RNI NO. KARKAN/2006/27779|Sunday, February 1, 2026
You are here: Home » breaking news » ಗೋಕಾಕ:ಅಧಿಕಾರಿಗಳು ಕಛೇರಿಯಲ್ಲಿ ಕುಳಿತುಕೊಳ್ಳದೆ ಪಿಲ್ಡ್ ಗಿಳಿದು ಕಾರ್ಯ ನಿರ್ವಹಿಸಿ : ಸಚಿವ ರಮೇಶ ಜಾರಕಿಹೊಳಿ ಸೂಚನೆ

ಗೋಕಾಕ:ಅಧಿಕಾರಿಗಳು ಕಛೇರಿಯಲ್ಲಿ ಕುಳಿತುಕೊಳ್ಳದೆ ಪಿಲ್ಡ್ ಗಿಳಿದು ಕಾರ್ಯ ನಿರ್ವಹಿಸಿ : ಸಚಿವ ರಮೇಶ ಜಾರಕಿಹೊಳಿ ಸೂಚನೆ 

ಅಧಿಕಾರಿಗಳು ಕಛೇರಿಯಲ್ಲಿ ಕುಳಿತುಕೊಳ್ಳದೆ ಪಿಲ್ಡ್ ಗಿಳಿದು ಕಾರ್ಯ ನಿರ್ವಹಿಸಿ : ಸಚಿವ ರಮೇಶ ಜಾರಕಿಹೊಳಿ ಸೂಚನೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 26 :

 
ಅಧಿಕಾರಿಗಳು ಕಛೇರಿಯಲ್ಲಿ ಕುಳಿತುಕೊಳ್ಳದೆ ಪಿಲ್ಡ್ ಗಿಳಿದು ಅತಿವೃಷ್ಟಿಯಾದ ಪ್ರದೇಶಗಳ ಸರ್ವೇಕಾರ್ಯ ಮಾಡಬೇಕು ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರದಂದು ನಗರದ ತಾಲೂಕಾ ಪಂಚಾಯಿತಿ ಕಛೇರಿಯಲ್ಲಿ ನಡೆದ ಗೋಕಾಕ ಮತ್ತು ಮೂಡಲಗಿ ತಾಲೂಕಾ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊರೋನಾ ವೈರಸ್ ಕುರಿತು ಸಾರ್ವಜನಿಕರು ಭಯ ಪಡದೆ ದೈರ್ಯದಿಂದ ಎದುರಿಸಬೇಕು ಸರಕಾರದ ನಿರ್ದೇಶನದಂತೆ ಸೀಲಡೌನ ನ , ಸ್ಟೀಕರಳನ್ನು ತೆರೆಯಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ‌. ಸೋಂಕಿತರಲ್ಲಿ ಭಯ ಮುಕ್ತ ವಾತಾವರಣ ನಿರ್ಮಿಸಲು ವೈದ್ಯರು ಮುಂದಾಗಿ ಹೆಚ್ಚಾಗಿ ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲು ಕ್ರಮ ಕೈಗೋಳಬೇಕು . ಸೋಂಕಿತರು ಕೊರೋನಾ ಬಗ್ಗೆ ಭಯಭೀತರಾಗಿದೆ ವೈದ್ಯರು ಸಲಹೆಯನ್ನು ಪಡೆದು ಗುಣಮುಖರಾಗಬೇಕು ಎಂದರು .
ಕಳೆದ ವರ್ಷದಷ್ಟು ಪ್ರವಾಹ ಈ ಬಾರಿ ಸಂಭವಿಸಿಲ್ಲ. ಕಳೆದ ಬಾರಿ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಸಿಎಮ್ ಜೊತೆಗೆ ಚರ್ಚೆ ಮಾಡಿದ್ದು, ತ್ವರಿತಗತಿಯಲ್ಲಿ ಸಂತ್ರಸ್ತರಿಗೆ ಪರಿಹಾರ ವಿತರಿಸಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ಮಾತನಾಡಿ ಮೂರು ತಿಂಗಳಲ್ಲಿ ಗೋಕಾಕ ತಾಲೂಕಿನಲ್ಲಿ ಒಟ್ಟು 1074 ಜನರಿಗೆ ಮತ್ತು ಮೂಡಲಗಿಯಲ್ಲಿ ಮೂಡಲಗಿ 111 ಜನರಿಗೆ ಕೊರೋನಾ ಸೋಂಕು ದೃಡಪಟ್ಟಿದ್ದು, 622 ಜನರು ಆರಾಮಾಗಿ ಮನೆಗಳಿಗೆ ತೆರಳಿದ್ದಾರೆ. ಒಟ್ಟು 102 ಜನರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೊರೋನಾ ಸೋಂಕಿನಿಂದ ಇಲ್ಲಿಯವರೆಗೆ 45 ಜನರು ಮೃತಪಟ್ಟಿದ್ದಾರೆ. ಗೋಕಾಕ ಸರಕಾರಿ ಆಸ್ಪತ್ರೆಯಲ್ಲಿ ಪ್ರತಿ ದಿನ 500 ಜನರ ಗಂಟಲು ದ್ರವ ಪರೀಕ್ಷೆ ಕಳುಹಿಸುತ್ತಿದ್ದು . 100 ಕ್ಕೆ 30 ಜನರಿಗೆ ಸೋಂಕು ಪತ್ತೆಯಾಗುತ್ತಿದೆ. ತಾಲೂಕಿನಲ್ಲಿ ಒಟ್ಟು 5 ಕೊವಿಡ ಕೇರ ಸೆಂಟರಗಳನ್ನು ಸ್ಥಾಪಿಸಿ ಸೆಂಟರಗಳಲ್ಲಿ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಮೂರು ತಿಂಗಳಲ್ಲಿ ಒಟ್ಟು 5500 ಜನರಿ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, 2400 (ರ್ಯಾಪಿಡ್) ತೀಕ್ಷ್ಣ ಪರೀಕ್ಷೆ ಮಾಡಲಾಗಿದೆ . ಬರುವ 1/2 ತಿಂಗಳಲ್ಲಿ ಗೋಕಾಕ ತಾಲೂಕಿನಲ್ಲಿ ಪೂರ್ಣ ಪ್ರಮಾಣದಲ್ಲಿ ಕೊರೋನಾ ಮುಕ್ತವಾಗ ಬಹುದು ಎಂದು ಡಾ.ಜಗದೀಶ ಜಿಂಗಿ ಸಭೆಗೆ ಮಾಹಿತಿ ನೀಡಿದರು
ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಮಾತನಾಡಿ ಪ್ರವಾಹದಿಂದ ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿಗಳಿಗೆ 80 ರಿಂದ 90 ಸಾವಿರ ಕ್ಯೂಸೆಕ್ಸ ನೀರು ಬಂದು ಗೋಕಾಕ ಮತ್ತು ಮೂಡಲಗಿ ಭಾಗದ ಭಾಗಶಃ ಗ್ರಾಮಗಳು ಮುಳುಗಡೆ ಆಗಿದ್ದು , ಮುಂಜಾಗ್ರತಾ ಕ್ರಮ ಕೈಗೊಂಡಿದ್ದರಿಂದ ಈ ಬಾರಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ, ಗೋಕಾಕ ತಾಲೂಕಿನಲ್ಲಿ ಒಟ್ಟು 8 ಮನೆಗಳಿಗೆ ಹಾನಿಯಾಗಿದ್ದು , ಪ್ರವಾಹದಲ್ಲಿ 4 ಎಮ್ಮೆಗಳು, 11 ಜಾನವಾರುಗಳು ಮರಣ ಹೊಂದಿವೆ. ತಾಲೂಕಿನ ಡುಮ್ಮಉರುಬಿನಟ್ಟಿ ಗ್ರಾಮದ ಹಳದಲ್ಲಿ ಒಬ್ಬ ಯುವಕ ಹರಿದುಹೋಗಿ ಮರಣ ಹೊಂದಿದ್ದಾರೆ‌. ತಾಲೂಕಿನಲ್ಲಿ ಅತಿವೃಷ್ಟಿಯಿಂದ ಒಟ್ಟು 865 ಹೆಕ್ಟರ ಬೆಳೆ ಹಾನಿ ಯಾಗಿದೆ. ಸರ್ವೇಮಾಡಿ ಆದಷ್ಟು ಬೇಗ ಅವರಿಗೆ ಪರಿಹಾರ ನೀಡಲು ಕ್ರಮ ಕೈಗೋಳ್ಳಲಾಗುವದು ಎಂದು ತಹಶೀಲ್ದಾರ ಹೇಳಿದರು .

ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಮಾತನಾಡಿ ವಿಶೇಷ ದಾಖಲಾತಿ ಆದೊಂಲನ ದಲ್ಲಿ ಗೋಕಾಕ ವಲಯದಲ್ಲಿ 49,800 ದಾಖಲಾತಿ ಮಾಡಿಕೊಂಡಿದ್ದು, ಎಲ್ಲಾ ವಿದ್ಯಾರ್ಥಿಗಳಿಗೆ ಈಗಾಗಲೇ ಆಹಾರ ಧಾನ ಮತ್ತು ಪಠ್ಯ ಪುಸ್ತಕ ವಿತರಣೆ ಮಾಡಲಾಗಿದೆ. ವಿದ್ಯಾಭಿಮಾನ ಯೋಜನೆಯಡಿ ಶಿಕ್ಷಕರಿಗೆ ವಿದ್ಯಾರ್ಥಿಗಳ ಮನೆ ಮನೆಗೆ ಕಳುಹಿಸಿ , ವಠಾರ ಶಾಲೆ ಪ್ರಾರಂಭಿಸಲಾಗಿದ್ದು, ಶಿಕ್ಷಕರು ವಿದ್ಯಾರ್ಥಿಗಳಿಗೆ ಹೋಮ ವರ್ಕ ಕೊಟ್ಟು ಬರುತ್ತಿದ್ದಾರೆ. 8 ರಿಂದ 10 ವರೆಗಿನ ವಿದ್ಯಾರ್ಥಿಗಳಿಗೆ ದೂರದರ್ಶನ ಪಾಠ ಮಾಡಲಾಗುತ್ತಿದ್ದೆ ಎಂದು ಮಾಹಿತಿ ನೀಡಿದರು.

ಕೃಷಿ ಇಲಾಖೆ , ಹೆಸ್ಕಾಂ ಇಲಾಖೆ, ಲೋಕೋಪಯೋಗಿ , ಸಮಾಜ ಕಲ್ಯಾಣ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿ ನೀಡಿದರು.

ತಾಲೂಕಿನ ಖನಗಾಂವ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇತ್ತಿಚೇಗೆ ಆಹಾರ ಕಳ್ಳತನ ಮಾಡಿದ ಪ್ರಕರಣದಲ್ಲಿ, ಕಳ್ಳತನ ಮಾಡಿದ ಖಧಿಮರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರು ಬಳ್ಳಾರಿ ನಾಲಾ ಪ್ರವಾಹದಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಯುವಕನ ಕುಟುಂಬಕ್ಕೆ 5ಲಕ್ಷ ರೂಪಾಯಿಗಳ ಪರಿಹಾರ ಧನ ಚೇಕನ್ನು ವಿತರಿಸಿದರು.
ಸಭೆಯಲ್ಲಿ ಗೋಕಾಕ ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ , ಮೂಡಲಗಿ ತಹಶೀಲ್ದಾರ ಡಿ‌.ಜಿ.ಮಹಾಂತ,ತಾ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಿಕ, ಗೋಕಾಕ ಡಿ.ವಾಯ್.ಎಸ್.ಪಿ ಮನೋಜಕುಮಾರ ನಾಯಿಕ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು .

Related posts: