ಗೋಕಾಕ:ಅವೈಜ್ಞಾನಿಕ ಕಾಮಗಾರಿಗಳನ್ನು ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮಕ್ಕೆ ಕರವೇ ಪ್ರತಿಭಟನೆ
ಅವೈಜ್ಞಾನಿಕ ಕಾಮಗಾರಿಗಳನ್ನು ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮಕ್ಕೆ ಕರವೇ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 17 :
ಅವೈಜ್ಞಾನಿಕ ಕಾಮಗಾರಿಗಳನ್ನು ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿದರು.
ಮಂಗಳವಾರದಂದು ನಗರಸಭೆ ಆವರಣದಲ್ಲಿ ಸೇರಿದ ಕರವೇ ಕಾರ್ಯಕರ್ತರು ನಗರದ ಗುತ್ತಿಗೆದಾರರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿ ಕಛೇರಿ ಅಧೀಕ್ಷಕ ಎಂ.ಎನ್ ಸಾಗರೇಕರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು
ಕಳೆದ ಹಲವು ವರ್ಷಗಳಿಂದ ಗೋಕಾಕ ನಗರದಲ್ಲಿ ಸರಕಾರದಿಂದ ಮಂಜೂರಾದ ಅಬಿವೃದ್ದಿ ಕಾಮಗಾರಿಗಳನ್ನು ಮಾಡುತ್ತಿರುವ ಗುತ್ತಿಗೆ ಪಡೆದ ಗುತ್ತಿಗೆದಾರರು ಕ್ರೀಯಾ ಯೋಜನೆ ಅನುಸಾರ ಕಾಮಗಾರಿ ಮಾಡದೆ ಅವೈಜ್ಞಾನಿಕವಾಗಿ ಕಾಮಗಾರಿಗಳನ್ನು ಮಾಡಿ ಸರಕಾರಕ್ಕೆ ಮತ್ತು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಸಹ ಯಾವುದೇ ಪ್ರಯೋಜನವಾಗಿಲ್ಲ
ನಗರವನ್ನು ಸುಂದರಗೊಳಿಸಲು ಸಾಕಷ್ಟು ಮೊತ್ತದ ಅನುದಾನ ಪ್ರತಿ ವರ್ಷ ಮಂಜೂರಾಗುತ್ತದೆ. ಹೀಗೆ ಮಂಜೂರಾದ ಅನುದಾನದ ಕ್ರೀಯಾ ಯೋಜನೆ ತಯಾರಿಸಿ , ವರ್ಕ ಆರ್ಡರ ಮಾಡಿ ಗುತ್ತಿಗೆದಾರರಿಗೆ ನೀಡಲಾಗುತ್ತದೆ. ಜೊತೆಗೆ ಕಾಮಗಾರಿ ಮಾಡುವ ಗುತ್ತಿಗೆದಾರರಿಗೆ ಕೆಲವೊಂದು ನಿರ್ದೇಶನಗಳನ್ನು ನೀಡಲಾಗುತ್ತದೆ . ಕಾಮಗಾರಿಯನ್ನು ಇಷ್ಟು ಅವಧಿಯಲ್ಲಿಯೇ ಮುಗಿಸಬೇಕು , ವರ್ಕ ಆರ್ಡರ ನಲ್ಲಿ ಯಾವ ರೀತಿ ಇದೆ ಅದೇ ರೀತಿ ಕಾರ್ಯ ಮಾಡಬೇಕು , ಎಷ್ಟು ಪ್ರಮಾಣದಲ್ಲಿ ಸಿಮೆಂಟ್ ಹಾಕಬೇಕು , ರಸ್ತೆ ಯಾವ ರೀತಿ ಮಾಡಬೇಕು , ಗಟಾರು ಯಾವ ರೀತಿ ಮಾಡಬೇಕು ಎಂಬಿತ್ಯಾದಿ ಅಂಶಗಳು ಇರುತ್ತವೆ. ಕಾಮಗಾರಿಯನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ಇದನ್ನು ಚಾಚು ತಪ್ಪದೆ ಪಾಲಿಸಬೇಕು . ಆದರೆ ಗೋಕಾಕ ನರಗದಲ್ಲಿ ಈ ಯಾವ ನಿಯಮಗಳು ಪಾಲನೆ ಯಾಗುತ್ತಿಲ್ಲ ಇದರ ಬಗ್ಗೆ ನಗರದಲ್ಲಿಯ ಸಂಘಟನೆಗಳು ಹೋರಾಟ ಮಾಡಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಅರ್ಪಿಸಿದರು ಸಹ ಯಾವದೆ ಪ್ರಯೋಜನೆ ಆಗಿಲ್ಲ , ಗೋಕಾಕದಲ್ಲಿ ಕಳೆದ 3 ವರ್ಷಗಳಿಂದ ಪ್ರಾರಂಭವಾಗಿರುವ ಮಾಸ್ಟರ ಪ್ಲ್ಯಾನ ಯೋಜನೆಯು ವರ್ಷಗಳು ಕಳೆದರು ಇನ್ನೂ ಪೂರ್ಣ ಗೋಳುತ್ತಿಲ್ಲ, ಮುಗಿದ ಯಾವೊಂದು ಕಾಮಗಾರಿಗಳು ನಿಯಮಾನುಸಾರ ಆಗಿಲ್ಲಾ. ಕಳೆದ ಅಕ್ಟೋಬರ್ 2019 ರಲ್ಲಿ ಗೋಕಾಕ ನಗರದ ಅಂಬೇಡ್ಕರ್ ವಾರ್ಡ ನಂ 21, ರಲ್ಲಿ ನಗರೋತ್ಥಾನ ( ಮುನಿಸಿಪಾಲಿಟಿ) 3ನೇ ಹಂತದ ಪರಿಷ್ಕೃತ ಕ್ರಿಯಾ ಯೋಜನೆ ಅಡಿಯಲ್ಲಿ ಮುಲ್ಲಾ ಅವರ ಮನೆಯಿಂದ ಬ್ಯಾಂಕ್ ಆಫ್ ಬರೋಡಾ ವರೆಗೆ ಸೂಮಾರು 430 ಮೀಟರ ಗಟಾರು ಮತ್ತು 430 ಮೀಟರ ರಸ್ತೆ ನಿರ್ಮಿಸಲು ಅನುದಾನ ಬಿಡುಗಡೆ ಗೊಂಡು ಗುತ್ತಿಗೆದಾರರು ಅದನ್ನು ಕಳೆದ ವರ್ಷ ಅಕ್ಟೋಬರ್ 2019 ರಲ್ಲಿ ಕಾಮಗಾರಿಯನ್ನು ಮಾಡಿ ಮುಗೆಯಿಸಿದರು . ಆದರೆ ಮುಖ್ಯ ರಸ್ತೆಯ ಎರೆಡು ಬದಿಯಲ್ಲಿ ನಿರ್ಮಿಸಬೇಕಾದ ಗಟಾರು ನಿರ್ಮಿಸದೆ ಅದನ್ನು ಹಾಗೆಯೇ ಬಿಟ್ಟು ಇಲ್ಲಿ ವಾಸಿಸುವ ಜನರಿಗೆ ಮೋಸ ಮಾಡಿದ್ದರು. ಬರೀ ಗಟಾರಿಗಾಗಿ ಬಿಡುಗಡೆ ಗೊಂಡ ಮೊತ್ತ ಒಟ್ಟು 38,92,296 ರೂ ಆದರೆ ಕಾಮಗಾರಿಯಲ್ಲಿ ಇರುವ ಹಾಗೆ ಗಟಾರು ನಿರ್ಮಾಣವಾಗದೆ ಅವೈಜ್ಞಾನಿವಾಗಿ ನಿರ್ಮಾಣ ಗೊಂಡಿವೆ. ಇದಲ್ಲದೆ 430 ಮೀಟರ ಮುಖ್ಯ ರಸ್ತೆಯು ಸಹ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದೆ ಇದನ್ನು ಮರು ನಿರ್ಮಾಣ ಮಾಡಬೇಕಾದ ಗುತ್ತಿಗೆದಾರರು ಇದನ್ನು ಮರು ನಿರ್ಮಾಣ ಮಾಡದೆ ಜನರಿಗೆ ಮತ್ತು ಸರಕಾರಕ್ಕೆ ಮೋಸ ಮಾಡಿದ್ದಾರೆ . ಇವರ ಮೇಲೆ ಕಠಿಣ ಕ್ರಮ ಕೈಗೊಂಡು ಇವರ ಮಾನ್ಯತೆಯನ್ನು ರದ್ದು ಪಡಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ , ಪದಾಧಿಕಾರಿಗಳಾದ ಸಾದಿಕ ಹಲ್ಯಾಳ ,ಕೃಷ್ಣಾ ಖಾನಪ್ಪನವರ , ಮುಗುಟ ಪೈಲವಾನ, ಅಶೋಕ ಬಂಡಿವಡ್ಡರ , ರಾಜು ಬಂಡಿವಡ್ಡರ , ಸುರೇಶ ಬಂಡಿವಡ್ಡರ , ಕೃಷ್ಣಾ ಬಂಡಿವಡ್ಡರ , ವಿಶ್ವನಾಥ್ ಹಿರೇಮಠ , ಸಾಗರ ಕಪಲಿ , ಪ್ರತೀಕ ಪಾಟೀಲ , ಸತ್ತಾರ ಬೇಪಾರಿ, ದೀಪಕ ಹಟ್ಟಿ , ಹಣಮಂತ ಅಮ್ಮಣಗಿ, ಸುರೇಶ ಪತ್ತಾರ ಸೇರಿದಂತೆ ಇತರರು ಇದ್ದರು
