RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಕಾರ್ಯ ಶಾಂತ ರೀತಿಯಿಂದ ಜರುಗಿದ ಗ್ರಾ.ಪಂ ಚುನಾವಣೆ ಮತ ಎಣಿಕೆ ಕಾರ್ಯ

ಗೋಕಾಕ:ಕಾರ್ಯ ಶಾಂತ ರೀತಿಯಿಂದ ಜರುಗಿದ ಗ್ರಾ.ಪಂ ಚುನಾವಣೆ ಮತ ಎಣಿಕೆ ಕಾರ್ಯ 

ಕಾರ್ಯ ಶಾಂತ ರೀತಿಯಿಂದ ಜರುಗಿದ ಗ್ರಾ.ಪಂ ಚುನಾವಣೆ ಮತ ಎಣಿಕೆ ಕಾರ್ಯ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 30 :

 

ಕಳೆದ ದಿ. 22 ರಂದು ತಾಲೂಕಿನ 32 ಗ್ರಾಮ ಪಂಚಾಯತಿಗಳಿಗೆ ನಡೆದ ಚುನಾವಣೆಯ ಮತಗಳ ಏಣಿಕೆ ಕಾರ್ಯ ಶಾಂತ ರೀತಿಯಿಂದ ಜರುಗಿದೆ.
ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬೆಳಿಗ್ಗೆ 8 ಘಂಟೆಗೆ 12 ಕೊಠಡಿಗಳಲ್ಲಿ 50ಕ್ಕೂ ಹೆಚ್ಚು ಟೇಬಲ್‍ಗಳಲ್ಲಿ ಮತಗಳ ಎಣಿಕೆ ಪ್ರಾರಂಭವಾಯಿತು. ವಿಜೇತ ಅಭ್ಯರ್ಥಿಗಳ ಬೆಂಬಲಿಗರು ಗುಲಾಲ ಎರಚಿ, ಪಟಾಕ್ಷಿ ಸಿಡಿಸಿ, ಸಿಹಿ ಹಂಚುತ್ತ ವಿಜಯೋತ್ಸವ ಆಚರಿಸುತ್ತ ತಮ್ಮ ಗ್ರಾಮಗಳಿಗೆ ಹಿಂತಿರುಗುವ ದೃಶ್ಯ ಸಾಮಾನ್ಯವಾಗಿತ್ತು. ಒಟ್ಟಾರೆಯಾಗಿ ಮತದೆಣಿಕ ಶಾಂತಿಯುತವಾಗಿತ್ತು.
ಇಂದು ಬೆಳಿಗ್ಗೆಯಿಂದಲೇ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪಕ್ಕದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಿನ ಎಲ್ಲೆಡೆಯಿಂದ ಬಂದ ಸಾವಿರಾರು ಜನರಿಂದ ತುಂಬಿತ್ತು. ಗೆದ್ದ ಅಭ್ಯರ್ಥಿಗಳಿಗೆ ಮಾಲೆ ಹಾಕಲು ಮಾಲೆ ಅಂಗಡಿಗಳು ಸಹ ಇದ್ದವು. ಜನರನ್ನು ನಿಯಂತ್ರಿಸಲು ಪೋಲೀಸರು ಲಾಠೀ ಬೀಸಬೇಕಾಯಿತು. ಒಟ್ಟಾರೆ ಮತದೆಣಿಕೆ ದೃಶ್ಯಗಳನ್ನು ವೀಕ್ಷಿಸಿದಾಗ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದು ಕಂಡು ಬಂದಿತು.

Related posts: