RNI NO. KARKAN/2006/27779|Saturday, February 14, 2026
You are here: Home » breaking news » ಮೂಡಲಗಿ:ಮೂಡಲಗಿ ತಾಲೂಕು ಕೈಬಿಟ್ಟ ಸರಕಾರ : ಫಲಕ ಪ್ರರ್ದಶಿಸಿ ಜಾರಕಿಹೊಳಿ ಸಹೋದರರ ವಿರುದ್ಧ ಸಾರ್ವಜನಿಕರ ಓಫನ ಆಕ್ರೋಶ

ಮೂಡಲಗಿ:ಮೂಡಲಗಿ ತಾಲೂಕು ಕೈಬಿಟ್ಟ ಸರಕಾರ : ಫಲಕ ಪ್ರರ್ದಶಿಸಿ ಜಾರಕಿಹೊಳಿ ಸಹೋದರರ ವಿರುದ್ಧ ಸಾರ್ವಜನಿಕರ ಓಫನ ಆಕ್ರೋಶ 

ಮೂಡಲಗಿ ತಾಲೂಕು ಕೈಬಿಟ್ಟ ಸರಕಾರ : ಫಲಕ ಪ್ರರ್ದಶಿಸಿ ಜಾರಕಿಹೊಳಿ ಸಹೋದರರ ವಿರುದ್ಧ ಸಾರ್ವಜನಿಕರ ಓಫನ ಆಕ್ರೋಶ

ಮೂಡಲಗಿ ಸೆ 8: ಸರಕಾರ ಘೋಷಣೆ ಮಾಡಿದ 49 ತಾಲೂಕುಗಳಲ್ಲಿ ಮೂಡಲಗಿಯನ್ನು ಕೈಬಿಟ್ಟಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೆಶ ಜಾರಕಿಹೊಳಿ ಮತ್ತು ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ವಿರುದ್ಧ ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ ನಾಗರಿಕರು ಮೂಡಲಗಿ ತಾಲೂಕ ಕೇಂದ್ರ ರದ್ದುಪಡಿಸಿದ ಪುಣ್ಯವಂತ ಸಹೋದರರು ಎಂಬ ನಾಮಫಲಕ ಹಾಕಿದ್ದಾರೆ .

ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಮೂಡಲಗಿ ತಾಲೂಕು ಕೇಂದ್ರ ರದ್ದುಪಡಿಸಿದ ಪುಣ್ಯವಂತರು ಎಂದು ನಾಮ ಫಲಕ ಹಾಕುವ ಮೂಲಕ ಇಲ್ಲಿನ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫಲಕ

ಈ ನಾಮಫಲಕ ವೀಕ್ಷಿಸಿ ಫಲಕ ಹಾಕಿದವರನ್ನು ಅಭಿನಂದಿಸುತ್ತಿದ್ದರೆ ಇದನ್ನು ಹಾಕಿದವರು ಯಾರು ಎಂಬುದರ ಬಗ್ಗೆ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ ನಂತರ ಫಲಕವನ್ನು ಪೊಲೀಸರು ತೆರವುಗೊಳಿಸಿದ್ದಾರೆ

Related posts: