RNI NO. KARKAN/2006/27779|Thursday, March 19, 2026
You are here: Home » breaking news » ಗೋಕಾಕ :ಅಪರಾಧಿಗಳಿಗೆ ಶಿಕ್ಷೆ ಹಾಗೂ ಮೃತರ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಮನವಿ

ಗೋಕಾಕ :ಅಪರಾಧಿಗಳಿಗೆ ಶಿಕ್ಷೆ ಹಾಗೂ ಮೃತರ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಮನವಿ 

ಅಪರಾಧಿಗಳಿಗೆ ಶಿಕ್ಷೆ ಹಾಗೂ ಮೃತರ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಮನವಿ

 

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 13 :

 

ಕಲಬುರ್ಗಿ ಜಿಲ್ಲೆಯ ಹಲಕಟ್ಟಿ ಗ್ರಾಮದ ಅಲೆಮಾರಿ ಸಮುದಾಯದ ಗೋಂಧಳಿ ಜನಾಂಗದ ಸುರೇಶ ವಾಸ್ಟರ ಇವರ ಹತ್ಯೆಗೈದ ಅಪರಾಧಿಗಳಿಗೆ ಶಿಕ್ಷೆ ಹಾಗೂ ಮೃತರ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕೆಂದು ಇಲ್ಲಿಯ ಗೋಂಧಳಿ ಸಮಾಜದವರು ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಶುಕ್ರವಾರದಂದು ಮನವಿ ಸಲ್ಲಿಸಿದರು.
ಕಲಬುರ್ಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಹಲಕಟ್ಟಿ ಗ್ರಾಮದ ರಹವಾಸಿ ಅಲೆಮಾರಿಯಾಗಿ ಜ್ಯೋತಿಷ್ಯ ಶಾಸ್ತ್ರ ಹೇಳುತ್ತ ತನ್ನ ಉಪಜೀವನ ಸಾಗಿಸುತ್ತಿದ್ದ ಸುರೇಶ ವಾಸ್ಟರ ಅವರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ ಅನ್ಯ ಕೊಮಿಗೆ ಸೇರಿದ ಜನರಿಗೆ ಕಠಿಣ ಶಿಕ್ಷೆ ನೀಡಬೇಕು. ಇದು ಅಲೆಮಾರಿ ಜನಾಂಗದವಾದ ಗೋಂಧಳಿ ಸಮುದಾಯಕ್ಕೆ ಹೆದರಿಸುವ ತಂತ್ರವಾಗಿದೆ. ಅಪರಾಧಿಗಳ ಕೃತ್ಯ ಖಂಡನೀಯವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗೋಂಧಳಿ ಸಮಾಜದ ಹಿರಿಯರಾದ ರಾಜಶೇಖರ ವಾಕುಡೆ, ಅಶೋಕ ಗೋಂಧಳಿ,ಸುರೇಶ ಗುರುಡಕರ, ಸಿದ್ದಪ್ಪ ಇಗವೆ, ಪಾಂಡುರಂಗ ಲಾಗವೆ, ಸಚೀನ ಗುರುಡಕರ, ತುಳಜಾರಾಮ ಹತಾಗಳ,ಸುರೇಶ ವಾಗುಡೆ, ಜ್ಞಾನೇಶ್ವರ ಲಾಗವೆ, ಮುರಳೀಧರ ಜೋಶಿ, ಉತ್ತಮ ಭಾಗುಂಟೆ ಸೇರಿದಂತೆ ಗೋಂಧಳಿ ಸಮಾಜದವರು ಉಪಸ್ಥಿತರಿದ್ದರು.

Related posts: