ಗೋಕಾಕ:ಸಿಡಿ ಬಿಡುಗಡೆ ಮಾಡಿದ ದಿನೇಶ ಕಲ್ಲಹಳ್ಳಿ ನ ಪ್ರತಿಕೃತಿ ದಹಿಸಿ ಶಾಸಕ ರಮೇಶ ಜಾರಕಿಹೊಳಿ ಬೆಂಬಗರ ಆಕ್ರೋಶ
ಸಿಡಿ ಬಿಡುಗಡೆ ಮಾಡಿದ ದಿನೇಶ ಕಲ್ಲಹಳ್ಳಿ ನ ಪ್ರತಿಕೃತಿ ದಹಿಸಿ ಶಾಸಕ ರಮೇಶ ಜಾರಕಿಹೊಳಿ ಬೆಂಬಗರ ಆಕ್ರೋಶ
ನಮ್ಮ ಬೆಳಗಾವಿ ಇ- ವಾರ್ತೆ, ಗೋಕಾಕ ಮಾ 3 :
ಶಾಸಕ ರಮೇಶ ಜಾರಕಿಹೊಳಿ ಅವರ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ರೂಪಿಸಿ ಅವರ ಹೆಸರಿಗೆ ಕಪ್ಪುಚುಕ್ಕಿ ತರಲು ಪ್ರಯತ್ನಿಸಿ ಸಿಡಿ ಬಿಡುಗಡೆ ಮಾಡಿರುವ ದಿನೇಶ ಕಲ್ಲಹಳ್ಳಿ ವಿರುದ್ಧ ಶಾಸಕ ರಮೇಶ ಜಾರಕಿಹೊಳಿ ಅವರ ಬೆಂಬಲಿಗರು ತಮ್ಮ ಆಕ್ರೋಶವನ್ನು ವ್ಯಕ್ಚಪಡಿಸಿ ಕಲ್ಲಹಳ್ಳಿಯ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು .
ಬುಧವಾರದಂದು ಮಧ್ಯಾಹ್ನ ನಗರದ ಬಸವೇಶ್ವರ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಶಾಸಕ ರಮೇಶ ಜಾರಕಿಹೊಳಿ ಅವರ ಬೆಂಬಲಿಗರು ಕಲ್ಲಹಳ್ಳಿ ವಿರುದ್ಧ ಘೋಷಣೆಗಳನ್ನು ಕೂಗಿ, ಅವನ ಭಾವಚಿತ್ರಕ್ಕೆ ಚಪ್ಪಲಿ ಹೊಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಮೇಶ ಜಾರಕಿಹೊಳಿ ಅವರ ಬೆಂಬಲಿಗರು ಶಾಸಕ ಬೆಳವಣಿಗೆ ಸಹಿಸದ ಕೆಲ ವ್ಯಕ್ತಿಗಳು ಕೀಳು ಮಟ್ಟದ ರಾಜಕೀಯ ಮಾಡಲು ಉದ್ದೇಶಿಸಿ ಶಾಸಕ ರಮೇಶ ಜಾರಕಿಹೊಳಿ ಮತ್ತು ಜಾರಕಿಹೊಳಿ ಕುಟುಂಬಕ್ಕೆ ಕೆಟ್ಟ ಹೆಸರು ತರಲು ವ್ಯವಸ್ಥಿತವಾಗಿ ಷಡ್ಯಂತ್ರ ರಚಿಸಿದ್ದಾರೆ. ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡು ಸಿಓಡಿ ಮತ್ತು ಸಿಬಿಐ ಅವರಿಂದ ತನಿಖೆ ಮಾಡಿಸಿ ನಕಲಿ ಸಿಡಿ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಲ್ಲದೆ ಶಾಸಕ ರಮೇಶ ಜಾರಕಿಹೊಳಿ ಅವರು ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರು ಯಾವುದೇ ಕಾರಣಕ್ಕೂ ಅಂಗೀಕರಿಸಬಾರದು ಎಂದು ತಮ್ಮ ಆಕ್ರೋಶವನ್ನು ವ್ಯಕ್ಚಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಸಾವಿರಾರು ಬೆಂಬಲಿಗರು ಉಪಸ್ಥಿತರಿದ್ದರು.