RNI NO. KARKAN/2006/27779|Saturday, February 14, 2026
You are here: Home » breaking news » ಘಟಪ್ರಭಾ:ಕನ್ನಡ ಪರ ಸಂಘಟನೆಗಳು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು : ತಲವಾರ

ಘಟಪ್ರಭಾ:ಕನ್ನಡ ಪರ ಸಂಘಟನೆಗಳು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು : ತಲವಾರ 

ಕನ್ನಡ ಪರ ಸಂಘಟನೆಗಳು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು : ತಲವಾರ
ಘಟಪ್ರಭಾ ಸೆ 28 : ಪ್ರತಿಯೊಬ್ಬರಲ್ಲಿಯೂ ಕನ್ನಡಾಭಿಮಾನ ಬೆಳೆಯಬೇಕೆಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಮಲೀಕಜಾನ ತಲವಾರ ಹೇಳಿದರು.

ಅವರು ಮಂಗಳವಾರದಂದು ಸಂಜೆ ಸಮೀಪದ ಕೊಣ್ಣೂರು ಪಟ್ಟಣದಲ್ಲಿ ನೂತನವಾಗಿ ಜಯ ಕರ್ನಾಟಕ ಸಂಘಟನೆಯ ಯುವ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಪರ ಸಂಘಟನೆಗಳು ಕೇವಲ ಕನ್ನಡಕ್ಕಾಗಿ ಹೋರಾಟ ಮಾಡದೇ ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸೌಲಭ್ಯವನ್ನು ದೊರಕಿಸಿ ಕೊಡುವಂತಹ ಕಾರ್ಯ ಮಾಡಬೇಕು. ಕನ್ನಡ ನಾಡು ನುಡಿ, ಜಲಕ್ಕಾಗಿ ಹೋರಾಟ ಮಾಡಿ ಕನ್ನಡ ಉಳಿವಿಗಾಗಿ ಹಗಲಿರುಳು ಶ್ರಮಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಯುವ ಮುಖಂಡ ವಿನೊಂಧ ಕರನಿಂಗ , ತಾಲೂಕಾಧ್ಯಕ್ಷ ಹೈದರಲಿ ಮುಲ್ಲಾ, ಘಟಕ ಅಧ್ಯಕ್ಷ ಅನಿಸ ಮುಲ್ಲಾ, ಅಜೀಜ ಮೊಕಾಶಿ, ಮೌಲಾ ಪುಲತಾಂಬೆ, ಸಂತೋಷ ಲಕ್ಕುಂಡಿ, ಅಕ್ಷಯ, ಬಬಲು ಬಾಗೇವಾಡಿ, ಇಮ್ರಾನ ಜುನೇದಿ, ಅಬೂಬಕರ ಅವಟಿ, ಬಾಳಪ್ಪ ಪೂಜೇರಿ ಸೇರಿದಂತೆ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಇದ್ದರು.

Related posts: