ಗೋಕಾಕ:ಸಂವಿಧಾನ ಯತ್ತಾವತ್ತಾಗಿ ಜಾರಿಯಾದರೆ ದೇಶದಲ್ಲಿ ಒಬ್ಬರು ಬಡವರು ಇರುವುದಿಲ್ಲ : ಬಾಹುಸಾಹೇಬ ಕಾಂಬಳೆ

ಸಂವಿಧಾನ ಯತ್ತಾವತ್ತಾಗಿ ಜಾರಿಯಾದರೆ ದೇಶದಲ್ಲಿ ಒಬ್ಬರು ಬಡವರು ಇರುವುದಿಲ್ಲ : ಬಾಹುಸಾಹೇಬ ಕಾಂಬಳೆ
ಗೋಕಾಕ ಏ 14 : ಬಾಬಾಸಾಹೇಬ ಅಂಬೇಡ್ಕರ್ ಬರೆದ ಸಂವಿಧಾನ ಯತ್ತಾವತ್ತಾಗಿ ಜಾರಿಯಾದರೆ ಸಮಸ್ಯೆ ಇಲ್ಲದ ಸಮಾನತೆಯ ದೇಶವಾಗಿ, ದೇಶದಲ್ಲಿ ಒಬ್ಬರು ಬಡವರು ಇರುವುದಿಲ್ಲ ಎಂದು ಅಥಣಿಯ ಹಿರಿಯ ನ್ಯಾಯವಾದಿ ಬಾಹುಸಾಹೇಬ ಕಾಂಬಳೆ ಹೇಳಿದರು
ಸೋಮವಾರದಂದು ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಡಾ. ಬಾಬಾಸಾಹೇಬ ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಇಂದು ನಮ್ಮ ಕಾಲಿನ ಮೇಲೆ ನಾವು ನಿಲ್ಲಲು ಸಾಧ್ಯವಾಗಿದೆ. ಸಂವಿಧಾನ ನಮ್ಮ ತಾಯಿ ಇದ್ದಂತೆ. ನಮ್ಮಲ್ಲರ ಉಸಿರಾಗಿದೆ. ಸಂವಿಧಾನದಿಂದ ಇಂದು ನಾವೆಲ್ಲ ಸ್ವಾಭಿಮಾನದ ಬದುಕನ್ನು ಬದುಕುತ್ತಿದ್ದು, ಎಲ್ಲವನ್ನು ನೀಡಿದ ಸಂವಿಧಾನವನ್ನು ಅರಿತು ಆಚರಣೆಗೆ ತರಬೇಕು. ದೇಶವು ಸಹ ದಾರಿ ತಪ್ಪಿದರೆ ಅದನ್ನು ತಿದ್ದುವ ಶಕ್ತಿ ಸಂವಿಧಾನಕ್ಕೆ ಇದೆ. ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣ ಬಹಳ ಮುಖ್ಯವಾಗಿದ್ದು, ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಉನ್ನತ ಮಟ್ಟದಲ್ಲಿ ಬೆಳೆಸಬೇಕು ಎಂದು ಕಾಂಬಳೆ ಹೇಳಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸತ್ಕರಿಸಿ, ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ ಡಾ. ಮೋಹನ್ ಭಸ್ಮೆ ವಹಿಸಿದ್ದರು .
ವೇದಿಕೆಯಲ್ಲಿ. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಘಸ್ತೆ, , ಪೌರಾಯುಕ್ತ ಆರ್.ಪಿ.ಜಾಧವ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಅಶೋಕ ಮಲಬನ್ನವರ, ಡಾ.ಎಂ.ಎಸ್.ಕೊಪ್ಪದ, ಜಿ.ಬಿ.ಬಳಗಾರ, ಡಿ.ಮೋಹನ ಕಮತ್,ಶಿವಾನಂದ ಹಿರೇಮಠ, ಮುಖಂಡರುಗಳಾದ ವೀರಭದ್ರ ಮೈಲನ್ನವರ, ಅಜೀತ ಹರಿಜನ, ತಳದಪ್ಪ ಅಮ್ಮಣಗಿ, ಓಂಕಾರ ಬಂಡಿವಡ್ಡರ, ಗೋವಿಂದ ಕಳ್ಳಿಮನಿ, ರಾಮಪ್ಪ ಮರೆಪ್ಪಗೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.