ಮೂಡಲಗಿ:ಕಲ್ಲೋಳಿ ಶ್ರೀ ಬಸವೇಶ್ವರ ಸಕಹಾರಿ ಸಂಸ್ಥೆಗೆ ರೂ. 1.70 ಕೋಟಿ ಲಾಭ
ಕಲ್ಲೋಳಿ ಶ್ರೀ ಬಸವೇಶ್ವರ ಸಕಹಾರಿ ಸಂಸ್ಥೆಗೆ ರೂ. 1.70 ಕೋಟಿ ಲಾಭ
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಏ 5 :
ತಾಲ್ಲೂಕಿನ ಕಲ್ಲೋಳಿಯ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಸ್ಥೆಯು ಪ್ರಸಕ್ತ ಮಾರ್ಚ ಕೊನೆಯಲ್ಲಿ ರೂ. 1.70 ಕೋಟಿ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಾಳಪ್ಪ ಬ. ಬೆಳಕೂಡ ತಿಳಿಸಿದರು.
ಸಂಸ್ಥೆಯ ಪ್ರಗತಿ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸದ್ಯ ರೂ. 32.25 ಕೋಟಿ ದುಡಿಯುವ ಬಂಡವಾಳ, ರೂ. 79.91 ಲಕ್ಷ ಶೇರು ಬಂಡವಾಳವನ್ನು ಹೊಂದಿದೆ ಎಂದರು.
ಸಂಸ್ಥೆಯು ರೂ. 8.61 ಕೋಟಿ ನಿಧಿಗಳನ್ನು ಹಾಗೂ ರೂ. 21.15 ಕೋಟಿ ಠೇವುಗಳನ್ನು ಹೊಂದಿದ್ದು ವಿವಿಧ ಕ್ಷೇತ್ರದ ಜನರಿಗೆ ರೂ. 26.41 ಕೋಟಿ ಸಾಲವನ್ನು ನೀಡಿ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಕೈಜೋಡಿಸಿರುವುದಾಗಿ ತಿಳಿಸಿದರು.
ಸಂಸ್ಥೆ ಸ್ಥಾಪನೆಯಾದ ಸತತ 27 ವರ್ಷಗಳಿಂದ ಶೇ. 100ರಷ್ಟು ಸಾಲವಸೂಲಾತಿಯನ್ನು ನೀಡಿ ಶೇ. 25ರಷ್ಟು ಡಿವಿಡೆಂಡ್‍ವನ್ನು ನೀಡಲಾಗಿದೆ. ಕಳೆದ 26 ವರ್ಷಗಳಿಂದ ಅಡಿಟ್‍ದಲ್ಲಿ ‘ಅ’ ಶ್ರೇಯಾಂಕವನ್ನು ಪಡೆದುಕೊಂಡಿರುವ ಹೆಗ್ಗಳಿಕೆಯಾಗಿದೆ ಸಂಸ್ಥೆಯದಾಗಿದೆ ಎಂದರು.
ಸಂಸ್ಥೆಯ ಉಪಾಧ್ಯಕ್ಷ ಶಿವರುದ್ರ ಬಿ.ಪಾಟೀಲ, ನಿರ್ದೇಶಕರಾದ ಬಿ.ಎಸ್. ಕಡಾಡಿ, ಬಿ.ಎಸ್. ಪಾಟೀಲ, ಎಂ.ಬಿ.ಖಾನಾಪುರ, ಬಿ.ಎಸ್. ಗೋರೋಶಿ, ಆರ್.ಬಿ. ದಬಾಡಿ, ಎಚ್.ಬಿ. ಪರಕನಟ್ಟಿ, ಎಸ್.ಎಂ. ಖಾನಾಪುರ, ಬಿ.ಎಸ್. ಹೆಬ್ಬಾಳ, ಪ್ರಧಾನ ವ್ಯವಸ್ಥಾಪಕ ಹನಮಂತ ಖಾನಗೌಡ್ರ ಇದ್ದರು.