ಗೋಕಾಕ:ಗೋಕಾಕ 4 , ಅರಬಾಂವಿ 5 ಕಡೆ ಪಿಂಕ ಮತಗಟ್ಟೆಗಳು : ಎಸ್.ಜಿಯಾವುಲ್ಲಾ ಮಾಹಿತಿ

ಗೋಕಾಕ 4 , ಅರಬಾಂವಿ 5 ಕಡೆ ಪಿಂಕ ಮತಗಟ್ಟೆಗಳು : ಎಸ್.ಜಿಯಾವುಲ್ಲಾ ಮಾಹಿತಿ
ಗೋಕಾಕ ಏ 27 : ಮಹಿಳಾ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮೊದಲ ಬಾರಿಗೆ ರಾಜ್ಯದಲ್ಲಿ ಪಿಂಕ್ ಮತಗಟ್ಟೆಗಳನ್ನು ತೆರೆಯಲಾಗಿದ್ದು ಬೆಳಗಾವಿ ಜಿಲ್ಲೆಯಾದ್ಯಂತ ಒಟ್ಟು 50 ಕಡೆ , ಗೋಕಾಕ ಮತಕ್ಷೇತ್ರದಲ್ಲಿ 4 , ಅರಬಾಂವಿ ಮತಕ್ಷೇತ್ರದಲ್ಲಿ 5 ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಸ್ ಜಿಯಾವುಲ್ಲಾ ತಿಳಿಸಿದ್ದಾರೆ
ನಮ್ಮ ಬೆಳಗಾವಿಯೊಂದಿಗೆ ಮಾತನಾಡಿದ ಅವರು ಮಹಿಳಾ ಸಿಬ್ಬಂದಿ ನಿರ್ವಹಣೆಯ ಪಿಂಕ ಮತಗಟ್ಟೆಗಳಲ್ಲಿ ಮಹಿಳೆ ಮತ್ತು ಪುರುಷ ಮತದಾರರಿಬ್ಬರೂ ಮತ ಚಲಾಯಿಸಬಹುದು ಹೆಚ್ಚು ಮಹಿಳಾ ಮತದಾರರನ್ನು ಹೊಂದಿರುವ ಜಿಲ್ಲೆಯ 50 ಮತಗಟ್ಟೆಗಳನ್ನು ಪಿಂಕ ಮತಗಟ್ಟೆಗಳಾಗಿ ಪರಿವರ್ತಿಸಲಾಗಿದ್ದು , ಗೋಕಾಕ ಕ್ಷೇತ್ರದಲ್ಲಿ 4 , ಮತ್ತು ಅರಬಾಂವಿ ಕ್ಷೇತ್ರದಲ್ಲಿ 5 ಮತಗಟ್ಟೆಗಳನ್ನು ತೆರೆಯಲಿಗಿದೆ .
ವಿಶೇಷ ಮಹಿಳಾ ಮತಗಟ್ಟೆಗಳನ್ನು ಸಂಪೂರ್ಣವಾಗಿ ಗುಲಾಬಿ ಬಣ್ಣದಿಂದ ಅಲಂಕರಿಸಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ
ಗೋಕಾಕ ಮತ್ತು ಅರಬಾಂವಿ ಮತಕ್ಷೇತ್ರದ ಪಿಂಕ್ ಮತಗಟ್ಟೆಗಳ ಮಾಹಿತಿ ಹೀಗಿದೆ ( ಆವರಣದಲ್ಲಿ ಮತಗಟ್ಟೆಗಳ ಸಂಖ್ಯೆ)
ಗೋಕಾಕ ಮತಕ್ಷೇತ್ರ : ಮಲ್ಲಾಪೂರ ಪಿ.ಜಿ (27) , ಕೊಣ್ಣೂರ (67) , ಗೋಕಾಕ (120) , ಮೇಲಮಟ್ಟಿ (87)
ಅರಬಾಂವಿ ಮತಕ್ಷೇತ್ರ : ನಾಗನೂರ ( 19) , ಮೂಡಲಗಿ (51) , ಚಾವಡಿ ಕಲ್ಲೋಳಿ ( 95) , ಅರಬಾಂವಿ (116) , ತುಕಾನಟ್ಟಿ (17)
