ಗೋಕಾಕ:ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ : ಸಚಿವ ಜಾರಕಿಹೊಳಿ

ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ : ಸಚಿವ ಜಾರಕಿಹೊಳಿ
ಗೋಕಾಕ ಜೂ 5 : ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದ್ದು ಗಿಡ ಮರಗಳನ್ನು ಉಳಿಸಿ ಬೆಳೆಸುವ ಮೂಲಕ ಜೀವ ಸಂಕುಲ ಉಳಿವಿಗೆ ಮುಂದಾಗುವಂತೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಅವರು, ಸೋಮವಾರದಂದು ನಗರದ ಸಸ್ಯೋಧ್ಯಾನ ವನದಲ್ಲಿ ಘಟಪ್ರಭಾ ಅರಣ್ಯ ವಿಭಾಗದಿಂದ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಉತ್ತಮ ಪರಿಸರದಿಂದ ಮಾನವರು ಜೀವನ ನಡೆಸಲು ಸಾಧ್ಯ. ಮಾನವರ ದುರಾಸೆಯಿಂದ ಪರಿಸರ ನಾಶವಾಗುತ್ತಿದ್ದು, ಪ್ರಕೃತಿ ವಿಕೋಪಗಳು ಉಂಟಾಗುತ್ತಿವೆ. ಇದೆ ರೀತಿ ಪರಿಸರ ನಾಶ ಮುಂದುವರೆದರೇ ಭವಿಷ್ಯದಲ್ಲಿ ಉತ್ತಮ ಗಾಳಿಯನ್ನು ಹಣ ಕೊಟ್ಟು ಖರೀಧಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ಈಗಲೇ ಜಾಗೃತರಾಗಿ ಪರಿಸರ ರಕ್ಷಿಸುವ ಕಾರ್ಯಕ್ಕೆ ಮುಂದಾಗುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಥೋಣಿ ವ್ಮರಿಯಪ್ಪ, ವಲಯ ಅರಣ್ಯ ಅಧಿಕಾರಿ ಸಚಿಜೀವ ಸವಸುದ್ದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂಧಿ ಇದ್ದರು.