ಗೋಕಾಕ:ಸತೀಶ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಮುಗಿಸಲು ಡಿಕಶಿ ಪ್ಲಾನ್ ಮಾಡಿದ್ದಾರೆ : ನಳೀನಕುಮಾರ ಕಟೀಲ
ಸತೀಶ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಮುಗಿಸಲು ಡಿಕಶಿ ಪ್ಲಾನ್ ಮಾಡಿದ್ದಾರೆ : ನಳೀನಕುಮಾರ ಕಟೀಲ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 11 :
ಸತೀಶ ಜಾರಕಿಹೊಳಿ ಅವರನ್ನು ಉಪ ಚುನಾವಣೆಗೆ ನಿಲ್ಲಿಸುವುದರ ಮೂಲಕ ಅವರನ್ನು ರಾಜಕೀಯವಾಗಿ ಮುಗಿಸಲು ಡಿಕಶಿ ಪ್ಯ್ಲಾನ್ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಆರೋಪಿಸದರು.
ರವಿವಾರದಂದು ಸಂಜೆ ನಗರದ ಕೊಳವಿ ಮಾರುತಿ ದೇವಸ್ಥಾನದಿಂದ ರೋಡ ಶೋ ಮೂಲಕ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಆಗಮಿಸಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಬೆಳಗಾವಿ ಲೋಕಸಭಾ ಅಭ್ಯರ್ಥಿ ಮಂಗಳಾ ಅಂಗಡಿ ಅವರ ಮತಯಾಚನೆ ಮಾಡಿ ಅವರು ಮಾತನಾಡಿದರು
ಕಾಂಗ್ರೇಸ್ ಪಕ್ಷ ಇಂದು ಮೂರು ಹೊಳಾಗಿ ಅದೋಗತಿಗೆ ಬಂದಿಳಿದಿದೆ ಡಿಕೆಶಿ ನಾನು ಮುಖ್ಯಮಂತ್ರಿ , ಸಿದ್ದರಾಮಯ್ಯ ನಾನು ಮುಖ್ಯಮಂತ್ರಿ ಎಂಬ ಕಚ್ಚಾಟದ ಮಧ್ಯೆ ಸತೀಶ ಜಾರಕಿಹೊಳಿ ಅವರನ್ನು ಬೆಳಗಾವಿಗೆ ಲೋಕಸಭಾ ಉಪಚುನಾವಣೆಗೆ ನಿಲ್ಲಿಸುವ ಮುಖೇನ ಅವರನ್ನು ರಾಜಕೀಯವಾಗಿ ಮುಗಿಸಲು ತಂತ್ರಗಾರಿಕೆ ರೂಪಿಸಿದ್ದಾರೆ.
ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಇಂದು ಇಡೀ ವಿಶ್ವವೇ ಮೆಚ್ಚಿದೆ, ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ ಅದು ಮುಳುಗುವ ಧೋಣಿಯಾಗಿದೆ. ಬೆಳಗಾವಿಯ ಮತದಾರರು ಭಾರತೀಯ ಜನತಾ ಪಕ್ಷದ ಮತದಾರರು ಇಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಅರಿತ ಕಾಂಗ್ರೆಸ್ ಪಕ್ಷ ಶಾಸಕ ಸತೀಶ್ ಜಾರಕಿಹೊಳಿ ಅವರನ್ನು ಬಲಿಕೊಡಲು ಮುಂದಾಗಿದೆ ಎಂದ ಅವರು ದಿ.ಸುರೆಶ ಅಂಗಡಿ ಅವರು ಮಾಡಿದ ಕಾರ್ಯಗಳು ಅವರ ಕೈ ಹಿಡಿಯಲಿವೆ. ಅತೀ ಹೆಚ್ಚು ಪ್ರಧಾನ ಮಂತ್ರಿ ಅವರಿಂದ ಅತೀ ಹೆಚ್ಚು ಅನುದಾನವನ್ನು ದಿ.ಸುರೇಶ ಅಂಗಡಿ ತಂದಿದ್ದಾರೆ. 1 ವರ್ಷದಲ್ಲಿ 19 ಸಾವಿರ ಕೋಟಿ ಹಣಕೊಟ್ಟ ಏಕೈಕ ಮಂತ್ರಿ ಅದು ಯಾರಾದರು ಇದ್ದರೆ ಅದು ದಿ. ಸುರೇಶ ಅಂಗಡಿ ಅವರು ಅವರ ಅವಧಿಯಲ್ಲಿ ಅತೀ ಹೆಚ್ಚು ರೈಲ್ವೆ ಸಮಸ್ಯೆಗಳನ್ನು ಪರಿಹರಿಸಿದರು. ಅವರ ಯೋಜನೆಗಳನ್ನು ಅನುಷ್ಠಾನ ಗೋಳಿಸಲು ನಾವು ಫನತೊಟ್ಟು ಮಂಗಳಾ ಅಂಗಡಿ ಅವರನ್ನು ಗೆಲ್ಲಿಸಬೇಕು ಆದ್ದರಿಂದ ಈ ಭಾರಿ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ರಮೇಶ ಕತ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಶ ಪಾಟೀಲ, ಅಲ್ಪಸಂಖ್ಯಾತ ಮೋರ್ಚಾ ಶಫೀ ಜಮಾದಾರ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ , ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಇದ್ದರು.