆಸಿಕೊಂಡರೆ ಒಳ್ಳೆಯ ಸಾಧಕರಾಗಲು ಸಾಧ್ಯ ಎಂದು ಐ.ಸಿ.ಟಿ ಅಕ್ಯಾಡಮಿಯ ಸಂಸ್ಥೆಯ ಮುಖ್ಯಸ್ಥ ಡಿ.ವಿಷ್ಣು ಪ್ರಸಾದ್ ಹೇಳಿದರು.

ಬುಧವಾರದಂದು ನಗರದ ಶ್ರೀ ಸಿದ್ದಲಿಂಗೇಶ್ವರ ಬಿ.ಸಿ.ಎ ಮಹಾವಿದ್ಯಾಲಯದಲ್ಲಿ ಬಿ.ಸಿ ಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಐ.ಸಿ.ಟಿ ಅಕ್ಯಾಡಮಿ ಸಂಸ್ಥೆ ಮತ್ತು ಐ.ಬಿ.ಎಂ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿಹಮ್ಮಿಕೊಂಡ ನಾಲ್ಕು ದಿನಗಳ ಕೌಶಲ್ಯ ನಿರ್ಮಾಣ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು 16 ತಾಸುಗಳ ಸ್ವಯಂ ಓದಿನ ‌ಹವಾಸ್ಯವನ್ನು ಕರಗತ ಮಾಡಿಕೊಳ್ಳಬೇಕು. ನಮ್ಮ ಕಂಪನಿಯಿಂದ ತರಬೇತಿ ಪಡೆದುಕೊಂಡ ವಿದ್ಯಾರ್ಥಿಗಳನ್ನು ನಾವು ಮುಂದಿನ ಒಂದು ವರ್ಷಗಳ ಕಾಲ ಅವರಲ್ಲಿಯ ಕೌಶಲ್ಯಗಳನ್ನು ಅಭಿವೃದ್ಧಿ ಪಡೆಸುವ ಕಾರ್ಯವನ್ನು ನಮ್ಮ ಐ.ಬಿ.ಎಂ ಮಾಡುತ್ತದೆ.
ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಯು ಪತ್ರಿದಿನ ಹೊಸದನ್ನು ಕಲಿಯುತ್ತಿರುತ್ತಾನೆ.ವಿದ್ಯಾರ್ಥಿಗಳು ಸ್ವಯಂ ಓದು ,ಸಂವಹ, ಸಾಮಾನ್ಯ ಜ್ಞಾನ ಮತ್ತು ಭಾಷೆಯ ಮೇಲೆ ಹಿಡಿತ ಸಾಧಿಸಿದರೆ ದೇಶದ ಯಾವುದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಬಹುದು.
ರಾಜಾದ್ಯಂತ ಕೇವಲ 30 ಕಾಲೇಜುಗಳಿಗೆ ನಮ್ಮ ಐ.ಸಿ.ಟಿ ಅಕ್ಯಾಡಮಿ ಸಂಸ್ಥೆಯು ತರಬೇತಿಯನ್ನು ನೀಡುತ್ತದೆ ಹಾಗಾಗಿ ಈ ತರಬೇತಿಯ ಲಾಭವನ್ನು ಪಡೆದುಕೊಂಡು ಸಾಧಕರಾಗಬೇಕು ಎಂದು ಹೇಳಿದರು.

ಸಂಸ್ಥೆಯ ನಿರ್ದೇಶಕ ಡಾ.ವಿಶ್ವನಾಥ ಶಿಂಧೋಳಿಮಠ ಮಾತನಾಡಿ ವಿದ್ಯಾರ್ಥಿಗಳು ಅಂಕ ಗಳಿಸುವುದಕ್ಕೆ ಸಿಮಿತವಾಗದೆ ಸಮೂಹ ಸಂವಹನ ಕೌಶಲ್ಯಗಳನ್ನು ಕಲಿಯಬೇಕು.ತಂತ್ರಜ್ಞಾನ ಯುಗದಲ್ಲಿ ಕಾಫಿ ಫೇಸ್ಟ ಮಾಡದೆ ಸತ್ಯಾಸತ್ಯತೆಯನ್ನು ದೃಢೀಕರಣ ಮಾಡಿಕೊಳ್ಳಬೇಕು.
ಒಂದು ಪದವಿ ಪಡೆದುಕೊಂಡರೆ ನಾವು ಎಲ್ಲವನ್ನು ಕಲಿತುಕೊಂಡಿದ್ದೇನೆ ಎಂಬ ಕಲ್ಪನೆ ಹೊಂದಿದರೆ ಸಾಲದು ಜೀವನದಲ್ಲಿ ಕಲಿಯುವುದು ಬಹಳಷ್ಟಿದೆ ಎಂಬ ಸತ್ಯವನ್ನು ಅರಿತು ವಿದ್ಯಾರ್ಥಿಗಳು ಮುಂದೆ ಸಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಅಡಿವೇಶ ಗವಿಮಠ, ಐ.ಸಿ.ಟಿ ಅಕ್ಯಾಡಮಿ ಸಂಸ್ಥೆಯ ಪ್ರವೀಣ್ ಗಸ್ತಿ, ತರಬೇತಿದಾರ ಶಶಿಕಾಂತ ಉಪಸ್ಥಿತರಿದ್ದರು.

Related posts: