RNI NO. KARKAN/2006/27779|Sunday, May 10, 2026
You are here: Home » breaking news » ಘಟಪ್ರಭಾ:ವಿಧಾನಸಭಾ ಚುನಾವಣೆಯ ನಿಮಿತ್ತ ಮಲ್ಲಾಪೂರ ಪಿಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ನಿತೀಶ ಪಾಟೀಲ-ಭೇಟಿ

ಘಟಪ್ರಭಾ:ವಿಧಾನಸಭಾ ಚುನಾವಣೆಯ ನಿಮಿತ್ತ ಮಲ್ಲಾಪೂರ ಪಿಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ನಿತೀಶ ಪಾಟೀಲ-ಭೇಟಿ 

ವಿಧಾನಸಭಾ ಚುನಾವಣೆಯ ನಿಮಿತ್ತ ಮಲ್ಲಾಪೂರ ಪಿಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ನಿತೀಶ ಪಾಟೀಲ-ಭೇಟಿ

ಘಟಪ್ರಭಾ ಮಾ 8 ; ವಿಧಾನಸಭಾ ಚುನಾವಣೆಯ ನಿಮಿತ್ತ ಬೆಳಗಾವಿ ಜಿಲ್ಲಾಧಿಕಾರಿ ನಿತೀಶ ಪಾಟೀಲ ಅವರು ಬುಧವಾರ ಘಟಪ್ರಭಾ ಪುರಸಭೆ ವ್ಯಾಪ್ತಿಯ ಮಲ್ಲಾಪೂರ ಪಿಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮತದಾನ ಕೇಂದ್ರಗಳನ್ನು ಪರಿಶೀಲನೆ ನಡೆಸಿದರು.
ಅತೀಹೆಚ್ಚು ಬೂತಗಳನ್ನು ಹೊಂದಿರುವ ಮಲ್ಲಾಪೂರ ಪಿಜಿ ಸರಕಾರಿ ಶಾಲೆಯ ಬಗ್ಗೆ ಮಾಹಿತಿ ಪಡೆದುಕೊಂಡು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನಕ್ಕೆ ತೊಂದರೆ ಆಗದಂತೆ ಯೋಗ್ಯ ಕ್ರಮ ಕೈಗೊಳ್ಳಲು ಪುರಸಭೆ ಮುಖ್ಯಾಧಿಕಾರಿ ಕೆ. ಬಿ. ಪಾಟೀಲ ಅವರಿಗೆ ಸಲಹೆ ಸೂಚನೆಗಳನ್ನು ನೀಡಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ, ಗೋಕಾಕ ತಹಶೀಲ್ದಾರ್ ಶಶಿಧರ್ ಮುದ್ದಲಮನಿ,ಕಂದಾಯ ಅಧಿಕಾರಿ ಶಿವಾನಂದ ಹಿರೇಮಠ, ಗೋಕಾಕ ನಗರಸಭೆ ಆಯುಕ್ತ ಹಿರೇಮಠ, ಅಂಭಿಯತರಾದ ಎಮ್.ಎಸ್ ತೇಲಿ, ಘಟಪ್ರಭಾ ಸಿಪಿಐ ಬಸವರಾಜ ಕಾಮನಬೈಲು, ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ, ಗ್ರಾಮ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಹಂಚನಾಳ ಸೇರಿದಂತೆ ಕಂದಾಯ ಇಲಾಖೆ ಹಾಗೂ ಪೋಲಿಸ್ ಇಲಾಖೆ ಅನೇಕ ಅಧಿಕಾರಿಗಳು, ಪುರಸಭೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts: