RNI NO. KARKAN/2006/27779|Saturday, April 4, 2026
You are here: Home » breaking news » ಗೋಕಾಕ:ರವಿವಾರ 24 ರಂದು ನಗರದ ನ್ಯೂ ಇಂಗ್ಲಿಷ್ ಸ್ಕೂಲ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರ: ಡಾ.ಸಂಜಯ ಹೋಸಮಠ

ಗೋಕಾಕ:ರವಿವಾರ 24 ರಂದು ನಗರದ ನ್ಯೂ ಇಂಗ್ಲಿಷ್ ಸ್ಕೂಲ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರ: ಡಾ.ಸಂಜಯ ಹೋಸಮಠ 

ರವಿವಾರ 24 ರಂದು ನಗರದ ನ್ಯೂ ಇಂಗ್ಲಿಷ್ ಸ್ಕೂಲ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರ: ಡಾ.ಸಂಜಯ ಹೋಸಮಠ
ಗೋಕಾಕ ನ 21 : ರವಿವಾರ 24 ರಂದು ನಗರದ ನ್ಯೂ ಇಂಗ್ಲಿಷ್ ಸ್ಕೂಲ ಆವರಣದಲ್ಲಿ ಎಲ್ಲಾ ಸಮುದಾಯ ಜನರಿಗೆ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಜಂಗಮ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಡಾ.ಸಂಜಯ ಹೊಸಮಠ ಹೇಳಿದರು.

ಗುರುವಾರದಂದು ನಗರದ ಸಂಘದ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅಂದು ಮುಂಜಾನೆ 9 : 30 ರಿಂದ ಮಧ್ಯಾಹ್ನ 2 ಘಂಟೆಯ ವರೆಗೆ ಈ ಉಚಿತ ಆರೋಗ್ಯ ಶಿಬಿರ ನಡೆಯಲ್ಲಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಇಲ್ಲಿನ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು.ಶಿಬಿರದ ಉದ್ಘಾಟನೆಯನ್ನು ಶಾಸಕ ರಮೇಶ ಜಾರಕಿಹೊಳಿ ಅವರು ನೆರೆವೇರಿಸುವರು.
ಅತಿಥಿಗಳಾಗಿ ಅಶೋಕ್ ಪೂಜಾರಿ, ಡಾ.ಶರಣಪ್ಪ ಗಡೇದ, ಡಾ.ಮುತ್ತಣ್ಣಾ ಕೊಪ್ಪದ, ಡಾ.ರವೀಂದ್ರ ಅಂಟಿನ ಆಗಮಿಸುವರು.
ಉಚಿತ ಆರೋಗ್ಯ ಶಿಬಿರದಲ್ಲಿ ಎಲ್ಲಾ ಸಮಾಜದ ಜನರಿಗೆ ಮುಕ್ತ ಅವಕಾಶ ಕಲ್ಲಸಿಲಾಗಿದ್ದು, ನೂರಿತ 14 ಜನ ತಜ್ಞರು ಶಿಬಿರಾರ್ಥಿಗಳ ಆರೋಗ್ಯ ತಪಾಸಣೆ ನಡೆಸುವರು.
ಈ ಶಿಬಿರದಲ್ಲಿ ಭಾಗವಹಿಸಿ ರಕ್ತ ತಪಾಸಣೆ, ಇ.ಸಿ.ಜಿ., ಸೇರಿದಂತೆ ಇತರ ಸ್ಕ್ಯಾನಿಂಗ ಗಳನ್ನು ಮಾಡಿಸಲು ನಗರದ ಗೋರೋಶಿ ರಕ್ತ ತಪಾಸಣಾ ಕೇಂದ್ರ, ಗುರು ರಕ್ತ ತಪಾಸಣಾ ಕೇಂದ್ರಗಳಲ್ಲಿ 50% ಪ್ರತಿಶತ ರಿಯಾಯಿತಿಯಲ್ಲಿ ರಕ್ತ ತಪಾಸಣೆ ಸೇರಿದಂತೆ ಇತರ ತಪಾಸಣೆಗಳನ್ನು ಮಾಡಲಾಗುವುದು ಎಂದ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಆರೋಗ್ಯ ಸೌಲಭ್ಯ ಸಿಗಲಿ ಎಂಬ ಉದ್ದೇಶದಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯವಂತರಾಗಬೇಕು ಎಂದು ಡಾ.ಸಂಜಯ ಕೋರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸೇವಂತಾ ಮುಚ್ಚಂಡಿ ಹಿರೇಮಠ, ಸಂಗಮೇಶ ಗುಡದೂರ್ಕಲಮಠ, ಸೋಮಶೇಖರ್ ಹಿರೇಮಠ, ಈರಣ್ಣ ಹಿರೇಮಠ, ಉದಯ ಹೊಸಟ್ಟಿಮಠ, ದೇವು ಬೆಳಂಕಿಮಠ, ಡಾ.ಪ್ರವಿಣ ಕೆಳಗಿನಮಠ, ರವಿವರ್ಮಾ ಮುಚ್ಚಂಡಿಮಠ, ಪ್ರಶಾಂತ. ಕುಮಾರಮಠ, ಆದರ್ಶ ಪೂಜಾರಿ, ಸಂಗಯ್ಯ ಹಿರೇಮಠ, ವಿರೇಂದ್ರ ಹಿರೇಮಠ, ಅನಿತಾ ಗುಡುರಕಲಮಠ, ನಿರ್ಮಲಾ ಮುನ್ನೋಳಿಮಠ, ದೀಪಾ ಹಿರೇಮಠ ಉಪಸ್ಥಿತರಿದ್ದರು.

Related posts:

ಗೋಕಾಕ:ರಮೇಶ ಜಾರಕಿಹೊಳಿ ಅವರನ್ನು ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಲು ಫನ ತೊಟ್ಟಿದ್ದೇವೆ : ಡಾ.ಭೀಮಶಿ ಜಾರಕಿ…

ಘಟಪ್ರಭಾ:ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುವ ಜವಾಬ್ದಾರಿಯು ಪಾಲಕರ ಮತು ಶಿಕ್ಷಕರ ಮೇಲಿದೆ

ಗೋಕಾಕ:ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ಉತ್ತಮ ಸಾಧಕರಾಗಿ ಸಮಾಜದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯ : ತೆನವನ್ನನ್ ಪ್ರ…