RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಸತತ 2 ಬಾರಿ ಸೋತ ಅಭ್ಯರ್ಥಿಗೆ ಮೂರನೇ ಬಾರಿಗೆ ಗೆಲುವಿನ ರುಚಿ ತೋರಿಸಿದ ಮತದಾರರು

ಗೋಕಾಕ:ಸತತ 2 ಬಾರಿ ಸೋತ ಅಭ್ಯರ್ಥಿಗೆ ಮೂರನೇ ಬಾರಿಗೆ ಗೆಲುವಿನ ರುಚಿ ತೋರಿಸಿದ ಮತದಾರರು 

ಸತತ 2 ಬಾರಿ ಸೋತ ಅಭ್ಯರ್ಥಿಗೆ ಮೂರನೇ ಬಾರಿಗೆ ಗೆಲುವಿನ ರುಚಿ ತೋರಿಸಿದ ಮತದಾರರು

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 31 :

 
ಗ್ರಾಮ ಪಂಚಾಯಿತಿ ಚುನಾವಣೆ ಎದುರಿಸಿ ಗೆದ್ದು ಸಮಾಜ ಸೇವೆ ಮಾಡಬೇಕೆಂಬ ತವಕದಿಂದ ಕಳೆದ ಮೂರು ಅವಧಿಯಿಂದ ಪ್ರಯತ್ನಿಸುತ್ತಿರುವ ತಾಲೂಕಿನ ಹುಣಶ್ಯಾಳ ಪಿ.ಜಿ ಗ್ರಾಮದ ಶಬ್ಬೀರ ತಾಂಬಿಟಕರ ಅವರಿಗೆ ಈ ಬಾರಿ ಅದೃಷ್ಟ ಕುಲಾಯಿಸಿದೆ.

ಹುಣಶ್ಯಾಳ ಪಿ.ಜಿ ಗ್ರಾಮ ಪಂಚಾಯಿತಿ ಚುನಾವಣೆಗೆ ವಾರ್ಡ ನಂ 1 ರ ಸಾಮಾನ್ಯ ಕ್ಷೇತ್ರದಿಂದ 2010, 2015 ರಲ್ಲಿ ಚುನಾವಣೆಗೆ ಸ್ವರ್ಧಿಸಿ ಹಿನಾಯವಾಗಿ ಸೋಲನುಭವಿಸಿದ್ದರು. ಈ ಎರೆಡು ಅವಧಿಗೆ ಸೋಲನುಭವಿಸಿದ್ದರು ಸಹ ಕಿಂಚ್ಚೆತ್ತು ದೃತಿಗೇಡದ ಅವರು ಮತ್ತೆ ತಮ್ಮ ಸಮಾಜ ಸೇವೆಯನ್ನು ಎಂದಿನಂತೆ ಮುಂದುವರೆಸಿದ್ದರು. ಚುನಾವಣೆಯಲ್ಲಿ ಗೆದ್ದೆ ತೀರಬೇಕೆಂಬ ತವಕದಿಂದ ಈ ಭಾರಿಯ ಪಂಚಾಯತ್ ಚುನಾವಣೆಯಲ್ಲಿ ಮತ್ತೆ ಅದೇ ವಾರ್ಡನಿಂದ ಅಗ್ನಿ ಪರೀಕ್ಷೆಗೆ ಇಳಿದಿದ್ದ ಅವರಿಗೆ ಈ ಬಾರಿ ಮತದಾರರು ಗೆಲುವಿನ ರುಚಿ ತೋರಿಸಿದ್ದಾರೆ.

ಹುಣಶ್ಯಾಳ ಪಿ.ಜಿ ಗ್ರಾಮದ ವಾರ್ಡ್ ನಂ 1 ರ ಸಾಮಾನ್ಯ ಕ್ಷೇತ್ರದಿಂದ ಚುನಾವಣೆಗೆ ಸ್ವರ್ಧಿಸಿದ್ದ ಶಬ್ಬೀರ 260 ಮತಗಳನ್ನು ಪಡೆಯುವುದರ ಮುಖಾಂತರ ತಮ್ಮ ಪ್ರತಿ ಸ್ವರ್ಧಿ ಗಿಂತ ಕೇವಲ 14 ಮತಗಳ ಅಲ್ಪ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿ ತಾವು ಹಿಡಿದ ಹಠವನ್ನು ಸಾಧಿಸಿ ತೋರಿಸಿದ್ದಾರೆ.

Related posts: