RNI NO. KARKAN/2006/27779|Thursday, July 31, 2025
You are here: Home » breaking news » ಗೋಕಾಕ:ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಇಡಿ ಮಾನವ ಕುಲಕ್ಕೆ ದಾರಿದೀಪ : ಶಾಸಕ ರಮೇಶ ಜಾರಕಿಹೊಳಿ

ಗೋಕಾಕ:ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಇಡಿ ಮಾನವ ಕುಲಕ್ಕೆ ದಾರಿದೀಪ : ಶಾಸಕ ರಮೇಶ ಜಾರಕಿಹೊಳಿ 

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಇಡಿ ಮಾನವ ಕುಲಕ್ಕೆ ದಾರಿದೀಪ : ಶಾಸಕ ರಮೇಶ ಜಾರಕಿಹೊಳಿ

ಗೋಕಾಕ ಏ 14 : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ತತ್ವ ಮತ್ತು ಸಂದೇಶಗಳು ಒಂದು ವರ್ಗ, ಸಮುದಾಯಕ್ಕೆ ಸೀಮಿತವಾಗದೆ ಇಡಿ ಮಾನವ ಕುಲಕ್ಕೆ ದಾರಿದೀಪವಾಗಿವೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಸೋಮವಾರದಂದು ನಗರದ ಅವರ ಗೃಹ ಕಛೇರಿಯಲ್ಲಿ ಹಮ್ಮಿಕೊಂಡ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು .

ವಿಶ್ವದಲ್ಲೇ ಶ್ರೇಷ್ಠ ಸಂವಿಧಾನವನ್ನು ರಚಿಸಿ ಹೊರ ರಾಷ್ಟ್ರಗಳಿಗೆ ನಮ್ಮ ಸಂವಿಧಾನ ಮಾದರಿಯಾಗುವಂತೆ ಮಾಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆ, ಆದರ್ಶ ನಡೆ ನಿತ್ಯ ಬದುಕಿನಲ್ಲಿ ಎಲ್ಲರೂ ಆಚರಣೆಗೆ ತರಬೇಕು ಎಂದು ಹೇಳಿದರು

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ , ನಗರ ಮಂಡಳ ಅಧ್ಯಕ್ಷ ಭೀಮಶಿ ಭರಮನ್ನವರ, ಹರೀಶ್ ಬೂದಿಹಾಳ, ಲಕ್ಕಪ್ಪ ತಹಶೀಲ್ದಾರ್, ಲಕ್ಷ್ಮಣ ತಳ್ಳಿ, ಬಸವರಾಜ ಹಿರೇಮಠ, ಮಂಜುನಾಥ್ ಮಾವರಕರ,ಅಬ್ದುಲ್ ವಹಾಬ ಜಮಾದಾರ, ಅಬ್ದುಲ್ ಸತ್ತಾರ ಶಾಬಾಶಖಾನ, ಗುಣಸಿಂಗ ರಜಪೂತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: