ಗೋಕಾಕ:ವಿವೇಕಾನಂದರು ಯುವಜನತೆಗೆ ಆದರ್ಶಪ್ರಾಯವಾಗಿ ಉಳಿದಿದ್ದಾರೆ : ಬಸವರಾಜ ಖಾನಪ್ಪನವರ
ವಿವೇಕಾನಂದರು ಯುವಜನತೆಗೆ ಆದರ್ಶಪ್ರಾಯವಾಗಿ ಉಳಿದಿದ್ದಾರೆ : ಬಸವರಾಜ ಖಾನಪ್ಪನವರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 12 :
ವಿಶಾಲ ಆಧ್ಯಾತ್ಮಿಕ ಚಿಂತನೆ ಮತ್ತು ಸಂಕಲ್ಪ ಶಕ್ತಿಯ ಸಂಕೇತವಾಗಿ ನಿಂತ ಮೇರುವ್ಯಕ್ತಿತ್ವದ ಸ್ವಾಮಿ ವಿವೇಕಾನಂದರು ಯುವಜನತೆಗೆ ಆದರ್ಶಪ್ರಾಯವಾಗಿ ಉಳಿದಿದ್ದಾರೆ ಎಂದು ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು
ಮಂಗಳವಾರದಂದು ನಗರದ ಕರವೇ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಅಪಾರ ರಾಷ್ಟ್ರಪ್ರೇಮ, ವಿಶ್ವಭ್ರಾತೃತ್ವ, ಪ್ರಾಯೋಗಿಕ ವೇದಾಂತ ವಿವೇಕಾನಂದರಲ್ಲಿ ಅಡಕವಾಗಿತ್ತು. ತನ್ನ ದೇಶ ಸ್ವತಂತ್ರವಾಗಬೇಕೆಂದು ಬಯಸಿದವರು ಮಹಾತ್ಮ ಗಾಂಧಿ, ಸುಭಾಶ್ಚಂದ್ರ ಬೋಸ್, ಅರವಿಂದ ಘೋಷ್ ಮೊದಲಾದ ಅನೇಕ ನಾಯಕರ ಮೇಲೆ ಪ್ರಭಾವ ಬೀರಿದವರು ವಿವೇಕಾನಂದರು. ಅವರ ದೇಶಪ್ರೇಮ ಅದರ ಸ್ವಾತಂತ್ರಗಳಿಕೆಯ ಕೇಂದ್ರಿತವಾಗಿತ್ತೆ ಹೊರತು ಅದು ಆಕ್ರಮಣಶೀಲ, ಪ್ರತಿಗಾಮಿ ಚಿಂತನೆಯಾಗಿರಲಿಲ್ಲ. ಭಾರತ ದೇಶ ವಿಶ್ವದ ಇತರ ರಾಷ್ಟ್ರಗಳೊಂದಿಗೆ ಸರಿಸಮಾನ ಗೌರವ ಹೊಂದಿ, ತನ್ನ ಆಂತರಿಕ ತತ್ತ್ವ ಆದರ್ಶ ಆಧ್ಯಾತ್ಮಿಕ ಶಕ್ತಿಯಿಂದ ಇತರ ದೇಶಗಳನ್ನು ಮುನ್ನಡೆಸಬೇಕು ಎಂದು ಸ್ವಾಮಿ ವಿವೇಕಾನಂದರು ಬಯಸಿದ್ದರು ಆ ದಿಸೆಯಲ್ಲಿ ನಾವಿಂದೂ ಸಾಗಿ ಅವರ ಕನಸುಗಳನ್ನು ನನಸಾಗಿಸಲು ಪ್ರಾಮಾಣಿಕ ಪ್ರಯತ್ನಮಾಡಬೇಕಾಗಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಸಾದಿಕ ಹಲ್ಯಾಳ, ಬಸವರಾಜ ಹತ್ತರಕಿ, ಮುಗುಟ ಪೈಲವಾನ, ಅಂಬಾಸೆ ವಾಗುಲೆ ಕಿರಣ ವಾಲಿ, ರಾಜೇಶ ಹುಳ್ಳಿ,ಮಹಾಂತ ಹೀರೇಮಠ ಸಂತೋಷ ಕೋಲಕಾರ, ಮಲ್ಲು ಗುಂಡಕಲ್ಲಿ, ಮನೀಶ ಹೀರೇಮಠ, ಆನಂದ ಖಾನಪ್ಪನವರ, ಗುರು ಮುನ್ನೋಳಿಮಠ ಸುಪ್ರೀತ ಇದ್ದರು.