ಗೋಕಾಕ:ಮಹಾಮಾರಿ ಕೊರೋನಾ ವೈರಸ ತಡೆಗಟ್ಟಲು ಸ್ಥಳೀಯ ಆಡಳಿತದೊಂದಿಗೆ ಸಹಕರಿಸಿ : ದೀಪಕ ಗುಡಗನಟ್ಟಿ
ಮಹಾಮಾರಿ ಕೊರೋನಾ ವೈರಸ ತಡೆಗಟ್ಟಲು ಸ್ಥಳೀಯ ಆಡಳಿತದೊಂದಿಗೆ ಸಹಕರಿಸಿ : ದೀಪಕ ಗುಡಗನಟ್ಟಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 3 :
ಮಹಾಮಾರಿ ಕೊರೋನಾ ವೈರಸ ತಡೆಗಟ್ಟಲು ಸ್ಥಳೀಯ ಆಡಳಿತದೊಂದಿಗೆ ಸಹಕರಿಸಿ ಲಾಕಡೌನ ಯಶಸ್ವಿಗೋಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ನೂತನ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಹೇಳಿದರು
ಶುಕ್ರವಾರದಂದು ವಿಡಿಯೋ (ಸಮ್ಮೇಳನ) ಸಂವಾದಲ್ಲಿ ಗೋಕಾಕ ತಾಲೂಕಾ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು
ಇಡೀ ವಿಶ್ವವನ್ನೇ ಬೆಚ್ಚಿ ಬಿಳಿಸಿರುವ ಮಹಾಮಾರಿ ಕೊರೋನಾ ವೈರಸ್ ( ಸೋಂಕು) ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ ಸ್ಥಳೀಯ ಆಡಳಿತದ ಸಹಕಾರದೊಂದಿಗೆ ಅದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕಾರ್ಯಕರ್ತರು ಮುಂದಾಗಬೇಕು . ತುರ್ತು ಪರಿಸ್ಥಿತಿಯಲ್ಲಿ ಸಂಘಟನೆಯಿಂದ ನಿರ್ಗತಿಕರಿಗೆ, ಬಡವರಿಗೆ ತಮ್ಮ ಕೈಲಾದಷ್ಟು ಸಹಕಾರ ನೀಡಲು ಮುಂದೆ ಬರಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಮಾತನಾಡಿ ಕೊರೋನಾ ವೈರಸ ಹರಡದಂತೆ ರಾಜಾದ್ಯಂತ ಲಾಕಡೌನ ಜಾರಿಯಲ್ಲಿದೆ ಇದನ್ನು ಎಲ್ಲರೂ ಪಾಲಿಸುವಂತೆ ಜಾಗೃತಿ ಮೂಡಿಸಬೇಕು. ತುರ್ತು ಪರಿಸ್ಥಿತಿ ಎದುರಾಗಿರುವ ಸಂದರ್ಭದಲ್ಲಿ ಸ್ಥಳೀಯ ಕೆಲ ಖಾಸಗಿ ವೈದ್ಯರು ಜನರ ಆರೋಗ್ಯ ತಪಾಸಣೆ ಮಾಡಲು ಮಿನಾಮೇಷ ತಾಳುತ್ತಿದ್ದಾರೆ .ಕೆಲ ಖಾಸಗಿ ವೈದ್ಯರ ಈ ನಿಲುವನ್ನು ಖಂಡಿಸಿ ನಾಳೆ ದಿ. 4 ರಂದು ಆರೋಗ್ಯಧಿಕಾರಿಗಳಿಗೆ ಮನವಿ ಅರ್ಪಿಸಲಾಗುವದು ಎಂದು ಖಾನಪ್ಪನವರ ಹೇಳಿದರು
ವಿಡಿಯೋ ಸಂವಾದ ( ಸಮ್ಮೇಳನ) ಸಭೆಯಲ್ಲಿ ಕರವೇಯ ಪಧಾಧಿಕಾರಿಗಳಾದ ಸಾದಿಕ ಹಲ್ಯಾಳ, ಕೃಷ್ಣಾ ಖಾನಪ್ಪನವರ, ಮುಗುಟು ಪೈಲವಾನ, ಮಂಜು ಪ್ರಭುನಟ್ಟಿ , ಹನೀಫ ಸನದಿ , ದೀಪಕ ಹಂಜಿ, ಶಾನೂಲ ದೇಸಾಯಿ, ರಮೇಶ ಕಮತಿ, ಶೆಟೆಪ್ಪಾ ಗಾಡಿವಡ್ಡರ , ನಿಜಾಮ ನಧಾಪ ಉಪಸ್ಥಿತರಿದ್ದರು