RNI NO. KARKAN/2006/27779|Monday, April 21, 2025
You are here: Home » breaking news » ಗೋಕಾಕ:ಮತ್ತೆ ಬಂದ ಆದ ಲೋಳಸೂರ ಸೇತುವೆ : ನಗರದ ಕೆಲ ಪ್ರದೇಶಗಳಿಲ್ಲಿ ನುಗ್ಗಿದ ನೀರು

ಗೋಕಾಕ:ಮತ್ತೆ ಬಂದ ಆದ ಲೋಳಸೂರ ಸೇತುವೆ : ನಗರದ ಕೆಲ ಪ್ರದೇಶಗಳಿಲ್ಲಿ ನುಗ್ಗಿದ ನೀರು 

ಮತ್ತೆ ಬಂದ ಆದ ಲೋಳಸೂರ ಸೇತುವೆ : ನಗರದ ಕೆಲ ಪ್ರದೇಶಗಳಿಲ್ಲಿ ನುಗ್ಗಿದ ನೀರು

ಗೋಕಾಕ ಅ 1 : ಬುಧವಾರದಂದು ಮುಂಜಾನೆಯಷ್ಟೇ ನೀರಿನ ಹರವು ಕಡಿಮೆಯಾದ ಪರಿಣಾಮ ಲೋಳಸೂರ ಸೇತುವೆ ಮೇಲೆ ಬಂದಿದ್ದ ನೀರು ಕಡಿಮೆಯಾಗಿತ್ತು ಆದರೆ ಬುಧವಾರ ಸಾಯಂಕಾಲ ಹಿಡಕಲ್ ಜಲಾಯಶ, ದುಪಧಾಳ, ಮಾರ್ಕಂಡೇಯ, ಬಳ್ಳಾರಿ ನಾಲಾ ದಿಂದ ಒಟ್ಟು 53 ಸಾವಿರ ಕ್ಯೂಸೆಕ್ಸ ನೀರನ್ನು ಹರಿಬಿಟ್ಟಿರುವ ಪರಿಣಾಮ ಬುಧವಾರದಂದು ರಾತ್ರಿ ಮತ್ತೆ ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಲೋಳಸೂರ ಸೇತುವೆ ಮತ್ತೆ ನೀರು ಬಂದು ಸೇತುವೆ ಮುಳುಗಡೆಯಾಗಿದೆ.

ನೀರಿನ ಪ್ರಮಾಣ ಹೆಚ್ಚಾದ ಪರಿಣಾಮ ನಗರದ ಹಳೆ ದನಗಳ ಪೇಠೆ, ಕುಂಬಾರ ಓಣಿ, ಬೋಜಗರ ಓಣಿ, ಉಪ್ಪಾರ ಓಣಿಗಳಲ್ಲಿ ಮತ್ತೆ ನೀರು ನುಗ್ಗುತ್ತಿದ್ದು, ನೀರು ಕಡಿಮೆಯಾಗಿದೆ ಎಂದು ಕಾಳಜಿ ಕೇಂದ್ರಗಳಿಂದ ಮನೆಗಳಿಗೆ ಬಂದು ಸ್ವಚ್ಛತೆ ಕಾರ್ಯಕೈಗೊಂಡಿದ್ದ ಜನರು ರಾತ್ರಿ ಏಕಾಏಕಿ ನೀರು ಹೆಚ್ಚಾಗಿದರಿಂದ ಮತ್ತೆ ಕಾಳಜಿ ಕೇಂದ್ರಗಳಿಗೆ ತೆರಳಿದ್ದಾರೆ.

Related posts: