RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಜನರಿಗೆ ಉದ್ಯೋಗ ಔದಗಿಸುವ ಉದ್ದೇಶದಿಂದ ತಂದೆ ಸತೀಶ್ ಜಾರಕಿಹೊಳಿ ಅವರು ಹಲವಾರು ಯೋಜನೆಗಳನ್ನು ಹೊಂದಿದ್ದಾರೆ : ಪ್ರಿಯಾಂಕಾ ಜಾರಕಿಹೊಳಿ

ಗೋಕಾಕ:ಜನರಿಗೆ ಉದ್ಯೋಗ ಔದಗಿಸುವ ಉದ್ದೇಶದಿಂದ ತಂದೆ ಸತೀಶ್ ಜಾರಕಿಹೊಳಿ ಅವರು ಹಲವಾರು ಯೋಜನೆಗಳನ್ನು ಹೊಂದಿದ್ದಾರೆ : ಪ್ರಿಯಾಂಕಾ ಜಾರಕಿಹೊಳಿ 

ಜನರಿಗೆ ಉದ್ಯೋಗ ಔದಗಿಸುವ ಉದ್ದೇಶದಿಂದ ತಂದೆ ಸತೀಶ್ ಜಾರಕಿಹೊಳಿ ಅವರು ಹಲವಾರು ಯೋಜನೆಗಳನ್ನು ಹೊಂದಿದ್ದಾರೆ : ಪ್ರಿಯಾಂಕಾ ಜಾರಕಿಹೊಳಿ

ಗೋಕಾಕ ಮಾ 5 : ಜನರಿಗೆ ಉದ್ಯೋಗ ಔದಗಿಸುವ ಮಹತ್ತರ ಉದ್ದೇಶದಿಂದ ತಂದೆ ಸತೀಶ್ ಜಾರಕಿಹೊಳಿ ಅವರು ಹಲವಾರು ಯೋಜನೆಗಳನ್ನು ಹೊಂದಿದ್ದಾರೆ ಎಂದು ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು
ರವಿವಾರದಂದು ಸಮಿಪದ ಶಿಂಧಿಕುರಬೇಟ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನವಾಗಿ ಪ್ರಾರಂಭಿಸಲಾದ ಹೈ- ಕ್ವಾಲಿಟಿ ಸ್ಯಾಂಡ್ ಪ್ಲಾನ್ಟ್ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಂದೆಯವರು ತಾನು ಅಷ್ಟೇ ಬೆಳೆಯದೆ ತಮ್ಮ ಜೊತೆಗೆ ಬೇರೆಯವರನ್ನು ಬೆಳೆಸಿದ್ದಾರೆ. ದೇಶದ ಆರ್ಥಿಕ ಬೆಳೆಯಲು ಔದ್ಯೋಗಿಕರಣ ಬಹುಮುಖ್ಯವಾಗಿವೆ ಆ ದಿಸೆಯಲ್ಲಿ ಸತೀಶ ಜಾರಕಿಹೊಳಿ ಅವರ ಪ್ರಯತ್ನಿಸುತ್ತಿದ್ದಾರೆ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವು ಕೂಡಾ ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಾರ್ಯ ಮಾಡುತ್ತಾದ್ದೇವೆ ಎಂದು ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಲಕ್ಷ್ಮಿ ಎಜುಕೇಶನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸತತ ಜಾರಕಿಹೊಳಿ ಅವರು ಇಂತಹ ಚಿಕ್ಕ ಚಿಕ್ಕ ಉದ್ಯೋವನ್ನು ಸ್ಥಾಪಿಸುವ ಮೂಲಕ ಸ್ಥಳೀಯ ಜನರಿಗೆ ಉದ್ಯೋಗ ದೊರಕಿಸುವ ಜೊತೆಗೆ ಸುಭದ್ರ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಹೇಳಿದರು‌ .
ಈ ಸಂದರ್ಭದಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ, ಅರೀಪ್ ಪೀರಜಾದೆ, ಶಿವು ಪಾಟೀಲ, ದೀಪಕ ಬಾಗಲ, ನಿತೀನ ಚೌಲಗೆ, ಸೈಯದಬಾಯಿ, ಮಹೇಶ್ ಚಿಕ್ಕೋಡಿ, ಶಿವಕುಮಾರ್ ಪಾಟೀಲ ಉಪಸ್ಥಿತರಿದ್ದರು

Related posts: