ಗೋಕಾಕ:ಕರ್ನಾಟಕ ಪಶು ವೈದ್ಯಕೀಯ ಪರಿಷತಗೆ : ಗೋಕಾಕಿನ ಡಾ.ಮೋಹನ ಕಮತ ಆಯ್ಕೆ
ಕರ್ನಾಟಕ ಪಶು ವೈದ್ಯಕೀಯ ಪರಿಷತಗೆ : ಗೋಕಾಕಿನ ಡಾ.ಮೋಹನ ಕಮತ ಆಯ್ಕೆ
ಗೋಕಾಕ ಜೂ 18: ಕರ್ನಾಟಕ ಸರಕಾರವು ಭಾರತೀಯ ಪಶು ವೈದ್ಯಕೀಯ ಪರಿಷತ್ ಕಾಯಿದೆ ( ಕೇಂದ್ರದ ಕಾಯಿದೆ 52/1984) ರ ಪ್ರಕಾರ ಕರ್ನಾಟಕ ಪಶು ವೈದ್ಯಕೀಯ ಪರಿಷತ್ ನ ನಾಮನಿರ್ದೇಶಿತ ಸದಸ್ಯರಾಗಿ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಮೋಹನ ಕಮತ ಅವರನ್ನು ಆಯ್ಕೆ ಮಾಡಿ ಆದೇಶಿಸಿದೆ
ಡಾ.ಮೋಹನ ಕಮತ ಈ ಹಿಂದೆ ರಾಜ್ಯ ಮಟ್ಟದ ಶ್ರೇಷ್ಠ ವೈದ್ಯ ಪ್ರಶಸ್ತಿಯನ್ನು ಪಡೆದಿದಾರೆ .ಪ್ರಸ್ತುತ ಕರ್ನಾಟಕ ಪಶು ವೈದ್ಯಕೀಯ ಸಂಘದ ಬೆಳಗಾವಿ ಜಿಲ್ಲಾದ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ .ಇವರ ಸಾಧನೆಗಳನ್ನು ಗುರುತಿಸಿ ಸರಕಾರ ಈ ನಾಮನಿರ್ದೇಶನ ಮಾಡಿದೆ
ಇಂದು ಮುಂಜಾನೆ ಸಚಿವರ ಗೃಹ ಕಛೇರಿಯಲ್ಲಿ ಇವರ ಆಯ್ಕೆಗೆ ಸಹಕರಿಸಿದಂತ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತು ಯುವ ಕಾಂಗ್ರೆಸ್ ಧುರೀಣ ಅವರನ್ನು ಇದೇ ಸಂದರ್ಭದಲ್ಲಿ ಡಾ.ಮೋಹನ ಕಮತ ಸನ್ಮಾನಿಸಿದರು
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಟಿ.ಆರ್. ಕಾಗಲ್, ಮಡ್ಡೆಪ್ಪಾ ತೋಳಿನವರ ಸೇರಿದಂತೆ ತಾಲೂಕಿನ ಎಲ್ಲ ಪಶು ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು