ಗೋಕಾಕ:ದೇವಸ್ಥಾನಗಳ ಜಿರ್ಣೋದ್ದಾರಕ್ಕಾಗಿ ಮುಜರಾಯಿ ಇಲಾಖೆಯಿಂದ 4 ಲಕ್ಷ ರೂ ಮಂಜೂರು

ಗೋಕಾಕ ಮತಕ್ಷೇತ್ರದ ಖನಗಾಂವ ಗ್ರಾಮದ ಶ್ರೀ ದುರ್ಗಾದೇವಿ ಹಾಗೂ ಹೂಲಿಕಟ್ಟಿ ಗ್ರಾಮದ ಶ್ರೀ ಬೀರಸಿದ್ದೇಶ್ವರ ದೇವಸ್ಥಾನಗಳ ಜಿರ್ಣೋದ್ದಾರಕ್ಕಾಗಿ ಮುಜರಾಯಿ ಇಲಾಖೆಯಿಂದ ಮಂಜೂರಾದ ತಲಾ 4 ಲಕ್ಷ ರೂಗಳ ಚೆಕ್‍ಗಳನ್ನು ಗುರುವಾರದಂದು ನಗರದ ಸಚಿವರ ಕಾರ್ಯಾಲಯದಲ್ಲಿ ಗಣ್ಯರು ವಿತರಿಸುತ್ತಿರುವುದು.
ದೇವಸ್ಥಾನಗಳ ಜಿರ್ಣೋದ್ದಾರಕ್ಕಾಗಿ ಮುಜರಾಯಿ ಇಲಾಖೆಯಿಂದ 4 ಲಕ್ಷ ರೂ ಮಂಜೂರು
ಗೋಕಾಕ ಜೂ 14 : ಗೋಕಾಕ ಮತಕ್ಷೇತ್ರದ ಖನಗಾಂವ ಗ್ರಾಮದ ಶ್ರೀ ದುರ್ಗಾದೇವಿ ಹಾಗೂ ಹೂಲಿಕಟ್ಟಿ ಗ್ರಾಮದ ಶ್ರೀ ಬೀರಸಿದ್ದೇಶ್ವರ ದೇವಸ್ಥಾನಗಳ ಜಿರ್ಣೋದ್ದಾರಕ್ಕಾಗಿ ಮುಜರಾಯಿ ಇಲಾಖೆಯಿಂದ ಮಂಜೂರಾದ ತಲಾ 4 ಲಕ್ಷ ರೂಗಳ ಚೆಕ್‍ಗಳನ್ನು ಗುರುವಾರದಂದು ನಗರದ ಸಚಿವರ ಕಾರ್ಯಾಲಯದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಜಿಪಂ ಸದಸ್ಯ ಟಿ.ಆರ್.ಕಾಗಲ, ಮಾಜಿ ಸದಸ್ಯ ನಿಂಗಪ್ಪ ಗಡಜನ್ನವರ, ದೇವಸ್ಥಾನ ಕಮೀಟಿಯ ಮಾಯಪ್ಪ ಕೋಣಿ, ಪ್ರಕಾಶ ತೋಳಿನವರ, ನಿಂಗಪ್ಪ ಬಾಣಸಿ, ರಾಮಪ್ಪ ಮರೆನ್ನವರ, ಮಾಯಪ್ಪ ಬೀರನ್ನವರ, ರಾಮಪ್ಪ ಡಬ್ಬನವರ ಸೇರಿದಂತೆ ಅನೇಕರು ಇದ್ದರು.