ಗೋಕಾಕ:ಉಪನ್ಯಾಸಕಿ ಜ್ಯೋತಿ ತಂಬೂರಿಮಠ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ ಪದವಿ ಪ್ರಧಾನ

ಉಪನ್ಯಾಸಕಿ ಜ್ಯೋತಿ ತಂಬೂರಿಮಠ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ ಪದವಿ ಪ್ರಧಾನ
ಗೋಕಾಕ ಫೆ 12 : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಈಚೆಗೆ ಜರುಗಿದ 24ನೆಯ ಘಟಿಕೋತ್ಸವದಲ್ಲಿ ತಾಲೂಕಿನ ಮರಡಿಮಠ ಗ್ರಾಮದವರಾದ ಕೆ. ಎಲ್. ಎಸ್ ಗೊಗಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಜ್ಯೋತಿ ಸಂಗಮೇಶ ತಂಬೂರಿಮಠ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ.
ಜ್ಯೋತಿ ತಂಬೂರಿಮಠ ಮಂಡಿಸಿದ ಡೆವಲಪ್ಮೆಂಟ್ ಆಫ್ ಅಲ್ಗಾರಿತಮ್ ಫಾರ್ ಎನರ್ಜಿ ಎಫಿಸಿಯೆಂಟ್ ಹೈಬ್ರಿಡ್ ಟ್ರಾನ್ಸ್ಸಿವರ್ ಇನ್ ವೈರ್ಲೆಸ್ ಸೆನ್ಸರ್ ನೆಟ್ವರ್ಕ್ ಎಂಬ ವಿಷಯಕ್ಕೆ ಡಾಕ್ಟರೇಟ್ ಆಫ್ ಫಿಲಾಸಫಿ ಪದವಿ ಪ್ರದಾನ ಮಾಡಲಾಗಿದೆ. ಇವರ ಈ ಸಾಧನೆಗೆ ಗದುಗಿನ ತೋಂಟದ ಜಗದ್ಗುರು ಡಾ. ತೋಂಟದ ಸಿದ್ದರಾಮ ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ, ಆಡಳಿತ ಮಂಡಳಿ ಚೇರ್ಮನ್ ಎಫ್.ವಿ.ಮಾನ್ವಿ, ಪ್ರಾಚಾರ್ಯ ಡಾ.ಬಿ.ಆರ್.ಪಟಗುಂದಿ, ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥರು ಸೇರಿ ಸಿಬ್ಬಂದಿ ವರ್ಗ ಅಭಿನಂದಿಸಿದೆ.