RNI NO. KARKAN/2006/27779|Friday, March 20, 2026
You are here: Home » breaking news » ಗೋಕಾಕ:ಕನ್ನಡ ಉಳಿಸಿ ಬೆಳೆಸಲು ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ : ಮುರುಘರಾಜೇಂದ್ರ ಶ್ರೀ

ಗೋಕಾಕ:ಕನ್ನಡ ಉಳಿಸಿ ಬೆಳೆಸಲು ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ : ಮುರುಘರಾಜೇಂದ್ರ ಶ್ರೀ 

ಕನ್ನಡ ಉಳಿಸಿ ಬೆಳೆಸಲು ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ : ಮುರುಘರಾಜೇಂದ್ರ ಶ್ರೀ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 2 :

 
ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡಪರ ಕಾರ್ಯಕ್ರಮಗಳು ಹೆಚ್ಚೆಚ್ಚು ಹಮ್ಮಿಕೊಳ್ಳಬೇಕಾಗಿದೆ ಎಂದು ಇಲ್ಲಿನ ಶೂನ್ಯ ಸಂಪಾದನ ಮಠದ ಮುರಘರಾಜೆಂದ್ರ ಮಹಾಸ್ವಾಮಿಗಳು ಹೇಳಿದರು
ಶುಕ್ರವಾರದಂದು ನಗರದ ಮುಪ್ಪಯ್ಯ ಮಠದ ಆವರಣದಲ್ಲಿ ಕಪರಟ್ಟಿ – ಕಳ್ಳಿಗುದ್ದಿ ಶ್ರೀಮಠದ ಪವಾಡ ಪುರುಷ ಲಿಂ.ಗುರು ಮಹಾದೇವ ಅಜ್ಜನವರ ಜಯಂತಿ ಹಾಗೂ ಕನ್ನಡ ಜಾತ್ರೆ ನಿಮಿತ್ತ ಹಮ್ಮಿಕೊಂಡ ಸಾಧಕ ದಂಪತಿಗಳಿಗೆ ಹಾಗೂ ಗಣ್ಯರಿಗೆ ಸತ್ಕಾರ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ, ಸಂಸ್ಕೃತಿ ಉಳಿಸಲು ಕಳೆದ 14 ವರ್ಷಗಳಿಂದ ಕಪರಟ್ಟಿ – ಕಳ್ಳಿಗುದ್ದಿ ಲಿಂ .ಗುರು ಮಹಾದೇವ ಅಜ್ಜನವರ ಜಯಂತಿ ನಿಮಿತ್ತ ಕನ್ನಡ ಜಾತ್ರೆ ಹೆಸರಿನಲ್ಲಿ ಕನ್ನಡದ ಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ಕಾರ್ಯಕ್ರಮಗಳಿಗೆ ಶ್ರೀಮಠದ ಸಹಾಯ ಸಹಕಾರ ಸದಾ ಇದೆ ಎಂದು ಶ್ರೀಗಳು ಹೇಳಿದರು

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಸಾಂಸ್ಕೃತಿಕ ಕಲೆ ಉಳಿಯಬೇಕಾದರೆ ಗುರುಗಳ ಮಾರ್ಗದರ್ಶನ ಅವಶ್ಯಕವಾಗಿದೆ. ಕಲೆಗಳನ್ನು ಉಳಿಸಿ,ಬೆಳೆಸುವಲ್ಲಿ ಮಠ-ಮಾನ್ಯಗಳ ಪಾತ್ರ ಹಿರಿಯದಾಗಿದೆ‌. ಅದನ್ನು ಉಳಿಸಿ ಬೆಳೆಸುವ ಕೆಲಸ ನಮ್ಮೆಲ್ಲರಿಂದ ಆಗಬೇಕಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜೂನಿಯರ್ ವಿಷ್ಣುವರ್ಧನ್ ಖ್ಯಾತಿಯ ವಿಜಯಪುರದ ರವಿ ಕೋರೆ ಅವರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತ್ತು.

ಕಾರ್ಯಕ್ರಮವನ್ನು ಎಸ್.ಕೆ ಮಠದ ನಿರೂಪಿಸಿದರು, ಶೈಲಾ ಕೊಕ್ಕರಿ ವಂದಿಸಿದರು.

ವೇದಿಕೆಯಲ್ಲಿ ಬಟಕುರ್ಕಿಯ ಬಸವಲಿಂಗ ಮಹಾಸ್ವಾಮಿಗಳು, ಕಪರಟ್ಟಿ – ಕಳ್ಳಿಗುದ್ದಿ ಮಠದ ಬಸವರಾಜ ಹಿರೇಮಠ ಸ್ವಾಮಿಗಳು , ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮನ್ನವರ , ರಾಜು ಬೈರಿಗೋಳ , ಆದರ್ಶ ಪೂಜಾರಿ ಇದ್ದರು .

Related posts: