ಗೋಕಾಕ:ಉಪ-ಚುನಾವಣೆ ರಾಜ್ಯದ ಜನತೆ ಬಯಸಿದಲ್ಲ, ಗೋಕಾಕ ರಾಜಕಾರಣದಿಂದ ಈ ಪರಿಸ್ಥಿತಿ ಬಂದಿದೆ : ಕುಮಾರಸ್ವಾಮಿ ಆರೋಪ

ಉಪ-ಚುನಾವಣೆ ರಾಜ್ಯದ ಜನತೆ ಬಯಸಿದಲ್ಲ, ಗೋಕಾಕ ರಾಜಕಾರಣದಿಂದ ಈ ಪರಿಸ್ಥಿತಿ ಬಂದಿದೆ : ಕುಮಾರಸ್ವಾಮಿ ಆರೋಪ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 18 :
ಉಪ-ಚುನಾವಣೆ ರಾಜ್ಯದ ಜನತೆ ಬಯಸಿದಲ್ಲ, ಗೋಕಾಕ ರಾಜಕಾರಣದಿಂದ ಈ ಪರಿಸ್ಥಿತಿ ಬಂದಿದೆ ಎಂದು ಮಾಜಿ ಸಿ.ಎಂ ಕುಮಾರಸ್ವಾಮಿ ಹೇಳಿದರು.
ಸೋಮವಾರದಂದು ಸಂಜೆ ನಗರದ ಜ್ಞಾನ ಮಂದಿರ ಆಧ್ಯಾತ್ಮ ಕೇಂದ್ರದಲ್ಲಿ ಉಪ-ಚುನಾವಣೆ ನಿಮಿತ್ಯ ಕರೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು
ಸಮ್ಮಿಶ ಸರಕಾರ ಕೆಡವಲು ಆರಂಭಿಕ ಸೂತ್ರದಾರ ರಮೇಶ ಜಾರಕಿಹೊಳಿ. ತಾಲೂಕಿನ ಜನರ ದಾರಿ ತಪ್ಪಿಸುವ ಕಾರ್ಯ ಜಾರಕಿಹೊಳಿ ಕುಟುಂಬದಿಂದ ನಡೆದಿದೆ ಅವರು ಮಾಡಿದ್ದನ್ನು ಜನರು ಒಪ್ಪುತ್ತಾರೆ ಎಂಬ ತಪ್ಪು ಕಲ್ಪನೆ ರಮೇಶ ಅವರದ್ದು ಅದು ಈಗ ನಡೆಯುವದಿಲ್ಲ, ರಾಜ್ಯದ ಹಾಗೂ ಬೆಳಗಾವಿ ಜಿಲ್ಲೆಯ ನೆರೆಯಿಂದ ಹಾನಿಗಳಾಗಿ ಜನತೆ ಸಂಕಷ್ಟದಲಿದ್ದರೇ ಇವರು ಸ್ವಾರ್ಥಕ್ಕಾಗಿ ಮುಂಬೈನಲ್ಲಿ ಇದ್ದರು. ಜನರ ಕಷ್ಟಗಳಿಗೆ ಸ್ವಂದಿಸದ ವ್ಯಕ್ತಿ ರಮೇಶ ಜಾರಕಿಹೊಳಿ ಹಿಂತಹ ಪರಿಸ್ಥಿಯಲ್ಲಿ ಚುನಾವಣೆ ತಂದಿದ್ದಾರೆ. ರಾಜಕಾರಣವೆಂದರ ರಮೇಶ ಅವರು ಹುಡುಗಾಟಿಕೆ ಎಂದು ತಿಳಿದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬೆಳಗಾವಿ ಸಾವಕಾರ ಅಂದು ಜನರು ಪಟ್ಟ ಕಟ್ಟಿದ್ದಾರೆ ಅದೆಂತಹ ಸಾವಕಾರು ನನಗೆ ತಿಳಿದಿಲ್ಲ ನಮ್ಮ ತಪ್ಪನಿಂದ ಬಿಜೆಪಿ ಅವರು ಅಧಿಕಾರ ಗಿಟ್ಟಿಸಿದ್ದಾರೆ ಜನರು ಈ ಬಾರಿ ಹೊಸ ಇತಿಹಾಸ ಬರೆಯುತ್ತಾರೆ ನೆರೆಯಿಂದ ಹಾನಿಯಾದ ೨.೫ ಲಕ್ಷ ಬೆಳೆ ಹಾನಿಯಾಗಿದ್ದು ಪರಿಹಾರ ನೀಡಲು ಕಮಿಷನ್ ಪಡೆಯುತ್ತಿದ್ದಾರೆ ಇವರಿಗೆ ಜನರ ಕಿಂಚ್ಚತ್ತು ಕಿಮತಿಲ್ಲ ಎಂದ ಅವರು ಗೋಕಾಕ ತಾಲೂಕು ಒಂದರಲ್ಲಿಯೇ ಸುಮಾರು ೪೦ ಸಾವಿರಕ್ಕೂ ಹೆಚ್ಚು ರೈತರ ಸಾಲ ಮನ್ನಾ ಆಗಿದೆ. ಮನೆ ಮನೆಗೆ ಹೋಗಿ ಸಾಲಮನ್ನಾ ಬಗ್ಗೆ ತಿಳಿಯಿಸಿ ಮತ ಕೇಳುತ್ತೇವೆ ಈ ಚುನಾವಣೆಯನ್ನು ನಾನು ಸವಾಲಾಗಿ ತಗೆದು ಕೊಂಡಿದ್ದೇನೆ. ಮೂರು ಕ್ಷೇತ್ರದ ಅಭ್ಯರ್ಥಿಗಳು ಗೆದ್ದು ಬಂದರೆ ಸರ್ಕಾರದಿಂದ ಕಬ್ಬು ಬೆಳೆಗಾರರಿಗೆ ಹೆಕ್ಟೇರಗೆ ೫೦ಸಾವಿರ ಪರಿಹಾರಧನ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ನಾನು ರಾಜಕಾರಣಕ್ಕೆ ಬರುವ ಮೊದಲು ಅಶೋಕ ಪೂಜಾರಿ ಅವರು ಪಕ್ಷವನ್ನು ಕಟ್ಟಿದ್ದಾರೆ, ಕಾರಣಾಂತರಗಳಿಂ ದ ಹಾಗೂ ನಮ್ಮ ಲೋಪದೋಷಗಳಿಂದ ಅವರು ಪಕ್ಷ ತೊರೆದಿದ್ದು ಬಿಜೆಪಿಗೆ ಸೇರಿದ್ದರು. ಈಗ ಮರಳಿ ತವರು ಮನೆಗೆ ಬಂದಿದ್ದು ಖುಷಿ ತಂದಿದ್ದೆ. ಗೋಕಾಕ ತಾಲೂಕಿನ ದಬ್ಬಾಳಿಕೆ ರಾಜಕಾರಣದ ವಿರುದ್ಧ ಹಲವಾರು ಅಮಾಯಕರಿಗೆ ರಕ್ಷಣೆ ನೀಡಲು ನಮ್ಮ ಹೋರಾಟ ಈ ಚುನಾವಣೆ ಎಲ್ಲ ಪಕ್ಷದವರಿಗೆ ಅಗ್ನಿ ಪರೀಕ್ಷೆಯಾಗಿದೆ ಇದರಲ್ಲಿ ಯಾವುದೇ ರಾಜೀ ಇಲ್ಲ ಅಶೋಕ ಪೂಜಾರಿ ಗೆಲುವು ನನ್ನ ಗುರಿ, ಬೆಳಗಾವಿ ಜಿಲ್ಲೆ ಬಗ್ಗೆ ವಿಶೇಷ ಅಭಿಮಾನವನ್ನು ಹೊಂದಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಅಧಿವೇಶನ ನಡೆಸುವ ಮೂಲಕ ಮತ್ತು ಸುವರ್ಣ ಸೌಧ ಕಟ್ಟಿಸಿ ಅಲ್ಲಿ ಅಧಿವೇಷನ ನಡೆಸಿರುವುದು ಅಲ್ಲದೇ ಬೆಳಗಾವಿ ಅಭಿವೃದ್ಧಿಗಾಗಿ ನೂರಾರು ಕೋಟಿ ರೂಗಳನ್ನು ಬಿಡುಗಡೆ ಮಾಡಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
ನರೇಂದ್ರ ಮೋದಿ ಅವರ ನೇತ್ರತ್ವದ ಕೇಂದ್ರ ಸರ್ಕಾರ ಯುವ ಪೀಳಿಗೆ ಉದ್ಯೋಗವನ್ನು ಕಲ್ಪಿಸುತ್ತಿಲ್ಲ, ರೈತರ ಪರವಾದ ಕೆಲಸವನ್ನು ಮಾಡುತ್ತಿಲ್ಲ, ಅಭಿವೃದ್ಧಿ ಶೂನ್ಯವಾಗಿದೆ ಮುಂದಿನ ದಿನ ಬೆಳಗಾವಿಯೇ ಇದ್ದು ಇದರ ಪ್ರಚಾರ ಮಾಡುತ್ತೇನೆ
ಬೆಳಗಾವಿ ಜಿಲ್ಲೆಯ ಮೂರು ಕ್ಷೇತ್ರಗಳನ್ನು ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಗೆಲ್ಲಿಸಿದರೇ ನೆರೆ ಸಂತ್ರಸ್ತರ ಕುಟುಂಗಳಿಗೆ ಪುನರ್ ಜೀವನ ಕಲ್ಪಿಸುತೇನೆ. ರೈತರ ಸಾಲಮನ್ನಾಕ್ಕಾಗಿ ಈಗಾಗಲೇ ಇನ್ನೂ ೧೬೦೦ ಸಾವಿರ ಕೋಟಿ ರೂಗಳನ್ನು ಮಿಸಲಿಟ್ಟು, ತಾಂತ್ರಿಕ ತೊಂದರೆಗಳನ್ನು ನಿಭಾಯಿಸಲು ಪ್ರಯತ್ನಿಸುತ್ತಿದ್ದೇನೆ. ಸಾಲ ಮನ್ನ ನನ್ನನ್ನು ಸಂಪರ್ಕಿಸಲು ಸಹಾಯವಾಣಿ ಕೇಂದ್ರವನ್ನು ತೆರೆದಿದ್ದೇನೆ ಎಂದು ತಿಳಿಸಿದರು.
ಮಹಾರಾಷ್ಟ್ರದಲ್ಲಿ ಕೋಮುವಾದಿ ಶಿವಸೇನಾ ಜೊತೆ ಎನ್‌ಸಿಪಿ ಹಾಗೂ ಕಾಂಗ್ರೆಸ ಪಕ್ಷದ ಜೊತೆ ಸೇರಿ ಸರಕಾರ ರಚಿಸುವ ಪ್ರಯತ್ನ ನಡೆದಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡುತ್ತ ಬಿಜೆಪಿ ಸಾಫ್ಟ ಹಿಂದುತ್ವ ನೀತಿ ಹೊಂದಿದ್ದರೆ ಶಿವಸೇನಾ ಹಾರ್ಡ ಹಿಂದುತ್ವ ಹೊಂದಿದ ಪಕ್ಷವಾಗಿದ್ದು ಅವರ ಜೊತೆ ಕಾಂಗ್ರೆಸನವರ ಹೋಗುತ್ತಿರುವದು ಜನತೆಯೇ ವಿಚಾರ ಮಾಡಬೇಕು.
– ಕುಮಾರಸ್ವಾಮಿ ಮಾಜಿ ಸಿ.ಎಂ ಜೆಡಿಎಸ್ ಮುಖಂಡ