RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:17ನೇ ಸತೀಶ ಶುಗರ್ಸ ಅವಾರ್ಡ್ಸ ಸ್ವರ್ಧೆ : ಮುಕ್ತ ಛಾಯಚಿತ್ರ ವಿಭಾಗದಲ್ಲಿ ಗೋಕಾಕನ ಎಲ್. ಡಿ.ಎಸ್ ಪ್ರಥಮ

ಗೋಕಾಕ:17ನೇ ಸತೀಶ ಶುಗರ್ಸ ಅವಾರ್ಡ್ಸ ಸ್ವರ್ಧೆ : ಮುಕ್ತ ಛಾಯಚಿತ್ರ ವಿಭಾಗದಲ್ಲಿ ಗೋಕಾಕನ ಎಲ್. ಡಿ.ಎಸ್ ಪ್ರಥಮ 

17ನೇ ಸತೀಶ ಶುಗರ್ಸ ಅವಾರ್ಡ್ಸ ಸ್ವರ್ಧೆ : ಮುಕ್ತ ಛಾಯಚಿತ್ರ ವಿಭಾಗದಲ್ಲಿ ಗೋಕಾಕನ ಎಲ್. ಡಿ.ಎಸ್ ಪ್ರಥಮ

ಗೋಕಾಕ ಜ 20: 17ನೇ ಸತೀಶ ಶುಗರ್ಸ ಅವಾರ್ಡ್ಸ ಜಿಲ್ಲಾ ಮಟ್ಟದ ಮುಕ್ತ ಛಾಯಚಿತ್ರ ಸ್ವರ್ಧೆಯಲ್ಲಿ ಗೋಕಾಕನ ಲಕ್ಮೀ ಡಿಜಿಟಲ್ ಸ್ಟೂಡಿಯೋದ ಶಂಕರ ಯಮಕನಮರಡಿ ಪ್ರಥಮ ಸ್ಥಾನ ಪಡೆದರು
ಶನಿವಾರ ಸಾಯಂಕಾಲ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಮೈಸೂರು ಅರಮನೆ ಮಾದರಿಯ ಭವ್ಯ ವೇದಿಕೆಯಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಛಾಯಾಚಿತ್ರ ಸಂಘದ ವಲಯ ಅಧ್ಯಕ್ಷ ಶ್ರೀ ಲಕ್ಮೀ ನಾರಾಯಣ ಭಟ್ ಮತ್ತು ಗಣ್ಯರು ಬಹುಮಾನ ವಿತರಿಸಿದರು

ಪ್ರಥಮ ಸ್ಥಾನವನ್ನು ಪಡೆದ ಶಂಕರ ಅವರು ನಗದು 10 ಸಾವಿರ ರೂಪಾಯಿಗಳ ಬೃಹತ್ ಮೊತ್ತದ ಜೊತೆಗೆ ಆರ್ಕಷಕ ಟ್ರೋಫಿ ಪಡೆದುಕೊಂಡರು . ಬೆಳಗಾವಿಯ ಅಮಿತ ಚರಂತಿಮಠ ದ್ವಿತೀಯ ಸ್ಥಾನ , ನಗದು 7 ಸಾವಿರ ರೂ , ಬೆಳಗಾವಿಯ ಮಂಜುನಾಥ ಕುಂದರಗಿ ತೃತೀಯ ಸ್ಥಾನ ನಗದು 5 ಸಾವಿರ ರೂ ಮತ್ತು ಟ್ರೋಫಿ ತಮ್ಮದಾಗಿಸಿ ಕೊಂಡರು
ಈ ಸಂದರ್ಭದಲ್ಲಿ ಕಾಂಗ್ರೆಸ್ ಧುರೀಣ ಮಹಾವಿರ ಮೋಹಿತೆ , ಅಶೋಕ್ ನಾಯಿಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: