RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ಮಹಾಮಾರಿ ಕೊರೋನಾ ಸೋಂಕು ನಿಯಂತ್ರಿಸಲು ಜನತೆ ಜಾಗೃತರಾಗಬೇಕು : ಜಾಥಾದಲ್ಲಿ ನ್ಯಾಯವಾದಿ ಸಿ.ಡಿ.ಹುಕ್ಕೇರಿ ಅಭಿಮತ

ಗೋಕಾಕ:ಮಹಾಮಾರಿ ಕೊರೋನಾ ಸೋಂಕು ನಿಯಂತ್ರಿಸಲು ಜನತೆ ಜಾಗೃತರಾಗಬೇಕು : ಜಾಥಾದಲ್ಲಿ ನ್ಯಾಯವಾದಿ ಸಿ.ಡಿ.ಹುಕ್ಕೇರಿ ಅಭಿಮತ 

ಮಹಾಮಾರಿ ಕೊರೋನಾ ಸೋಂಕು ನಿಯಂತ್ರಿಸಲು ಜನತೆ ಜಾಗೃತರಾಗಬೇಕು : ಜಾಥಾದಲ್ಲಿ ನ್ಯಾಯವಾದಿ ಸಿ.ಡಿ.ಹುಕ್ಕೇರಿ ಅಭಿಮತ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 19 :

 
ಮಹಾಮಾರಿ ಕೊರೋನಾ ಸೋಂಕು ನಿಯಂತ್ರಿಸಲು ಜನತೆ ಜಾಗೃತರಾಗಿ ಅನಾವಶ್ಯಕವಾಗಿ ಒಡಾಡದೆ ಸುರಕ್ಷಿತವಾಗಿ ಮನೆಯಲ್ಲಿದ್ದು, ಸಹಕಾರ ನೀಡುವಂತೆ ಇಲ್ಲಿನ ನ್ಯಾಯವಾದಿ ಸಂಘದ ಅಧ್ಯಕ್ಷ ಸಿ.ಡಿ.ಹುಕ್ಕೇರಿ ಜನರಲ್ಲಿ ವಿನಂತಿಸಿದರು.

ಬುಧವಾರದದಂದು ನಗರದಲ್ಲಿ ಪೊಲೀಸ ಇಲಾಖೆ ಹಾಗೂ ನ್ಯಾಯವಾದಿಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕೊರೋನಾ ಸೋಂಕು ನಿಯಂತ್ರಣ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಜನತೆ ಕಡ್ಡಾಯವಾಗಿ ಮಾಸ್ಕ ಧರಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸರಕಾರದ ನಿಯಮಗಳನ್ನು ಪಾಲನೆಮಾಡುವುದರೊಂದಿಗೆ ಈ ವೈರಸನ್ನು ನಿಯಂತ್ರಿಸಿ ಸಾವು ನೋವುಗಳನ್ನು ತಪ್ಪಿಸಲು ಸಹಕಾರ ನೀಡುವಂತೆ ಕೋರಿದರು.

ನಗರದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಪ್ರಾರಂಭವಾದ ಈ ಜಾಥಾವು ಜಾಗೃತಾ ಫಲಕಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವೇಶ್ವರ ವೃತ್ತದಲ್ಲಿ ಮುಕ್ತಾಯಗೊಂಡಿತ್ತು.
ಈ ಜಾಥಾದಲ್ಲಿ ಗೋಕಾಕ ಡಿ.ವಾಯ್.ಎಸ್.ಪಿ ಜಾವೇದ ಇನಾಂದಾರ, ಸಿಪಿಐ ಗೋಪಾಲ ರಾಠೋಡ, ಪಿಎಸ್ಐಗಳಾದ ಕೆ.ವಾಲಿಕರ, ಅಮ್ಮಿನಬಾಂವಿ, ಪೌರಾಯುಕ್ತ ಶಿವಾನಂದ ಹಿರೇಮಠ, ನ್ಯಾಯವಾದಿ ಸಂಘದ ಉಪಾಧ್ಯಕ್ಷ ವಾಯ್.ಕೆ ಕೌಜಲಗಿ ಸೇರಿದಂತೆ ಅನೇಕರು ಇದ್ದರು.

Related posts: