ಗೋಕಾಕ:ಸುಖ ಶಾಂತಿ ಫೌಂಡೇಶನ್ ವತಿಯಿಂದ ದ್ರಾವಣ ಸಿಂಪಡಣಾ ಸುರಂಗ ಮಾರ್ಗ ಹಾಗೂ ನೀರಿನ ಟ್ಯಾಂಕ ಸ್ಥಾಪನೆ
ಸುಖ ಶಾಂತಿ ಫೌಂಡೇಶನ್ ವತಿಯಿಂದ ದ್ರಾವಣ ಸಿಂಪಡಣಾ ಸುರಂಗ ಮಾರ್ಗ ಹಾಗೂ ನೀರಿನ ಟ್ಯಾಂಕ ಸ್ಥಾಪನೆ
ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ಎ 27 :
ಇಲ್ಲಿಯ ಸುಖ ಶಾಂತಿ ಫೌಂಡೇಶನ್ ವತಿಯಿಂದ ನಗರದ ಬಾಫನಾ ಚೌಕ ಬಳಿ ಕೊರೋನಾ ವೈರಸ ಹರಡದಂತೆ ತಡೆಯಲು ದ್ರಾವಣ ಸಿಂಪಡಣಾ ಸುರಂಗ ಮಾರ್ಗ ಮತ್ತು ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಕುಡಿಯಲು ಮತ್ತು ಕೈತೋಳೆಯಲು ನೀರಿನ ಟ್ಯಾಂಕನ್ನು ಇತ್ತಿಚೆಗೆ ನಗರಸಭಾ ಸದಸ್ಯ ಎಸ್‌ಎ ಕೊತವಾಲ ಅವರು ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಡಿ.ಎಸ್.ಪಿ ಪ್ರಭು ಡಿ.ಟಿ , ಪೌರಾಯುಕ್ತ ಶಿವಾನಂದ ಹಿರೇಮಠ , ಎಂ.ಎಚ್.ಗಜಾಕೋಶ , ಸುಖ ಶಾಂತಿ ಪೌಂಡೇಶನ್ ನ ಮುಖ್ಯಸ್ಥರಾದ ಶಿವಾನಂದ ರುಸ್ತಾನಪೂರ, ಪ್ರಮುಖರಾದ ವಿಶ್ವನಾಥ ಬಡಿಗೇರ, ಪ್ರಕಾಶ ಹನಿಮನಾಳ, ವೈಭವ ಸುತಾರ, ಜಮೀರ ಪಿಂಜಾರ, ವಿಜಯ ಕಾಗಲೆ ಸಾಗರ ಶೆಟ್ಟಿ ಸುಭೋದ , ಬಸವರಾಜ ದೇಶನೂರ ,ಕಿರಣ ಢಮಾಮಗರ ಉಪಸ್ಥಿತರಿದ್ದರು.
ಕಳೆದ ಒಂದು ತಿಂಗಳಿನಿಂದ ದೇಶಾದ್ಯಂತ ಜಾರಿಯಲ್ಲಿರುವ ಲಾಕಡೌನ ಸಂದರ್ಭದಲ್ಲಿ ಎಸ್.ಎಸ್.ಪೌಂಡೇಶನ್ ನವರು ಕರ್ತವ್ಯ ನಿರತ ಪೊಲೀಸ , ಆರೋಗ್ಯ ಇಲಾಖೆಯ ಸಿಬ್ಬಂದಿ , ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಉಪಹಾರದ ವ್ಯವಸ್ಥೆ ಹಾಗೂ ನಿರ್ಗತಿಕ ಕಡು ಬಡವರಿಗೆ ಕಿರಾಣಿ ಹಾಗೂ ದನಸಿ ವಸ್ತುಗಳನ್ನು ನೀಡಿರುವದು ಇಲ್ಲಿ ಉಲ್ಲೇಖನೀಯವಾಗಿದೆ.