RNI NO. KARKAN/2006/27779|Wednesday, October 15, 2025
You are here: Home » breaking news » ಬೆಳಗಾವಿ:ಕುಂದಾನಗರಿಗೂ ಲಗ್ಗೆ ಇಟ್ಟ ‘ಬ್ಲ್ಯೂ ವೇಲ್’ ಗೇಮ್? : ಪಾಲಕರಲ್ಲಿ ಆತಂಕ

ಬೆಳಗಾವಿ:ಕುಂದಾನಗರಿಗೂ ಲಗ್ಗೆ ಇಟ್ಟ ‘ಬ್ಲ್ಯೂ ವೇಲ್’ ಗೇಮ್? : ಪಾಲಕರಲ್ಲಿ ಆತಂಕ 

ಕುಂದಾನಗರಿಗೂ ಲಗ್ಗೆ ಇಟ್ಟ ‘ಬ್ಲ್ಯೂ ವೇಲ್’ ಗೇಮ್? : ಪಾಲಕರಲ್ಲಿ ಆತಂಕ

ಬೆಳಗಾವಿ ಸೆ 18: ಬೆಳಗಾವಿಯ ಖಾಸಗಿ ಶಾಲೆಯಲ್ಲಿ ಓದುತ್ತಿರುವ 25 ವಿದ್ಯಾರ್ಥಿನಿಯರು ತಮ್ಮ ಕೈಮೇಲೆ ಬ್ಲ್ಯೂ ವೇಲ್ ಗೇಮ್.ಗೆ ಹೋಲುವ ಚಿತ್ರ ಬಿಡಿಸಿಕೊಂಡು ಶಿಕ್ಷಕರಿಗೆ ಸಿಕ್ಕಿಬಿದ್ದ ಘಟನೆ ಬೆಳಗಾವಿ ಮಹಾ ನಗರದಲ್ಲಿ ಬೆಳಕಿಗೆ ಬಂದಿದೆ .
ತಕ್ಷಣ ಕಾರ್ಯಪ್ರವೃತ್ತವಾದ ಶಿಕ್ಷಕರು ಆಯಾ ವಿದ್ಯಾರ್ಥಿನಿಯರ ಪಾಲಕರನ್ನು ಕರೆಯಿಸಿ ತಿಳಿವಳಿಕೆ ನೀಡಿ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ವಿಷಯ ಹರಿದಾಡುತ್ತಿದೆ. ಆದರೆ, ಸಾರ್ವಜನಿಕ ಶಿಕ್ಷಣ ಇಲಾಖೆ ಇಂಥ ಪ್ರಕರಣ ನಡೆದಿದೆ ಎಂದೂ ಹೇಳದೇ, ನಡೆದಿಲ್ಲವೆಂದೂ ಹೇಳದೇ ಗೊಂದಲದ ಹೇಳಿಕೆ ನೀಡುತ್ತಿದೆ.
ಡಿಡಿಪಿಐ ಎ.ಬಿ.ಪುಂಡಲಿಕ, ಸಾಮಾಜಿಕ ಜಾಲತಾಣದಲ್ಲಿ ಇಂಥದ್ದೊಂದು ವಿಷಯ ಹರಿದಾಡುತ್ತಿದೆ. ಸೋಮವಾರದ ನಗರದ ಎಲ್ಲ ಶಾಲೆಗಳಿಗೆ ಅಧಿಕಾರಿಗಳ ತಂಡವನ್ನು ಕಳುಹಿಸಿ ಪರಿಶೀಲನೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

Related posts: