ಕೌಜಲಗಿ:ಶ್ರೀಕೃಷ್ಣ ಪಾರಿಜಾತೋತ್ಸವ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ
ಶ್ರೀಕೃಷ್ಣ ಪಾರಿಜಾತೋತ್ಸವ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ
ನಮ್ಮ ಬೆಳಗಾವಿ ಇ – ವಾರ್ತೆ ಕೌಜಲಗಿ ಫೆ 11 :
ಶ್ರೀಕೃಷ್ಣ ಪಾರಿಜಾತ ಆಧ್ಯಾತ್ಮಿಕ ಮನೋಭಾವ ತುಂಬುವ, ಸಾಮಾಜಿಕ, ಕೌಟುಂಬಿಕ ಜೀವನದ ಮೌಲ್ಯಗಳನ್ನು ತಿಳಿಸಿಕೊಡುವ ಶ್ರೇಷ್ಠ ಬಯಲಾಟವಾಗಿದೆ ಎಂದು ಕುಲಗೋಡ ತಮ್ಮಣ್ಣ ಪ್ರತಿಷ್ಠಾನದ ಅಧ್ಯಕ್ಷ ರಮೇಶ ಲವಪ್ಪ ಕೌಜಲಗಿ ಅಭಿಪ್ರಾಯಿಸಿದರು.
ಸಮೀಪದ ಕುಲಗೋಡ ಗ್ರಾಮದ ಬಲಭೀಮ ದೇವರ ಮರುಕಾರ್ತಿಕೋತ್ಸವ ಹಾಗೂ ಪಾರಿಜಾತ ಪಿತಾಮಹ ಕುಲಗೋಡ ತಮ್ಮಣ್ಣ ಪ್ರತಿಷ್ಠಾನದ 12ನೇ ವಾರ್ಷಿಕೋತ್ಸವದ ಅಂಗವಾಗಿ ಬೆಳಗಾವಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಶ್ರೀ ಪರಮೇಶ್ವರ ಶ್ರೀಕೃಷ್ಣ ಪಾರಿಜಾತ ಬಯಲಾಟ ಮೇಳ ಅಡಿಬಟ್ಟಿ ಹಾಗೂ ಶ್ರೀ ಲಕ್ಷ್ಮೀದೇವಿ ಭಜನಾ ಮೇಳ ಅಡಿಬಟ್ಟಿ ಇವರುಗಳ ಸಹಯೋಗದೊಂದಿಗೆ ಶನಿವಾರ ಶ್ರೀಕೃಷ್ಣ ಪಾರಿಜಾತೋತ್ಸವ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಸಮಾರಂಭದಲ್ಲಿ ಮಾತನಾಡಿ, ತಮ್ಮಣ್ಣ ರೂಪಿಸಿದ ಪಾರಿಜಾತ ಬಯಲಾಟ ಶ್ರೇಷ್ಠವಾದ ಆಟವಾಗಿದ್ದು, ಅದರಲ್ಲಿರುವ ಅಂತಃಶಕ್ತಿಯಿಂದಾಗಿ ಇಂದಿಗೂ ಜೀವಂತ ಕಲೆಯಾಗಿ ಪ್ರದರ್ಶಿತಗೊಳ್ಳುತ್ತಿದೆ. ತಮ್ಮಣ್ಣನ ಸ್ಮರಣೆ ಗ್ರಾಮದಲ್ಲಿ ಶಾಶ್ವತವಾಗಿ ಉಳಿಸುವ ದೃಷ್ಟಿಯಿಂದಾಗಿ ಸಂಕೇಶ್ವರ ಜೇವರ್ಗಿ; ಜಾಂಬೋಟಿ-ರಬಕವಿ ಕೂಡು ರಸ್ತೆಯಲ್ಲಿ ಪಾರಿಜಾತ ಪಿತಮಹ ಕುಲಗೋಡ ತಮ್ಮಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಗ್ರಾಮಸ್ಥರು ಶ್ರಮಿಸಬೇಕೆಂದು ಹೇಳಿದರು.
ಕಾರ್ಯಕ್ರಮವನ್ನು ಗ್ರಾ.ಪಂ. ಮಾಜಿ ಅಧ್ಯಕ್ಷ ಬಸವಗೌಡ ಪಾಟೀಲ ಉದ್ಘಾಟಿಸಿ ಮಾತನಾಡಿ, ಪಾರಿಜಾತ ಕಲೆಯ ಉಳಿವಿಗಾಗಿ, ತಮ್ಮಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಪ್ರತಿಯೊಬ್ಬರು ದುಡಿಯಬೇಕೆಂದು ಕರೆ ನೀಡಿದರು.
ಯಾದವಾಡ ಜಿ.ಪಂ.ಸದಸ್ಯ ಗೋವಿಂದ ಭೀ. ಕೊಪ್ಪದ ಜ್ಯೋತಿ ಬೆಳಗಿಸಿ ಮಾತನಾಡಿ, ತಮ್ಮಣ್ಣನವರು ಕುಲಗೋಡ ಕೀರ್ತಿಯ ಜಗತ್ತಿನಾದ್ಯಂತ ಪಸರಿಸಿದ್ದಾರೆ. ಅವರ ಪಾರಿಜಾತ ಅಜರಾಮರವಾಗಿ ಉಳಿಯಬೇಕು. ಗ್ರಾಮದಲ್ಲಿ ಪಾರಿಜಾತ ಮೇಳ ರೂಪಗೊಳ್ಳಬೇಕು. ಪಾರಿಜಾತ ಕಲಾವಿದರಿಗೆ ಸರಕಾರದಿಂದ ಸೌಲಭ್ಯ ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ಹೇಳಿದರು.
ಮುಖ್ಯಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ಜೆ.ಡಿ.ಎಸ್. ಪ್ರಧಾನ ಕಾರ್ಯದರ್ಶಿ ಸತೀಶ ವಂಟಗೋಡಿ, ಮಾಜಿ ತಾ.ಪಂ.ಸದಸ್ಯ ಸುಭಾಸ ವಂಟಗೋಡಿ, ಡಾ.ಭೀಮಶಿ ಪತ್ತಾರ ಮುಂತಾದವರು ಮಾತನಾಡಿದರು.
ಅಧ್ಯಕ್ಷತೆಯನ್ನು ಬೆಂಗಳೂರಿನ ಆತ್ಮಶ್ರೀ ಟ್ರಸ್ಟ್‍ನ ಸಂಸ್ಥಾಪಕ ಕಾರ್ಯದರ್ಶಿ ಡಾ.ಭೀಮಪ್ಪ ದೇವರ ವಹಿಸಿ ಮಾತನಾಡಿ, ಕುಲಗೋಡ ಗ್ರಾಮದಲ್ಲಿ ಹುಟ್ಟಿದ ಪಾರಿಜಾತ ಕಲೆ ಜಗಮೆಚ್ಚಿದ ಬಯಲಾಟವಾಗಿದ್ದು, ಅಮೇರಿಕದಲ್ಲಿಯೂ ಅದ್ಭುತವಾಗಿ ಪ್ರದರ್ಶನಗೊಂಡು ಅಮೇರಿಕನ್ನರ ಮೆಚ್ಚುಗೆ ಪಡೆದ ಜನಪದ ಬಯಲಾಟವಾಗಿದೆ. ಇಂತಹ ಬಯಲಆಟವನ್ನು ವಿಶ್ವಕ್ಕೆ ನೀಡಿದ ತಮ್ಮಣ್ಣನ ಮೂರ್ತಿಯನ್ನು ಗ್ರಾಮದಲ್ಲಿ ಪ್ರತಿಷ್ಠಾಪಿಸಬೇಕೆಂದು ಹೇಳಿದರು.
ವೇದಿಕೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಶಕುಂತಲಾ ಚಿಪ್ಪಲಕಟ್ಟಿ, ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯೆ ವಾಣಿ ಭೀಮಪ್ಪ ದೇವರ, ರಾಮಣ್ಣ ಬೈರನಟ್ಟಿ, ಮಾರುತಿ ಬಾಗಿಮನಿ, ಬಸವರಾಜ ಯಕ್ಸಂಬಿ, ಸದಾಶಿವ ದೇವರ, ಅಲ್ಲಪ್ಪ ಪರುಶೆಟ್ಟಿ, ಶ್ರೀಪತಿ ಗಣಿ, ಶಂಕರ ಪಾಟೀಲ, ಬಸವರಾಜ ಪಾಟೀಲ ಮುಂತಾದವರಿದ್ದರು.
ರವಿರಾಜ ತಿಪ್ಪಿಮನಿ ಸ್ವಾಗತಿಸಿ, ನಿರೂಪಿಸಿದರು. ಈರಣ್ಣ ಚಂದರಗಿ ವಂದಿಸಿದರು.