ಘಟಪ್ರಭಾ:ಹೋಗುವಾಗ 50 ಬರುವಾಗ 20 ರೂ.ಟಿಕಿಟ್ ದರ ರೇಲ್ವೆ ಇಲಾಖೆಯಿಂದ ಜನ ಸಾಮಾನ್ಯರ ಸುಲಿಗೆ
ಹೋಗುವಾಗ 50 ಬರುವಾಗ 20 ರೂ.ಟಿಕಿಟ್ ದರ
ರೇಲ್ವೆ ಇಲಾಖೆಯಿಂದ ಜನ ಸಾಮಾನ್ಯರ ಸುಲಿಗೆ
ಘಟಪ್ರಭಾ ಸೆ 10 : ಮೀರಜ-ಬೆಳಗಾವಿ ಪುಶ್-ಪುಲ್ ರೈಲು ಮತ್ತೇ ಪ್ರಾರಂಭವಾಗಿದ್ದು, ಪ್ಯಾಸೆಂಜರ್ ರೈಲುವಾಗಿದ್ದರೂ ಸಹ ಟಿಕೇಟದಲ್ಲಿ ಸುಪರ್ ಫಾಸ್ಟ್ ಜರ್ನಿ ಎಂದು ನಮೂದಿಸಿ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ.
ಸುಪರ್ ಫಾಸ್ಟ್ ಎಂದು ಹೆಚ್ಚಿನ ಹಣ ಪಡೆದರೂ ಸಹ ಎಲ್ಲ ಸ್ಟೇಶನಗಳಿಗೆ ರೈಲು ನಿಲ್ಲುತ್ತದೆ. ಆದರೆ ಘಟಪ್ರಭಾದಿಂದ ಬೆಳಗಾವಿಗೆ ಹೋಗವ ಟಿಕೇಟ ದರ 50.00 ರೂಪಾಯಿ ಮಾಡಲಾಗಿದೆ. ಅದೇ ರೈಲು ಮುಂಜಾನೆ ಬೆಳಗಾವಿಯಿಂದ ಘಟಪ್ರಭಾಕ್ಕೆ ಬರುವ ದರ 20.00 ರೂಪಾಯಿ ಇರುತ್ತದೆ.
ರೈಲು ಒಂದೆ, ಹೋಗುವ ದಾರಿಯ ಅಂತರವು ಅಷ್ಟೇ, ಅಲ್ಲದೆ ಎಲ್ಲ ಸ್ಟೇಶನ್‍ಗಳಿಗೆ ನಿಲುಗಡೆಯಾಗಿ ಉಳಿದ ಪ್ಯಾಸೆಂಜರ ರೈಲುಗಳು ಹೋಗಿ ಮುಟ್ಟುವ ಸಮಯದಷ್ಟೆ ವೇಳೆ ತೆಗೆದುಕೊಳ್ಳುತ್ತಿದ್ದರೂ ಸಹ ದರ ಯಾಕೆ 30.00 ರೂಪಾಯಿ ಹೆಚ್ಚು ಎಂಬುದು ಪ್ರಯಾಣಿಕರ ಪಶ್ನೆಯಾಗಿದೆ, ಇದಕ್ಕೆ ರೆಲ್ವೆ ಇಲಾಖೆಯವರು ಉತ್ತರ ನೀಡಬೇಕಾಗಿದ್ದು, ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಪ್ರಯಾಣಿಕರ ಅಗ್ರಹವಾಗಿದೆ.