RNI NO. KARKAN/2006/27779|Sunday, February 15, 2026
You are here: Home » breaking news » ಚಿಕ್ಕೋಡಿ:ಚಾಲಕನ ನಿಯಂತ್ರಣ ತಪ್ಪಿ ವಾಹನ ಡಿಕ್ಕಿ : ಗೋಕಾಕಿನ 8 ಜನರಿಗೆ ಗಂಭೀರ ಗಾಯ

ಚಿಕ್ಕೋಡಿ:ಚಾಲಕನ ನಿಯಂತ್ರಣ ತಪ್ಪಿ ವಾಹನ ಡಿಕ್ಕಿ : ಗೋಕಾಕಿನ 8 ಜನರಿಗೆ ಗಂಭೀರ ಗಾಯ 

ಚಾಲಕನ ನಿಯಂತ್ರಣ ತಪ್ಪಿ ವಾಹನ ಡಿಕ್ಕಿ : ಗೋಕಾಕಿನ 8 ಜನರಿಗೆ ಗಂಭೀರ ಗಾಯ
ಚಿಕ್ಕೋಡಿ ಅ 14 : ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ ವಾಹನ ಡಿವೈಡರಗೆ ಡಿಕ್ಕಿ ಹೋಡೆದ ಪರಿಣಾಮ ಎಂಟು ಜನ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ

ಚಿಕ್ಕೋಡಿ ಪಟ್ಟಣದ ಹೊರವಲಯದ ಅಂಕಲಿ ರಸ್ತೆ ಬಳಿ ಇರುವ ಬಿ. ಕೆ. ಕಾಲೆಜ್ ಹತ್ತಿರ ಕ್ರೂಸರ್‌ ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ವಾಹನದಲ್ಲಿದ್ದ 8 ಜನರಿಗೆ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಗಾಯಾಳುಗಳನ್ನು ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಾಳುಗಳು ಬೆಳಗಾವಿ ಜಿಲ್ಲೆಯ ಗೋಕಾಕ್‌ ಪಟ್ಟಣದ ನಿವಾಸಿಗಳು ಎಂದು ತಿಳಿದುಬಂದಿದೆ. ಇವರು ಮಹಾರಾಷ್ಟ್ರದ ಮೀರಜದಿಂದ ದೇವರ ದರ್ಶನ ಪಡೆದು ಬರುವಾಗ ಅಪಘಾತ ಸಂಭವಿಸಿದೆ. ಚಿಕ್ಕೋಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related posts: