RNI NO. KARKAN/2006/27779|Saturday, June 15, 2024
You are here: Home » breaking news » ಗೋಕಾಕ:ಚುನಾವಣೆಯ ಮೂಡನಿಂದ ಹೊರಬಂದು ರಿಲ್ಯಾಕ್ಸ್ ಮೂಡನಲ್ಲಿ ಕಾಣಿಸಿಕೊಂಡ ಸಚಿವ ಸತೀಶ ಜಾರಕಿಹೊಳಿ

ಗೋಕಾಕ:ಚುನಾವಣೆಯ ಮೂಡನಿಂದ ಹೊರಬಂದು ರಿಲ್ಯಾಕ್ಸ್ ಮೂಡನಲ್ಲಿ ಕಾಣಿಸಿಕೊಂಡ ಸಚಿವ ಸತೀಶ ಜಾರಕಿಹೊಳಿ 

ಚುನಾವಣೆಯ ಮೂಡನಿಂದ ಹೊರಬಂದು ರಿಲ್ಯಾಕ್ಸ್ ಮೂಡನಲ್ಲಿ ಕಾಣಿಸಿಕೊಂಡ ಸಚಿವ ಸತೀಶ ಜಾರಕಿಹೊಳಿ

ಗೋಕಾಕ ಮೇ 8 : ಕಳೆದ ಸುಮಾರು 2 ತಿಂಗಳಿನಿಂದ ಚುನಾವಣಾ ಮೂಡನಲ್ಲಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಚುನಾವಣೆ ಮುಗಿದ ಮರುದಿನವೇ ಚುನಾವಣೆಯ ಮೂಡನಿಂದ ಹೊರಬಂದು ತಮ್ಮ ಆಪ್ತರೊಂದಿಗೆ ರಿಲ್ಯಾಕ್ಸ್ ಮೂಡಿನಲ್ಲಿ ಕಾಣಿಸಿಕೊಂಡರು.

ಚಿಕ್ಕೋಡಿ ಲೋಕಸಭಾ ಅಭ್ಯರ್ಥಿ ತಮ್ಮ ಮಗಳು ಪ್ರಿಯಾಂಕಾ ಜಾರಕಿಹೊಳಿ ಅವರ ಚುನಾವಣೆ ಪ್ರಚಾರಾರ್ಥ ಚಿಕ್ಕೋಡಿ ಲೋಕಸಭೆಯ 8 ಮತಕ್ಷೇತ್ರಗಳು ಸೇರಿದಂತೆ ರಾಜ್ಯದ ಹಲವಾರು ಕಡೆಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ , ರ್ಯಾರಿಗಗಳಲ್ಲಿ ಭಾಗವಹಿಸಿ ಸುಸ್ತಾಗಿದ್ದ ಸಚಿವ ಸತೀಶ ಜಾರಕಿಹೊಳಿ ಅವರು ಚುನಾವಣಾ ಮರುದಿನ ತಮ್ಮ ಆಪ್ತರೊಂದಿಗೆ ರಿಲ್ಯಾಕ್ಸ್ ಮೂಡನಲ್ಲಿ ಸಮಾಲೋಚನೆ ನಡೆಸಿದರು.
ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿರುವ ಶೆಟ್ಟಿ ಸ್ವೀಟ್ಸ್ ಅಂಗಡಿಯಲ್ಲಿ 2 ಘಂಟೆಗೂ ಹೆಚ್ಚು ಕಾಲ ಚುನಾವಣೋತ್ತರ ಸಮಾಲೋಚನೆ ನಡೆಸಿದರು .
ಈ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಅಷ್ಟೇ ಅಲ್ಲಾ ದೇಶಾದ್ಯಂತ ಕಾಂಗ್ರೆಸ್ ಗೆ ಬೆಂಬಲಿಸಲು ನಿರ್ಧರಿಸದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳು ಕೈ ಅಭ್ಯರ್ಥಿಗಳ ಕೈ ಹಿಡಿಯಲ್ಲಿದ್ದು, ರಾಜ್ಯದ 28 ಕ್ಷೇತ್ರಗಳಲ್ಲಿ 15 ರಿಂದ 16 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವನ್ನು ಸಾಧಿಸಲ್ಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ಬೆಳಗಾವಿ ತಮ್ಮ ಅಭ್ಯರ್ಥಿ ಅತ್ಯಂತ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಲ್ಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರು ಮಗಳಾದ ಚಂದ್ರಶೇಖರ ಕೊಣ್ಣೂರ, ಬಸವರಾಜ ಖಾನಪ್ಪನವರ, ಆರೀಪ ಪೀರಜಾದೆ, ರಮೇಶ್ ಬಿಲಕುಂದಿ, ಬಸಶೆಟ್ಟಿ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: