RNI NO. KARKAN/2006/27779|Saturday, March 14, 2026
You are here: Home » breaking news » ಅಜ್ಮೇರ:ಪ್ರವಾಸ ಕಥನಗಳು ಜ್ಞಾನಾರ್ಜನೆಗೆ ಹೆಚ್ಚು ಸಹಾಯಕವಾಗಿವೆ : ಹಜರತ ಸೈಯದ ಶಾಹಿದ ಹುಸೇನಿ

ಅಜ್ಮೇರ:ಪ್ರವಾಸ ಕಥನಗಳು ಜ್ಞಾನಾರ್ಜನೆಗೆ ಹೆಚ್ಚು ಸಹಾಯಕವಾಗಿವೆ : ಹಜರತ ಸೈಯದ ಶಾಹಿದ ಹುಸೇನಿ 

ಪ್ರವಾಸ ಕಥನಗಳು ಜ್ಞಾನಾರ್ಜನೆಗೆ ಹೆಚ್ಚು ಸಹಾಯಕವಾಗಿವೆ : ಹಜರತ ಸೈಯದ ಶಾಹಿದ ಹುಸೇನಿ

 

ನಮ್ಮ ಬೆಳಗಾವಿ ಇ – ವಾರ್ತೆ, ಅಜ್ಮೇರ ಅ 23 :

 
ಪ್ರವಾಸ ಕಥನಗಳು ಜ್ಞಾನಾರ್ಜನೆಗೆ ಹೆಚ್ಚು ಸಹಾಯಕವಾಗಿವೆ ಎಂದು ಅಜ್ಮೇರ ದರ್ಗಾದ ಸಹಾಯಕ ಮುಖ್ಯಸ್ಥರಾದ ಹಜರತ ಸೈಯದ ಶಾಹಿದ ಹುಸೇನಿ ಹೇಳಿದರು.

ಶನಿವಾರದಂದು ರಾಜಸ್ಥಾನದ ಅಜ್ಮೇರ ದರ್ಗಾ ಆವರಣದಲ್ಲಿ ಸ್ಥಳೀಯ ಪತ್ರಕರ್ತ ಸಾದಿಕ ಹಲ್ಯಾಳ ರಚಿಸಿದ ಅಜ್ಮೇರವೆಂಬ ಸ್ವರ್ಗದ ತುಣುಕು ಪ್ರವಾಸ ಕಥನದ ಮುಖಪುಟ ಬಿಡುಗಡೆ ಗೋಳಿಸಿ ಅವರು ಮಾತನಾಡಿದರು.
ಪ್ರವಾಸ ಕಥನಗಳು ಓದುಗರಿಗೆ ಅರಿವಿನ ಕಿಂಡಿಗಳಾಗಿವೆ. ಇವುಗಳ ಮೂಲಕ ಓದುಗರಿಗೆ ಸಾಕಷ್ಟು ಜ್ಞಾನ ಲಭಿಸುತ್ತದೆ.ಕಳೆದ 14 ವರ್ಷಗಳಿಂದ ದೂರದ ಕರ್ನಾಟಕದಿಂದ ಅಜ್ಮೇರಗೆ ಬರುತ್ತಿರುವ ಗೆಳೆಯರ ಬಳಗದ ಈ ಕಾರ್ಯ ಇತರರಿಗೆ ಮಾದರಿಯಾಗಿದ್ದು, ಕರ್ನಾಟಕದ ಜನತೆಗೆ ಈ ಪ್ರವಾಸ ಕಥನ ತುಂಬಾ ಉಪಯುಕ್ತವಾಗಲಿದೆ‌. ಎಂದು ಹೇಳಿದರು.

ಈ ಸಂದರ್ಭದಲ್ಲಿ ಗೆಳೆಯರ ಬಳಗದ ಸಾದಿಕ ಹಲ್ಯಾಳ, ಸಂತೋಷ ಖಂಡ್ರಿ, ಮುಗುಟ ಪೈಲವಾನ, ಹನೀಫ್ ಸನದಿ, ಇಮ್ರಾನ್ ಗೋಟೆದ, ಅಬ್ಬು ಮುಜಾವರ, ರಮಜಾನ ಅಂಗಡಿ, ಅಬ್ದುಲ್ ಪೀರಜಾದೆ ,ಅಸ್ಲಂ ಹಯಾತಖಾನ, ಅಸ್ಲಂ ಪೀರಜಾದೆ, ಸಾದಿಕ ಗುಡವಾಲೆ, ದಸ್ತಗಿರಿ ಮುಲ್ಲಾ, ರಪೀಕ ಗುಳೆದಗುಡ್ಡ ಉಪಸ್ಥಿತರಿದ್ದರು‌

Related posts: