RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆ

ಗೋಕಾಕ:ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆ 

ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 18 :

ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಸ್ಕೆಟಬಾಲನಲ್ಲಿ ವಿನೋದ್ ಗೌಡರ, ವಿಕಾಸಗೌಡರ, ಆರ್ಯನ್ ಉಪ್ಪಿನ ದ್ವಿತೀಯ ಸ್ಥಾನ, ಮಂಜುನಾಥ್ ಕಿಲಾರಿ ಸೈಕಲಿಂಗನಲ್ಲಿ ದ್ವಿತೀಯ ಸ್ಥಾನ, ವಿಠಲ ಜಾಲಿಗಾರ ಕುಸ್ತಿಯಲ್ಲಿ ದ್ವಿತೀಯ ಸ್ಥಾನ, ವಿಶಾಲ ಜುಗಳಿ ಭಾವಗೀತೆಯಲ್ಲಿ ಪ್ರಥಮ ಸ್ಥಾನ, ಆಕಾಶ ಗೇಜರಾಯ ಬ್ಯಾಟಮೆಂಟನಲ್ಲಿ ದ್ವಿತೀಯ ಸ್ಥಾನ, ಸ್ವಂಜನ ಶೇಖರಗೋಳ ಟೇಕೌಂಡೊದಲ್ಲಿ ದ್ವಿತೀಯ, ಸ್ವೇಥಾ ಮುಗಳಿ ಮತ್ತು ಲಕ್ಷ್ಮೀ ಕೊಪ್ಪದ  ಟ್ರೋಬಾಲನಲ್ಲಿ ದ್ವಿತೀಯ, ಉಮಾ ತಾಂಬಡಿ ಗುಡ್ಡಗಾಡು ನಡಿಗೆಯಲ್ಲಿ ಪ್ರಥಮ, ಗುರುಸಿದ್ದವ್ವ ಪೂಜೇರಿ ಕುಸ್ತಿಯಲ್ಲಿ ದ್ವಿತೀಯ, ಅಕ್ಷತಾ ಕಿತ್ತೂರ ಕರಾಠೆಯಲ್ಲಿ ದ್ವಿತೀಯ, ಕುಂಕುಮ ತಲಕೇರಿ ಡ್ರಾಯಿಂಗ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿಗಳು ಈ ಸಾಧನೆಯನ್ನು ಸಂಸ್ಥೆಯ ಚೇರಮನ್ ಡಾ.ಭೀಮಶಿ ಜಾರಕಿಹೊಳಿ, ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ, ಪ್ರಾಚಾರ್ಯ ಅರುಣ ಪೂಜೇರ, ದೈಹಿಕ ಶಿಕ್ಷಣ ಮಾರ್ಗದರ್ಶಕ ಶಿವಾನಂದ ಬಾಗಯಿ ಹಾಗೂ ಸಿಬ್ಬಂದಿ ಅಭಿನಂದಿ‌ಸಿದ್ದಾರೆ.

Related posts: