RNI NO. KARKAN/2006/27779|Tuesday, December 2, 2025
You are here: Home » ಮುಖಪುಟ » ಆಟೋ ರಿಕ್ಷಾ ಸಂಘದಿಂದ ಡಾ. ರಾಜಕುಮಾರ ಹುಟ್ಟು ಹಬ್ಬ ಆಚರಣೆ

ಆಟೋ ರಿಕ್ಷಾ ಸಂಘದಿಂದ ಡಾ. ರಾಜಕುಮಾರ ಹುಟ್ಟು ಹಬ್ಬ ಆಚರಣೆ 

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ : ನಗರದಲ್ಲಿ ಸಾರ್ವಭೌಮ ಕನ್ನಡದ ಕಣ್ಮಣಿ ದಿ ಡಾ. ರಾಜಕುಮಾರರವರ 88 ನೇ ಹುಟ್ಟು ಹಬ್ಬವನ್ನು ಆಟೋ ರಿಕ್ಷಾ ಚಾಲಕರು ಹಾಗೂ ಮಾಲಕರ ಸಂಘದಿಂದ ಕೇಕ ಕತ್ತರಿಸುವ ಮೂಲಕ ಆಚರಿಸಿದರು. ಆಟೋ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ನೇತ್ರತ್ವದಲ್ಲಿ ದಿ. ಡಾ. ರಾಜಕುಮಾರರವರಿಗೆ ಹುಟ್ಟು ಹಬ್ಬದ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಮಸ್ತಾಕ್ ಕರ್ಜಗಿ, ಚಿದಾನಂದ ಸವದತ್ತಿ, ಬಸವರಾಜ ಉಣಕಲ್ , ಪರುಶರಾಮ ಪೂಜಾರ, ಹನುಮಂತಪ್ಪ ಮುಳುಗುಂದ , ರಫೀಕ್ ಕುಂದಗೋಳ, ಅಪ್ಪಣ್ಣ ಬ್ಯಾಡಗಿ, ನಿಂಗಪ್ಪ ಗೌರಪ್ಪನವರ, ದಾವೂದಲಿ ಶೇಕ, ಹನುಮಂತ ಭಜಂತ್ರಿ, ದಾವಲ ಸಾಬ್ ಕುರಟ್ಟಿ, ಮಂಜುನಾಥ ಯರೆಗಂಬಳಿಮಠ, ಬಸವರಾಜ ಬಂಕಾಪೂರ, ಪುಂಡಲೀಕ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.

Related posts: