RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ಸಾಧನೆಗೆ ಬಡತನ , ಜಾತಿ ಅಡ್ಡಿ ಬರುವದಿಲ್ಲ ಎಂಬುದನ್ನು ಅನೇಕ ಮಹನೀಯರು ಸಾಧಿಸಿ ತೋರಿಸಿದ್ದಾರೆ : ಮಹಾಂತೇಶ ಕವಟಗಿಮಠ

ಗೋಕಾಕ:ಸಾಧನೆಗೆ ಬಡತನ , ಜಾತಿ ಅಡ್ಡಿ ಬರುವದಿಲ್ಲ ಎಂಬುದನ್ನು ಅನೇಕ ಮಹನೀಯರು ಸಾಧಿಸಿ ತೋರಿಸಿದ್ದಾರೆ : ಮಹಾಂತೇಶ ಕವಟಗಿಮಠ 

ಸಾಧನೆಗೆ ಬಡತನ , ಜಾತಿ ಅಡ್ಡಿ ಬರುವದಿಲ್ಲ ಎಂಬುದನ್ನು ಅನೇಕ ಮಹನೀಯರು ಸಾಧಿಸಿ ತೋರಿಸಿದ್ದಾರೆ : ಮಹಾಂತೇಶ ಕವಟಗಿಮಠ
ನಮ್ಮ ಬೆಳಗಾವಿ ಇ- ವಾರ್ತೆ ಗೋಕಾಕ ಜೂ 25 :
ಸಾಧನೆಗೆ ಬಡತನ , ಜಾತಿ ಅಡ್ಡಿ ಬರುವದಿಲ್ಲ ಎಂಬುದನ್ನು ಅನೇಕ ಮಹನೀಯರು ಸಾಧಿಸಿ ತೋರಿಸಿದ್ದಾರೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಹಾಲಿ ಕೆಎಲ್ಇ ನಿರ್ದೇಶಕ ಮಹಾಂತೇಶ ಕವಟಗಿಮಠ ಹೇಳಿದರು.

ಶನಿವಾರದಂದು ನಗರದ ಕೆಎಲ್ಇ ಸಂಸ್ಥೆಯ ಸಿ.ಎಸ್.ಅಂಗಡಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಸತ್ಕರಿಸಿ ಮಾತನಾಡುತ್ತಾ ಮಹನೀಯರ ಸಾಧನೆಯ ಪ್ರೇರಣೆಯಿಂದ ತಾವು ಸಾಧಕರಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳುವಂತೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ನಿರ್ದೇಶಕ ಜಯಾನಂದ ಮುನ್ನವಳ್ಳಿ ಮಾತನಾಡಿ ಪ್ರಸಕ್ತ ಸಾಲಿನಿಂದ ಬಿ.ಎಸ್.ಇ ನರ್ಸಿಂಗ್ , ಬಿಬಿಎ ಹಾಗೂ ಪ್ಯಾಶನ್ ಟೆಕ್ನಾಲಜಿ ಕಾಲೇಜುಗಳನ್ನು ಪ್ರಾರಂಭಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಸಿಕೊಳುಬೇಕು. ಈ ಬಾರಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, 136 ವಿದ್ಯಾರ್ಥಿಗಳು ಪ್ರಶಸ್ತಿ ಸಹಿತ ಪ್ರಥಮ ಸ್ಥಾನ ಹಾಗೂ 288 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ‌. ಗಣಿತದಲ್ಲಿ 16 , ಭೌತಶಾಸ್ತ್ರದಲ್ಲಿ 7, ಲೆಕ್ಕಶಾಸ್ತ್ರದಲ್ಲಿ 9, ವ್ಯವಹಾರ ಅಧ್ಯಯನದಲ್ಲಿ 2, ಗಣಕ ವಿಜ್ಞಾನದಲ್ಲಿ 3, ಇತಿಹಾಸ ಹಾಗೂ ಕನ್ನಡದಲ್ಲಿ ತಲಾ 1 ವಿದ್ಯಾರ್ಥಿಗಳು 100ಕ್ಕೆ 100 ರಷ್ಟು ಅಂಕ ಪಡೆದಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ವಿದ್ಯಾರ್ಥಿಗಳ ಸಾಧನೆಯನ್ನು ಹೋಗಳಿದರು.

ಇದೇ ಸಂದರ್ಭದಲ್ಲಿ ವಿಜ್ಞಾನ ವಿಭಾಗದಲ್ಲಿ ಅಬೊಬಕರ ಮತ್ತೆ 96.33%, ಶ್ರದ್ದಾ ಕರಕನ್ನವರ 95.16% ಐಶ್ವರ್ಯ ಉಳವಿ 91.20% ವಾಣಿಜ್ಯ ವಿಭಾಗದಲ್ಲಿ ಯುಕ್ತಾ ಶಹಾ 96. 83%, ಅಭಿಶೇಖ ಕೋಕ್ಕರಿ 95.33%, ಐಶ್ವರ್ಯ ರಜಪೂತ 94.83% ಕಲಾ ವಿಭಾಗದಲ್ಲಿ ಅಕ್ಷತಾ ಸೂರ್ಯನವರ 95.5%, ಉಮೇಶ ಜುಗ್ಯಾಗೋಳ 94.83%, ಸೋಮಪ್ಪ ಮಾಲಪ್ಪಗೋಳ 94.3% ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಿ ,ಗೌರವಿಸಲಾಯಿತು.

ವೇದಿಕೆಯಲ್ಲಿ ಸ್ಥಳೀಯ ಕೆಎಲ್ಇ ಸಲಹಾ ಸಮಿತಿಯ ಅಧ್ಯಕ್ಷ ಎಂ.ಡಿ.ಚುನಮರಿ,ಸದಸ್ಯ ಚಂದ್ರಶೇಖರ್ ಅಕ್ಕಿ, ಆಡಳಿತಾಧಿಕಾರಿ ಜಿ.ಎಂ.ಅಂದಾನಿ, ಪ್ರಾಚಾರ್ಯ ಕೆ.ವ್ಹಿ ಮೆವುಂಡಿಮಠ ಇದ್ದರು.

Related posts: